ಪುತ್ತೂರು: ತಾಲೂಕಿನ ಹಿರೇಬಂಡಾಡಿ ಗ್ರಾಮದ ಪಲ್ಲೆಜಾಲು ನಿವಾಸಿ ಸೇನಾಧಿಕಾರಿ ಸತೀಶ. ಪಿ. ರವರು ಸೆ.30(ಇಂದು) ಸೇನಾವೃತ್ತಿಯಿಂದ ನಿವೃತ್ತಿಗೊಂಡರು.
ಕಳೆದ 24 ವರ್ಷಗಳಿಂದ ಭಾರತದ ವಿವಿಧ ಪ್ರದೇಶಗಳಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಇವರು ಪಲ್ಲೆಜಾಲುವಿನ ಅಣ್ಣು ಗೌಡ ಹಾಗೂ ಸೀತಮ್ಮ ದಂಪತಿಗಳ ಪುತ್ರರಾಗಿದ್ದಾರೆ.
2000ದಲ್ಲಿ ಮಹಾರಾಷ್ಟ್ರದ ಆರ್ಟಿಲರಿ ಸೆಂಟರ್ ನಾಸಿಕ್ ರೋಡ್ ಕ್ಯಾಂಪ್ ನಲ್ಲಿ ಸೇನಾ ತರಬೇತಿ ಮುಗಿಸಿ ನಂತರ ವಿವಿಧ ಪ್ರದೇಶಗಳಲ್ಲಿ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2024ನೇ ಜೂ. 20ರಿಂದ ಪಂಜಾಬ್ ನ ಫಿರೋಜ್ಪುರ್ ಕ್ಯಾಂಟ್ 310 FD ರೆಜಿಮೆಂಟ್ ನಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದು ಇಂದು(ಸೆ.30) ಸೇವೆಯಿಂದ ನಿವೃತ್ತಿ ಹೊಂದಿದರು.
ಸತೀಶ ಪಿ. ಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಬಂಡಾಡಿಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಉಪ್ಪಿನಂಗಡಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿಯಲ್ಲಿ ಪೂರೈಸಿದ್ದಾರೆ. ಸೈನಿಕ ವೃತ್ತಿಯಲ್ಲಿ ಸೇನಾಧಿಕಾರಿಯಾಗಿ MACP NB/ SUB ಎಂಬ ರ್‍ಯಾಂಕ್ ಗಳಿಸಿರುತ್ತಾರೆ.
ಸತೀಶ್ ಪಿ.ರವರ ಪತ್ನಿ ಪ್ರಸನ್ನ ಶಿಕ್ಷಣ ಮಹಾವಿದ್ಯಾಲಯ ಬೆಳ್ತಂಗಡಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಭರತನಾಟ್ಯ ಕಲಾವಿದೆ ವಿದುಷಿ ಪ್ರಥ್ವಿ ಸತೀಶ್ ಹಾಗೂ ಪುತ್ರಿ ಬೇಬಿ ಚೈಶ್ವಿ ಎಸ್ ರವರೊಂದಿಗೆ ಹಿರೇಬಂಡಾಡಿ ಗ್ರಾಮ ಪಲ್ಲೆಜಾಲುವಿನ ವಾಸಿಸುತ್ತಿದ್ದಾರೆ.