ದಾರುಲ್ ಹಸನಿಯಾ ಅಕಾಡೆಮಿ ದಮಾಮ್ ಘಟಕ ರಚನೆ

0

ಪುತ್ತೂರು: ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯ ಸೌದಿ ಅರೇಬಿಯಾದ ದಮಾಮ್ ನ ನೂತನ ಘಟಕವನ್ನು ದಮಾಮ್ ರೆಡ್ ಪೋಟ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಸೇರಿದ ಸ್ನೇಹ ಸಂಗಮದಲ್ಲಿ ರಚಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ಧ ಅಮ್ಜದ್ ಖಾನ್ ಪೋಳ್ಯ ಮಾತನಾಡಿ ದಾರುಲ್ ಹಸನಿಯಾ ಸಂಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಅನಿವಾಸಿ ಮಿತ್ರರ ಸಹಕಾರದ ಅಗತ್ಯವಿದ್ದು ಸಂಸ್ಥೆಯ ಪ್ರಗತಿಗಾಗಿ ನೀವೆಲ್ಲರೂ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.


ಕಾರ್ಯಕ್ರಮ ಉದ್ಘಾಟಿಸಿದ ಜುಬೈಲ್ ಘಟಕದ ಮುಖ್ಯ ಸಲಹೆಗಾರ ಫಾರೂಕ್ ಪೋರ್ಟ್ ವೇ ಮಾತನಾಡಿ ದಾರುಲ್ ಹಸನಿಯಾ ಸಂಸ್ಥೆಗೆ ವಿಶಾಲವಾದ ಜಮೀನನ್ನು ಖರೀದಿಸಲು ಸಾಧ್ಯವಾಗಿದ್ದು ಎಲ್ಲರೂ ಒಟ್ಟಾಗಿ, ಒಗ್ಗಟ್ಟಾಗಿ  ಸಹಕರಿಸಿದರೆ ಪುತ್ತೂರು ಸಿಟಿಯಲ್ಲಿ ಸುಂದರವಾದ ಹಿಫ್ಲ್ ಕಾಲೇಜು ಹಾಗು ದಹ್ ವಾ ಸೆಂಟರ್ ನಿರ್ಮಿಸಲು ಸಾಧ್ಯ ಎಂದು ಹೇಳಿದರು.
ದಾರುಲ್ ಹಸನಿಯಾ ಓರ್ಗನೈಸರ್ ಅನ್ವರ್ ಸ್ವಾದಿಕ್ ಉಸ್ತಾದ್ ಅವರು ದಾರುಲ್ ಹಸನಿಯಾ ನಡೆದು ಬಂದ ಹಾದಿಯ ಬಗ್ಗೆ ವಿವರಿಸುತ್ತಾ ಕುರ್ ಆನ್ ಕಠ ಪಾಠ ಮಾಡುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರೆ ಸಿಗುವ ಪ್ರತಿ ಫಲವನ್ನು ವಿವರಿಸಿ ದಾರುಲ್ ಹಸನಿಯಾ ಜೊತೆ ಕೈ ಜೊಡಿಸುವಂತೆ ಮನವಿ ಮಾಡಿದರು. ಮುಖ್ಯ ಅತಿಥಿಯಾಗಿ ಬಶೀರ್ ಹಾಜಿ ದರ್ಬೆ ಉಪಸ್ಥಿತರಿದ್ದರು. ಅನಿವಾಸಿ ಉದ್ಯಮಿಗಳಾದ ಜುಬೈಲ್ ಘಟಕ ಅಧ್ಯಕ್ಷ ಫೈರೋಝ್ ಹಾಜಿ ಪರ್ಲಡ್ಕ, ಜುಬೈಲ್ ಘಟಕದ ಕೋಶಾಧಿಕಾರಿ ಆಸಿಫ್ ಹಾಜಿ ದರ್ಬೆ, ದಾರುಲ್ ಇರ್ಶಾದ್ ದಮಾಮ್ ಘಟಕದ ಉಪಾಧ್ಯಕ್ಷ ರಹೀಂ ಹಾಜಿ ವಲಚ್ಚಿಲ್ ಆಸಿಫ್ ಬಪ್ಪಳಿಗೆ, ಪಹದ್ ದರ್ಬೆ ಮೊಲಾದವರು ಉಪಸ್ಥಿತರಿದ್ದರು.


ದಾರುಲ್ ಹಸನಿಯಾ ಅಕಾಡೆಮಿಯ ನೂತನ ದಮಾಮ್ ಘಟಕವನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅಮ್ಜದ್ ಖಾನ್ ಪೋಳ್ಯ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಶ್ರಫ್ ನೌಶಾದ್ ಪೋಳ್ಯ ಕೆ.ಎಸ್.ಎ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನೌಪಲ್ ಕೂರ್ನಡ್ಕ ಕೆ.ಎಸ್.ಎ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯದ್ಯಕ್ಷರಾಗಿ ರಫೀಕ್ ಉಪ್ಪಿನಂಗಡಿ ನ್ಯಾಷನಲ್, ಜೊತೆ ಕಾರ್ಯದರ್ಶಿಯಾಗಿ ಸಲೀಂ ಕೂರ್ನಡ್ಕ ಕೆ.ಎಸ್.ಎ, ಕೋಶಾಧಿಕಾರಿಯಾಗಿ ಅಥಾವುಲ್ಲಾ ಕಡಬ ಕೆ.ಎಸ್.ಎ ಅವರನ್ನು ಆಯ್ಕೆ ಮಾಡಲಾಯಿತು.  ಅಮ್ಜದ್ ಖಾನ್ ಪೋಳ್ಯ ಸ್ವಾಗತಿಸಿದರು. ನೌಶಾದ್ ಪೋಳ್ಯ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here