ಪಡುಮಲೆ ಶ್ರೀ ಕ್ಷೇತ್ರ ಮದಕ ಶ್ರೀ ರಾಜರಾಜೇಶ್ವರಿ ಸನ್ನಿಧಿಯಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವ

0

ಬಡಗನ್ನೂರು:ಪಡುಮಲೆ  ಶ್ರೀ ಕೂವೆ ಶಾಸ್ತಾರ  ವಿಷ್ಣುಮೂರ್ತಿ ದೇವರು ಕುರ್ಮಾವಾತರ ತಾಳಿದ ಮೂಲಸ್ಥಾನ ಶ್ರೀ ಕ್ಷೇತ್ರ ಮದಕ  ಶ್ರೀ ರಾಜರಾಜೇಶ್ವರಿ ಸನ್ನಿಧಿಯಲ್ಲಿ  2 ನೇ ವರ್ಷದ  ಶ್ರೀ ಶರನ್ನವರಾತ್ರಿ ಮಹೋತ್ಸವ ಸಂಭ್ರಮ ಕಾರ್ಯಕ್ರಮವು ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಮತ್ತು ವೇದಮೂರ್ತಿ ಕುಂಟಾರು ರವೀಶ ತಂತ್ರಿವರಿಯರ ಮಾರ್ಗದರ್ಶನದಲ್ಲಿ  ಅ.3 ರಂದು ವಿಜೃಂಭಣೆಯಿಂದ ನಡೆಯಿತು.

ವೈಭವದ ಮೆರವಣಿಗೆ;-
ಆಶ್ವಯುಜ ಶುದ್ಧ ,3 ರಂದು ಸಂಜೆ ಗಂ 4 ಕ್ಕೆ. ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಿಂದ ಭಜನೆ ಹಾಗೂ ವಾದ್ಯಘೋಷಗಳೊಂದಿಗೆ ಮದಕ ರಾಜರಾಜೇಶ್ವರಿ ಸಾನಿಧ್ಯಕ್ಕೆ ವೈಭವದ ಮೆರವಣಿಗೆ ಮೂಲಕ ಸಾಗಿ ಬರಲಾಯಿತು.

ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್  ಶ್ರೀ ರಾಜರಾಜೇಶ್ವರಿ ಗುಡಿಯಲ್ಲಿ ದೀಪ ಪ್ರಜ್ವಲಿಸುವ ಮೂಲಕ  ಆಶ್ವಯುಜ ಶುದ್ಧ ದಶಮಿ 11 ರ ತನಕ ಪರ್ಯಂತವಾಗಿ 9 ದಿವಸಗಳ ಕಾಲ ನಡೆಯುವ  ಶ್ರೀ ಶರನ್ನವರಾತ್ರಿ ಮಹೋತ್ಸವ  ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆರಂಭದಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ಶ್ರೀ ದೇವರಿಗೆ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ವೈಭವದ ಮೆರವಣಿಗೆ ಚಾಲನೆ ನಡೆಯಿತು.ಮದಕ ಶ್ರೀ ಕ್ಷೇತ್ರದಲ್ಲಿ ಸರ್ವಶಕ್ತಿ ಮಹಿಳಾ ಭಜನಾ ಮಂಡಳಿ ಪಡುಮಲೆ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ, ಬಳಿಕ ವೈದಿಕ ಸಮಿತಿ ಸದಸ್ಯರಿಂದ ಸಹಸ್ರನಾಮಾದಿ ಪಾರಾಯಣ ನಡೆದು ಶ್ರೀ ರಾಜರಾಜೇಶ್ವರಿ ತಾಯಿಗೆ ವಿಶೇಷ ಹೂವಿನ ಪೂಜೆ,  ಅಲಂಕಾರ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ  ನಡೆಯುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.

ಈ ಸಂದರ್ಭದಲ್ಲಿ  ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು,  ಶ್ರೀ ಶರನ್ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಳ್ವ ಗಿರಿಮನೆ,, ಕಾರ್ಯದರ್ಶಿ ಗಂಗಾಧರ ರೈ ಮೇಗಿನಮನೆ,  ಕೋಶಾಧಿಕಾರಿ ಶಿವಕುಮಾರ್ ಮೂಂಡೋಳೆ,  ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು   ಮಹಿಳಾ ಸಮಿತಿ ಅಧ್ಯಕ್ಷ ಶಂಕರಿ ಪಟ್ಟೆ, ಸ್ವಯಂ ಕಾರ್ಯಕರ್ತರಾದ  ಸುರೇಶ್ ರೈ ಪಲ್ಲತ್ತಾರು, ರಾಜೇಶ್ ರೈ ಮೇಗಿನಮನೆ, ರಘುರಾಮ ಪಾಟಾಳಿ ಶರವು, ಪುಷ್ಪರಾಜ ಆಳ್ವ ಗಿರಿಮನೆ,  ಮತ್ತು ಊರ ಹಾಗೂ ಪರವೂರ  ಭಕ್ತಾದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here