ಪುತ್ತೂರು: ಅ.2ರಂದು ದೆಹಲಿಯಲ್ಲಿ ನಡೆಯಲಿರುವ ’ಸ್ವಚ್ಛ ಭಾರತ್ ದಿವಸ್ ಆಚರಣೆಗಾಗಿ’ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಪುತ್ತೂರು ನಗರಸಭೆಯ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ನಿಯೋಜನೆಗೊಂಡಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ದೆಹಲಿಯ ವಿಜ್ಞಾನ ಭವನದಲ್ಲಿ ಅ.2ರಂದು ನಡೆಯುವ ಸ್ವಚ್ಛತಾ ಹೀ ಸೇವಾ 2024 ಮತ್ತು ಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾ ಭಾಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಕರ್ನಾಟಕದಿಂದ ಒಟ್ಟು 10 ಮಂದಿಯನ್ನು ನಿಯೋಜನೆ ಮಾಡಲಾಗಿದೆ.
ಅದರಲ್ಲಿ ಜೊಯಿಂಟ್ ಡೈರೆಕ್ಟರ್, ಮುನ್ಸಿಪಲ್ ಎಡ್ಮಿನ್ಸ್ಟ್ರೇಟಿವ್ ಡೈರೆಕ್ಟರ್, ಚಿತ್ರದುರ್ಗ, ಹಾವೇರಿಯ ಮುನ್ಸಿಪಲ್ ಕಮಿಷನರ್ ಹಾಗು ಬೆಂಗಳೂರು ಅರ್ಬನ್, ಕೊಡಗು, ಚಾಮರಾಜನಗರದ ಪೌರ ಕಾರ್ಮಿಕರನ್ನು ಮತ್ತು ದಕ್ಷಿಣ ಕನ್ನಡದಿಂದ ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಭಾಗವಹಿಸುವಂತೆ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಸ್ವಚ್ಛ ಭಾರತ ಮಿಷನ್ ನ ರಾಜ್ಯ ಯೋಜನಾ ನಿರ್ದೇಶಕರು ಪತ್ರ ಕಳುಹಿಸಿದ್ದಾರೆ. ಸೆ.30ರಂದು ರಾತ್ರಿ ಅವರು ಬೆಂಗಳೂರಿಗೆ ತೆರಳಿ ಅಲ್ಲಿಂದ ದೆಹಲಿಗೆ ತೆರಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.