ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದಿಂದ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

0

ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದಿಂದ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ದಿನಾಚರಣೆ ಆಚರಿಸಲಾಯಿತು.

ಡಾ. ಮಾಧವ ಭಟ್ ಹೆಚ್. ದೀಪ ಪ್ರಜ್ವಲನೆ ಮಾಡಿದರು. ಸುಂದರ ನಾಯ್ಕ್ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಪ್ರೊ. ದತ್ತಾತ್ರೇಯ ರಾವ್ ಗಾಂಧೀಜಿಯವರ ಬಗ್ಗೆ ಉಪನ್ಯಾಸ ನೀಡಿ ಗಾಂಧೀಜಿಯವರು ಇಡೀ ವಿಶ್ವವೇ ಒಪ್ಪಿಕೊಂಡ, ಯಾವುದೇ ಹುದ್ದೆಗಳನ್ನು ಅಲಂಕರಿಸದ ಅಪ್ಪಟ ಮಾನವತಾವಾದಿ, ಅಹಿಂಸಾತತ್ವದ ಪ್ರತಿಪಾದಕ, ಸತ್ಯ, ಶಾಂತಿ, ನೈರ್ಮಲ್ಯದ ಹರಿಕಾರ, ಸ್ವಾವಲಂಬನೆಯ ಪ್ರತೀಕ, ಸತ್ಯಾಗ್ರಹ ಅಸ್ತ್ರವನ್ನು ಅಹಿಂಸಾ ಮಾರ್ಗದಲ್ಲಿ ಬಳಸಿ ಬೋಧಿಸಿದ ಮತ್ತು ಉಳಿದ ಅನೇಕ ಜಾಗತಿಕ ನಾಯಕರುಗಳಿಗೆ ಸ್ಪೂರ್ತಿಯ ಸೆಲೆಯಾದ ಆದರ್ಶಗಳ ಐಕಾನ್ ಆಗಿ ಹೊರಹೊಮ್ಮಿದ ಪ್ರಪಂಚ ಕಂಡ ಒಬ್ಬ ಮಹಾನ್ ನಾಯಕ ಎಂದು ಹೇಳಿದರು.

ಶಾಸ್ತ್ರಿಯವರು ಅಪ್ರತಿಮ ಆಡಳಿತಗಾರ, ಅಪ್ಪಟ ದೇಶಾಭಿಮಾನಿ, ಬಡತನದಲ್ಲೇ ಹುಟ್ಟಿ, ಬೆಳೆದವರು. ಗಾಂಧೀಜಿಯ ಅನುಯಾಯಿ. ಗಾಂಧೀಜಿಯವರಿಂದ ಪ್ರಭಾವಿತರಾಗಿ, ಚಳವಳಿಯಲ್ಲಿ ಭಾಗಿಯಾಗಿದ್ದರು. ಕೇಂದ್ರ ಸಂಪುಟದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು. ರೈಲ್ವೆ ಸಚಿವರಾಗಿದ್ದಾಗ ನಡೆದ ದುರಂತದ ಕಾರಣಕ್ಕಾಗಿ ಹೊಣೆ ಹೊತ್ತು ರಾಜಿನಾಮೆ ಕೊಟ್ಟಿದ್ದರು .18ತಿಂಗಳು ಮಾತ್ರ ಪ್ರಧಾನಿಯಾಗಿದ್ದರು ಎಂದರು. ಸಂಘದ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್ ಮಾತನಾಡಿದರು. ಜಗನ್ನಾಥ ರೈ ಸ್ವಾಗತಿಸಿ ತಿರುಮಲೇಶ್ವರ ಭಟ್ ವಂದಿಸಿದರು. ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here