ಬುರೂಜ್ ಶಾಲೆ: ಗಾಂಧಿ ಜಯಂತಿ ಆಚರಣೆ

0

puttur:ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಮಾಡಲಾಯಿತು.

ಮುಖ್ಯ ಶಿಕ್ಷಕಿ ಜಯಶ್ರೀ ಬಿ ಸಾಲ್ಯಾನ್ ಸಮ್ಮುಖದಲ್ಲಿ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸರ್ವಧರ್ಮ ಪ್ರಾರ್ಥನೆ ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಚತೆಯ ಮಹತ್ವನ್ನು ಚಂದ್ರಾವತಿ ಮತ್ತು ಶೇಖ್ ಜಲಾಲುದ್ದೀನ್ ತಿಳಿಯಪಡಿಸಿದರು. ಈ ಸಂದರ್ಭದಲ್ಲಿ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್, ನೂರ್ ಜಹಾನ್,ಎಸ್.ಪಿ.ರಝೀಯ, ಶೇಖ್ ಸಾದಿಯ, ಖುರ್ಷಿದ್, ಅನ್ನಪೂರ್ಣೇಶ್ವರಿ,ಮಮತಾ ಆರ್, ವನಿತಾ ಶೆಟ್ಟಿ, ಚೇತನಾ, ಎಲ್ಸಿ ಲಸ್ರಾದೋ, ಆಯಿಷಾ ರಿಫಾನ, ಪ್ರತೀಕ್ಷಾ,ಸಮೀನಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here