ಪುತ್ತೂರು: ತುಳು ರಂಗಭೂಮಿಯಲ್ಲಿ ಪ್ರತಿಷ್ಠಿತ ತಂಡವಾಗಿ ಗುರುತಿಸಿಕೊಂಡಿರುವ ಬಾಲಕೃಷ್ಣ ಪೂಜಾರಿ ಪೆರುವಾಯಿ ನಿರಾಲ ಸಾರಥ್ಯದ ಗಯಾಪದ ಕಲಾವಿದೆರ್ ಉಬಾರ್ ಇವರ ಅಭಿನಯದ ಈ ವರ್ಷದ ನೂತನ ಕಲಾಕಾಣಿಕೆ ನಾಗಮಾಣಿಕ್ಯ ಕಾಲ್ಪನಿಕ ಚಾರಿತ್ರಿಕ ನಾಟಕ ಅ.6ರಂದು ರಾತ್ರಿ 10 ಗಂಟೆಗೆ ಕೋಡಿಂಬಾಡಿಯ ಮಠಂತಬೆಟ್ಟು ಶ್ರೀಮಹಿಷ ಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ರಂಗಾರ್ಪಣೆಗೊಳ್ಳಲಿದೆ.
ತುಳುರಂಗಭೂಮಿಯಲ್ಲಿ ವಿಭಿನ್ನ ಶೈಲಿಯ ರಂಗ ವೈವಿಧ್ಯತೆಯಿಂದ ಕುತೂಹಲಕಾರಿ ಸನ್ನಿವೇಶದೊಂದಿಗೆ ನಾಗದೇವತೆಯ ಕಥಾವಸ್ತುವಿನೊಂದಿಗೆ ಕಾಲ್ಪನಿಕ ಚಾರಿತ್ರಿಕ ನಾಟಕವನ್ನು ನೂರಾರು ನಾಟಕಗಳನ್ನು ತುಳು ರಂಗಭೂಮಿಗೆ ಪರಿಚಯಿಸಿದ ಕಲಾತಪಸ್ವಿ ರವಿಶಂಕರ ಶಾಸ್ತ್ರಿ ಮಣಿಲ ಪುಣಚರವರು ರಚಿಸಿ ನಿರ್ದೇಶನ ಮಾಡಿದ್ದು ಅದ್ಧೂರಿ ನಾಟಕವಾಗಿ ಮೂಡಿ ಬರುವಂತೆ ಮಾಡಿದ್ದಾರೆ. ಈ ನೂತನ ಶೈಲಿಯ ನಾಟಕಕ್ಕೆ ಸಂಗೀತ ಮಾಂತ್ರಿಕ ಕಾರ್ತಿಕ್ ಶಾಸ್ತ್ರಿ ಮಣಿಲ ಇವರ ವಿಭಿನ್ನ ಶೈಲಿಯ ಸಂಗೀತವಿದೆ.
ರಂಗಾರ್ಪಣೆಯ ಸಮಾರಂಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್,ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಮೊಕ್ತೇಸರ ಯು.ಜಿ.ರಾಧ, ನಾಟಕದ ರಚನೆಕಾರ ರವಿಶಂಕರ ಶಾಸ್ತ್ರಿ ಮಣಿಲ, ನಾಟಕ ತಂಡದ ಯಜಮಾನ ಬಾಲಕೃಷ್ಣ ಪೂಜಾರಿ ಪೆರುವಾಯಿ ನಿರಾಲ, ತಂಡದ ಸಂಚಾಲಕ ಕಿಶೋರ್ ಕುಮಾರ್ ಜೋಗಿ ಭಾಗವಹಿಸಲಿದ್ದಾರೆ.
ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ ಅವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ ಅಭೂತಪೂರ್ಣ ವಿಶೇಷ ಸೆಟ್ಟಿಂಗ್ ಪರಿಕಲ್ಪನೆ ವ್ಯವಸ್ಥೆಯೊಂದಿಗೆ ಲಿತು ಆರ್ಟ್ಸ್ ಶಾಂತಿನಗರ ಇವರ ರಂಗಾಲಂಕಾರ, ಧ್ವನಿ ಮತ್ತು ಬೆಳಕು ಸಂಯೋಜನೆಯಲ್ಲಿ ಲಿತು ಸೌಂಡ್ಸ್ ಶಾಂತಿನಗರ ಇದರ ಕೃಷ್ಣ ಮತ್ತು ಸಿದ್ದು ಬೆದ್ರ ಕಾರ್ಯ ನಿರ್ವಹಿಸಲಿದ್ದಾರೆ. ಪ್ರದೀಪ್ ಕಾವು ಇವರು ವರ್ಣಾಲಂಕಾರ ಮಾಡಲಿದ್ದಾರೆ.
ತಂಡದ ಕಲಾವಿದರಾಗಿ ರಾಜೇಶ್ ಶಾಂತಿನಗರ, ಕಿಶೋರ್ ಜೋಗಿ ಉಬಾರ್, ಬಿ.ರಂಗಯ್ಯ ಬಲ್ಲಾಳ ಕೆದಂಬಾಡಿ ಬೀಡು, ಲಕ್ಷ್ಮಣ ಬೆಳ್ಳಿಪ್ಪಾಡಿ, ದಿವಾಕರ ಸುರ್ಯ ಪೆರ್ನೆ, ಅನೀಶ್ ಉಬಾರ್, ಉದಯ್ ಆರ್. ಪುತ್ತೂರು, ಚೇತನ್ ಪಡೀಲ್, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಸಂಧ್ಯಾಶ್ರೀ ಪೆರಿಯಡ್ಕ, ಕು. ಅನುಷಾ ಜೋಗಿ ಪುರುಷರಕಟ್ಟೆ ಹಾಗೂ ಬಾಲನಟನಾಗಿ ಮಾ. ಲಿತಿನ್ ಶಾಂತಿನಗರ ಅಭಿನಯಿಸಲಿದ್ದಾರೆ.
ಕಳೆದ ವರ್ಷ ತುಳು ಮುರಳಿ ಈ ಪಿರ ಬರೋಲಿ ನಾಟಕದ ಮೂಲಕ ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ ತಂಡದ ನೂತನ ಕಲಾಕಾಣಿಕೆ ನಾಗಮಾಣಿಕ್ಯ ತಂಡಕ್ಕೆ ಕಲಾಭಿಮಾನಿಗಳು,ಕಲಾಪೋಷಕರು, ಸಂಘಸಂಸ್ಥೆಗಳು, ಸರ್ವರೀತಿಯ ಸಹಕಾರ ನೀಡಿ ಪೌರಾಣಿಕ ಹಿನ್ನೆಲೆಯುಳ್ಳ ಕಾಲ್ಪನಿಕ ಚಾರಿತ್ರಿಕ ಈ ನಾಟಕಕ್ಕೆ ಪ್ರೋತ್ಸಾಹವನ್ನು ನೀಡಬೇಕೆಂದು ತಂಡದ ಸಂಚಾಲಕ ಕಿಶೋರ್ ಜೋಗಿ ವಿನಂತಿಸಿದ್ದಾರೆ.