ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಉದ್ಯೋಗ ತರಬೇತಿ ಕಾರ್ಯಾಗಾರ

0

ನೆಲ್ಯಾಡಿ: ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕಾಲೇಜಿನ ‘ವೃತ್ತಿ ಮಾರ್ಗದರ್ಶನ ಮತ್ತು ಸಮಾಲೋಚನಾ’ ಸಮಿತಿಯ ಉದ್ಘಾಟನಾ ಕಾರ್ಯ ಮತ್ತು ಉದ್ಯೋಗ ತರಬೇತಿ ಕಾರ್ಯಾಗಾರವು ಅ.3ರಂದು ನಡೆಯಿತು.


ವಿವಿ ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನಡೆಯಿತು. ಉದ್ಯೋಗ ಪ್ರತಿಯೊಬ್ಬರಿಗೂ ಅಗತ್ಯ. ಹಾಗಾಗಿ ವೃತ್ತಿ ಮಾಹಿತಿಯು ಬಹಳ ಮುಖ್ಯವಾದದ್ದು ಎಂಬುದರ ನೆಲೆಯಲ್ಲಿ ಸಮಿತಿಯ ಕಾರ್ಯಚಟುವಟಿಕೆಯ ಕುರಿತು ಮಾತಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಡಾ. ಅಜಯ್ ಆರ್ಯನ್, ಜನರಲ್ ಮ್ಯಾನೇಜರ್, ಸ್ಪ್ರಿಂಗ್ ಇನ್ಸ್ಟಿಟ್ಯೂಟ್ ಮಂಗಳೂರು ಇವರು ಹಲವು ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ಒದಗಿಸಿ ಶುಭ ಹಾರೈಸಿದರು. ಉದ್ಯೋಗ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳ ಬಗ್ಗೆ ವಿಸ್ತೃತ ಮಾಹಿತಿ ಒದಗಿಸಿದರು. ಉದ್ಯೋಗ ಪಡೆದುಕೊಳ್ಳಬೇಕಾದಲ್ಲಿ ಇರಬೇಕಾದ ಮೂಲಭೂತ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. ಇದರ ಜತೆ ಪದವಿ ನಂತರದಲ್ಲಿ ವೃತ್ತಿ ಆಧಾರಿತ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್, ಲಾಜಿಸ್ಟಿಕ್ಸ್ ಮೊದಲಾದ ಹೊಸ ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮದಲ್ಲಿ ‘ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನಾ’ ಸಮಿತಿಯ ಸಂಚಾಲಕರಾದ ಡಾ. ಸೀತಾರಾಮ ಪಿ ಎಲ್ಲರನ್ನೂ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಸಚಿನ್ ಎನ್. ಟಿ. ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ವೆರೋನಿಕಾ ಪ್ರಭಾ ಅತಿಥಿಗಳನ್ನು ಪರಿಚಯಿಸಿದರು. ಪಾವನ ರೈ ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದಲ್ಲಿ ಶೆರ್ಲಿ ಅಬ್ರಾಹಂ, ಮಾರ್ಕೆಟಿಂಗ್ ಆಫೀಸರ್, ಸ್ಪ್ರಿಂಗ್ ಇನ್ಸ್ಟಿಟ್ಯೂಟ್ ಮಂಗಳೂರು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here