ಅ.3ರಿಂದ ಲಕ್ಷ್ಮೀದೇವಿ ಬೆಟ್ಟದಲ್ಲಿ ನವರಾತ್ರಿ ಉತ್ಸವದ ಸಂಭ್ರಮ

0

ಅ.5: ಹೊಸ ಅಕ್ಕಿ ನೈವೇದ್ಯ ಸಮರ್ಪಣೆ
ಅ.6: ಚಂಡಿಕಾಯಾಗ
ಅ.12: ಆಯುಧ ಪೂಜೆ

ಪುತ್ತೂರು: ಕಾರಣಿಕ ಕ್ಷೇತ್ರ ರೈಲು ನಿಲ್ದಾಣದ ಬಳಿಯ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಅ.3ರಿಂದ ಪ್ರಾರಂಭಗೊಂಡು ಅ.12ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಿಸಲಿದೆ.


ಅ.3ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ಕ್ಷೇತ್ರದ ಪಾಷಾಣಮೂರ್ತಿ, ಗುಳಿಗ ದೈವಗಳಿಗೆ ತಂಬಿಲದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ಸುಳ್ಯಪದವು ಶ್ರೀ ಮಹಾಲಕ್ಷ್ಮೀ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.


ಅ.06ರಂದು ಬೆಳಿಗ್ಗೆ ಗಾನಸಿರಿ ಕಲಾ ಕೇಂದ್ರ ಕಿರಣ್ ಕುಮಾರ್ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಶ್ರೀಲಕ್ಷ್ಮೀದೇವಿ ಭಕ್ತ ವೃಂದದವರಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಅ.5 ಹೊಸ ಅಕ್ಕಿ ನೈವೇದ್ಯ ಸಮರ್ಪಣೆ:
ಉತ್ಸವದಲ್ಲಿ ಅ.5ರಂದು ಬೆಳಿಗ್ಗೆ ಕಾಪುಮಜಲು ಲಸ್ಯ ಮತ್ತು ಬಳಗದವರಿಂದ ಸ್ಯಾಕ್ಸೋಫೋಣ್ ವಾದನ ಮತ್ತು ಕುಣಿತ ಭಜನೆ, ಮಧ್ಯಾಹ್ನ ಮಹಾಪೂಜೆ, ದೇವಿದರ್ಶನ, ದೇವರಿಗೆ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಪ್ರೇಮಲತಾ ಮತ್ತು ಬಳಗ ಶ್ರೀದೇವಿ ನಿಲಯ ಕಟ್ಟೆ ಇವರಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಅ.6 ಚಂಡಿಕಾಯಾಗ:
ನವರಾತ್ರಿ ಉತ್ಸವದಲ್ಲಿ ಪ್ರತಿವರ್ಷ ವಿಶೇಷವಾಗಿ ನಡೆಯುವ ಚಂಡಿಕಾ ಯಾಗವು ಅ.6ರಂದು ನಡೆಯಲಿದೆ. ಬೆಳಿಗ್ಗೆ ಗಣಪತಿ ಹೋಮದ ಬಳಿಕ ಚಂಡಿಕಾಯಾಗ ಪ್ರಾರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ಚಂದ್ರಶೇಖರ ಮತ್ತು ಬಳಗ ಮೂಡಾಯೂರು ಇವರಿಂದ ಸ್ಯಾಕ್ಸೋಫೋಸ್ ವಾದನ, ಮಧ್ಯಾಹ್ನ ಚಂಡಿಕಾಯಾಗ ಪೂರ್ಣಾಹುತಿ, ಮಹಾಪೂಜೆ, ದೇವಿ ದರ್ಶನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಸ್ಫೂರ್ತಿ ಯುವಕ, ಯುವತಿ ಮಂಡಲ ಬನ್ನೂರು ಇವರಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಅ.7ರಂದು ವಿದುಷಿ ಪವಿತ್ರ ರೂಪೇಶ್ ಮತ್ತು ಬಳಗ ಕೊಂಬೆಟ್ಟು ಇವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಲಕ್ಷ್ಮೀದೇವಿ ಭಕ್ತವೃಂದದವರಿಂದ ಭಜನೆ, ಅ.8 ಯಕ್ಷಾಂತರಂಗ ಪೆರ್ಲ ಇವರಿಂದ ವಿಶೇಷ ತಾಳಮದ್ದಳೆ, ಮಧ್ಯಾಹ್ನ ಮಹಾಪೂಜೆ, ದೇವಿದರ್ಶನ, ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ, ಅ.9ರಂದು ಸತ್ಯಶಾಂತಾ ಭಜನಾ ಮಂಡಳಿಯವರಿಂದ ಭಜನೆ, ಅಕ್ಷರಾಭ್ಯಾಸ, ಮಧ್ಯಾಹ್ನ ಮಹಾಪೂಜೆ, ದೇವಿ ಪಾರಾಯಣ, ಸಂಜೆ ಭಜನೆ, ಅ.10ರಂದು ಮಹಾಲಿಂಗೇಶ್ವರ ಭಜಕ ಮಂಡಳಿ ಪುತ್ತೂರು ಇವರಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ, ಅ.11ರಂದು ವಿದ್ಯಾಸಾಗರ್ ಕಲಾಶಾಲೆ ಕುಕ್ಕೆ ಸುಬ್ರಹ್ಮಣ್ಯ ಇವರಿಂದ ಭಜನೆ, ಪದ್ಮನಾಭ ಅರಿಯಡ್ಕ ಇವರಿಂದ ಸ್ಯಾಕ್ಸೋಫೋನ್ ವಾದನ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭಜನೆ, ಮಹಾಪೂಜೆ ನಡೆಯಲಿದೆ.


ಅ.12 ಆಯುಧ ಪೂಜೆ:
ಅ.12ರಂದು ಉತ್ಸವದಲ್ಲಿ ಬೆಳಿಗ್ಗೆ ತುಲಾಭಾರ ಸೇವೆ, ವಜ್ರಮಾತಾ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಆಯುಧ ಪೂಜೆ, ಲಕ್ಷ್ಮೀದೇವಿ ಭಕ್ತವೃಂದದವರಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ನವರಾತ್ರಿ ಉತ್ಸವವು ಸಂಪನ್ನಗೊಳ್ಳಲಿದೆ. ಉತ್ಸವದಲ್ಲಿ ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಧರ್ಮದರ್ಶಿ ಐತ್ತಪ್ಪ ಸಪಲ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here