ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಪ್ರಾರಂಭ-ಗಣಪತಿ ಹವನ,ಬಲಿವಾಡು ಹುಂಡಿ ಸಮರ್ಪಣೆ

0

ಪುತ್ತೂರು : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯು ಅ 2 ರಂದು ಪ್ರಾರಂಭಗೊಂಡಿದ್ದು,ಅ.12 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.


ಅ. 2 ರಂದು ಬೆಳಿಗ್ಗೆ ಗಣಪತಿ ಹವನ ,ಹುಂಡಿ ಸಮರ್ಪಣೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪೂಜಾ ಕಾರ್ಯ ನೆರವೇರಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ,ಹಾಗೂ ಭಕ್ತಾದಿಗಳು,ದೇವಸ್ಥಾನದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಅ.02 ರಿಂದ ಅ.13 ರವರೆಗೆ ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅ.13 ರಂದು ಪೂರ್ವಾಹ್ನ ಗಂಟೆ 8.00 ರಿಂದ ಅಕ್ಷರಾಭ್ಯಾಸ ನಡೆಯಲಿದೆ ಎಂದು ದೇವಾಲಯದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here