ದೆಹಲಿಯ ವಿಜ್ಞಾನ ಭವನದಲ್ಲಿ ಕರ್ನಾಟಕ, ಪುತ್ತೂರಿನ ಕುರಿತು ಪ್ರಸ್ತಾಪಿಸುವ ಅವಕಾಶ ಸಿಕ್ಕಿದು ಸಂತೋಷ ತಂದಿದೆ – ಮಧು ಎಸ್ ಮನೋಹರ್

0

ಪೌರಾಯುಕ್ತ ಮಧು ಎಸ್ ಮನೋಹರ್ ಅವರಿಗೆ ನಗರಸಭೆಯಲ್ಲಿ ಗೌರವ

ಪುತ್ತೂರು: ಪುತ್ತೂರು ನಗರವನ್ನು ದೇಶದಾದ್ಯಂತ ತೋರಿಸುವ ಅವಕಾಶ ಲಭಿಸಿದ್ದು ಸಂತೋಷ. ಈ ಕುರಿತು ನಿರ್ದೇಶಕರು ಮುಂದಿನ ದಿನಗಳಲ್ಲಿ ಪುತ್ತೂರಿಗೆ ಭೇಟಿ ನೀಡಲಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ತಿಳಿಸಿದ್ದಾರೆ.


ದೇಶದಲ್ಲಿ 10ನೇ ವರ್ಷದ ಸ್ವಚ್ಚಭಾರತ ದಿನಾಚರಣೆ ಅಂಗವಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ದೆಹಲಿಯ ವಿಜ್ಞಾನ ಭವನದಲ್ಲಿ ಅ.2ರಂದು ನಡೆಯುವ ಸ್ವಚ್ಛ ಭಾರತ‌‌ ದಿನಾಚರಣೆ – ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅ.4 ರಂದು ಪುತ್ತೂರು ನಗರಸಭೆ ಕಚೇರಿಗೆ ಆಗಮಿಸಿದ ವೇಳೆ ದೆಹಲಿಯ ಅನುಭವ ಹಂಚಿಕೊಂಡರು.

ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತ, ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಮೊದಲನೆ ಬಾರಿ ಅವಕಾಶ ಲಭಿಸಿದೆ. ಈ ಸಂದರ್ಭ ಅವರು ಸ್ಚಚ್ಛತೆ ಅರಿವು ಕಾರ್ಯಕ್ರಮ ಮುಂದುವರಿಯಲಿದೆ ಎಂದು ಪ್ರಧಾನ ಮಂತ್ರಿಗಳು ಎಲ್ಲಾ ರಾಜ್ಯಗಳಿಂದ ಬಂದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ ಅಭಿಪ್ರಾಯ ಪಡೆದರು.‌

ಈ ಸಂದರ್ಭ ಕರ್ನಾಟಕ ಮತ್ತು ಪುತ್ತೂರಿನ ಸ್ವಚ್ಚತೆ ಕುರಿತು ಪ್ರಸ್ತಾಪ ಮಾಡಲು ನನಗೂ ವೇದಿಕೆ ಲಭಿಸಿತು. ನಾನು ಕರ್ನಾಟಕ ಮತ್ತು ಪುತ್ತೂರಿನ ಕುರಿತು ಪ್ರಸ್ತಾಪ ಮಾಡಿರುವುದು ಸಂತೋಷ ಆಗಿದೆ. ಪುತ್ತೂರು ನಗರವನ್ನು ದೇಶದಾದ್ಯಂತ ತೋರಿಸುವ ಯೋಜನೆ ಮಾಡಿದ್ದೇವೆ. ಈ ಕುರಿತು ನಿರ್ದೇಶಕರಿಗೆ ಮಾಹಿತಿ ನೀಡಿದ್ದೇನೆ. ಅವರು ಮುಂದೆ ಪುತ್ತೂರಿಗೆ ಬರುವ ಆಶ್ವಾಸನೆ ನೀಡಿದ್ದಾರೆ. ಪುತ್ತೂರಿನಲ್ಲಿ ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಮತ್ತು ರೋಟರಿ ಕ್ಲಬ್ ವತಿಯಿಂದ ಆಗುತ್ತಿರುವ ಸಿ ಎನ್ ಜಿ ಗ್ಯಾಸ್ ಅನುಷ್ಠಾನ ಮಾಡುತ್ತಿದ್ದೇವೆ ಎಂದು ಅವರಿಗೆ ಮಾಹಿತಿ ನೀಡಿದ್ದೇವೆ ಎಂದವರು ಹೇಳಿದರು.


ಪೌರಾಯುಕ್ತರಿಗೆ ಗೌರವ:
ಪುತ್ತೂರಿನ ಸ್ವಚ್ಚತೆ ಕುರಿತು ದೆಹಲಿಯಲ್ಲಿ ಗಮನ ಸೆಳೆದ ಮತ್ತು ಪುತ್ತೂರಿನ ಯೋಜನೆ ಕುರಿತು ಮಾಹಿತಿ ನೀಡಿ ಪುತ್ತೂರನ್ನು ದೇಶದಲ್ಲಿ ಗುರುತಿಸುವಂತೆ ಮಾಡಿದ ಪೌರಾಯುಕ್ತ ಮಧು ಮನೋಹರ್ ಅವರನ್ನು ಇದೆ ಸಂದರ್ಭ ನಗರಸಭೆ ಸದಸ್ಯ ಯುಸೂಪ್ ಡ್ರೀಮ್, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ಸಹಿತ ನಗರಸಭೆ ಸಿಬ್ಬಂದಿಗಳು ಗೌರವಿಸಿದರು.

LEAVE A REPLY

Please enter your comment!
Please enter your name here