ಪುತ್ತೂರು:ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ ಇದರ ಅಂಗ ಸಂಸ್ಥೆಯಾದ ಪುತ್ತೂರು ಕೊಂಬೆಟ್ಟು ಮರಾಟಿ ಮಹಿಳಾ ವೇದಿಕೆ ಇದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಪುತ್ತೂರಿನ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಮೀನಾಕ್ಷಿ ಮಂಜುನಾಥ್ ಉಪ್ಪಳಿಗೆ, ಕಾರ್ಯದರ್ಶಿಯಾಗಿ ವಸಂತಿ ಪಿ.ಕೆ, ಕೋಶಾಧಿಕಾರಿಯಾಗಿ ಲಲಿತಾ ಅಶೋಕ್ ಬಲ್ನಾಡು, ಉಪಾಧ್ಯಕ್ಷರಾಗಿ ಯಶೋಧಾ ಕೃಷ್ಣ ನಾಯ್ಕ, ಜೊತೆ ಕಾರ್ಯದರ್ಶಿಯಾಗಿ ಹೇಮಾವತಿ , ಸಂಘಟನಾ ಕಾರ್ಯದರ್ಶಿಗಳಾಗಿ ಲಕ್ಷ್ಮೀ ಕೊಡಿಪ್ಪಾಡಿ,ಲತಾ ಗೋವಿಂದ, ವಿಜಯ ಪರ್ಲಡ್ಕ, ವಿಜಯ. ವಿ ಕ್ರೀಡಾ ಕಾರ್ಯದರ್ಶಿಗಳಾಗಿ ಸುಬ್ಬಕ್ಕ ಅಪೂರ್ವ ಲೇ ಔಟ್ , ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಗೌರಿ ಬರೆಪ್ಪಾಡಿ ಆಯ್ಕೆಯಾದರು.
ಸದಸ್ಯರಾಗಿ ಕಿಶೋರಿ ದುಗ್ಗಪ್ಪ ನಾಯ್ಕ್, ಚೇತನಾ ಲೋಕಾನಂದ, ಯಮುನಾ ಪಟ್ಟೆ, ಮೋಹಿನಿ ಬಲ್ನಾಡು, ಶ್ಯಾಮಲಾ ಬಿ, ಸಾವಿತ್ರಿ ಶೀನಪ್ಪ ನಾಯ್ಕ, ರೇವತಿ.ಪಿ, ಪ್ರೇಮಾ ಟಿ. ನಾಯ್ಕ್ ಸಾಮೆತಡ್ಕ, ಹರಿಣಾಕ್ಷಿ, ಪುಷ್ಪಲತಾ , ಸ್ಮಿತಾ, ಲಲಿತಾ ವೈ, ಶಶಿಕಲಾ ಕುರಿಯ, ಸುನಂದಾ ಏಣಿತಡ್ಕ, ವಿದ್ಯಾ ಲಕ್ಷ್ಮೀ ಏಣಿತಡ್ಕ, ಸೇಸಮ್ಮ ಉಪ್ಪಳಿಗೆ ಆಯ್ಕೆಯಾದರು.
ವೇದಿಕೆಯಲ್ಲಿ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ದುಗ್ಗಪ್ಪ ನಾಯ್ಕ್ ಬಡಾವು, ಕಾರ್ಯದರ್ಶಿಗಳಾದ ಶೀನಪ್ಪ ನಾಯ್ಕ ಕೋಶಾಧಿಕಾರಿ ಮೋಹನ ನಾಯ್ಕ್ ಎಂ ಉಪಸ್ಥಿತರಿದ್ದರು. ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು, ಮರಾಟಿ ಯುವ ವೇದಿಕೆ ಮತ್ತು ಮರಾಟಿ ಮಹಿಳಾ ವೇದಿಕೆಯ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಮರಾಟಿ ಸಮಾಜ ಬಾಂಧವರು ಉಪಸ್ಥಿತರಿದ್ದರು.