ಪುತ್ತೂರು ಪಿಲಿಗೊಬ್ಬು ಸೀಸನ್ 2ಗೆ ಫುಡ್ ಫೆಸ್ಟ್ ಟಚ್- 50ಕ್ಕೂ ಅಧಿಕ ಆಹಾರ ಮಳಿಗೆಗಳ ಉದ್ಘಾಟನೆ

0

ಪುತ್ತೂರು: ಪ್ರಥಮ ಪ್ರದರ್ಶನದಲ್ಲೇ ಹತ್ತೂರಿನಲ್ಲಿ ಸದ್ದು ಮಾಡಿದ ವಿಜಯಸಾಮ್ರಾಟ್ ನೇತೃತ್ವದ ಪುತ್ತೂರುದ ಪಿಲಿಗೊಬ್ಬು ಸಂಘಟನೆಯ ಸ್ಥಾಪಕಾದ್ಯಕ್ಷ ಸಹಜ್ ರೈ ಬಳಜ್ಜ ಸಾರಥ್ಯದಲ್ಲಿ ಹಲವು ವೈಶಿಷ್ಟ್ಯತೆಗಳನ್ನೊಳಗೊಂಡು ನಡೆಯುತ್ತಿರುವ ಪಿಲಿಗೊಬ್ಬು ಸೀಸನ್ 2 ಕಾರ್ಯಕ್ರಮದ ಮೊದಲ ದಿನವಾದ ಅ.5ರಂದು ಫುಡ್ ಫೆಸ್ಟ್ ವಿಶೇಷವೇನಿಸಿದ್ದು ಅಧಿಕೃತವಾಗಿ ಚಾಲನೆ ದೊರೆತಿದೆ.50ಕ್ಕೂ ಅಧಿಕ ಆಹಾರ ಮಳಿಗೆಗಳ ಅಧಿಕೃತವಾಗಿ ಉದ್ಘಾಟನೆ ಮಾಡಲಾಯಿತು.

ಯು.ಆರ್.ಪ್ರಾಪರ್ಟಿಯ ಉಜ್ವಲ್ ಪ್ರಭು ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿದರು. ವಿಜಯಸಾಮ್ರಾಟ್ ನೇತೃತ್ವದ ಪುತ್ತೂರುದ ಪಿಲಿಗೊಬ್ಬು ಸಂಘಟನೆಯ ಸ್ಥಾಪಕಾದ್ಯಕ್ಷ ಸಹಜ್ ರೈ ಬಳಜ್ಜ ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ಪಕೋಡ ಮಾದರಿಯ ಸುಂದರ ಸುಸಜ್ಜಿತ ಆಹಾರ ಮಳಿಗೆಯಲ್ಲಿ ಬರ್ಗರ್, ಸ್ಯಾಂಡ್ ವಿಚ್, ಕೇರಳ ಹುಟ್ಟು ಲೈವ್ ಮಸಾಲೆ ದೋಸೆ, ಲೈವ್ ಹಲಸಿನ ಹೋಳಿಗೆ, ಲೈನ್ ರುಮಾಲಿ ರೊಟ್ಟಿ, ಕರಾವಳಿಯ ರುಚಿಕರ ಖಾದ್ಯಗಳ ಸಹಿತ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಐವತ್ತು ವಿವಿಧ ಖಾದ್ಯಗಳ ಮಳಿಗೆಗಳು ವಿಜೃಂಭಿಸಲಿದೆ. ಯಾವುದೇ ಸಂದರ್ಭದಲ್ಲಿ ಕಸ ಕಡ್ಡಿಗಳು ಮಾರ್ಗದಲ್ಲಿ ಅಥವಾ ಆಹಾರ ಮಳಿಗೆಗಳ ಸುತ್ತಮುತ್ತ ಕಸದ ಬುಟ್ಟಿಯಲ್ಲಿ ತುಂಬಿ ತುಳುಕದಂತೆ ಮುಂಜಾಗ್ರತೆಯನ್ನು ವಹಿಸಲಾಗುವುದು. ಒಟ್ಟಾರೆ ಆಹಾರ ಮಳಿಗೆಗಳ ಮಾಲಕರಿಗೆ ಸ್ವಚ್ಛತೆಗೆ ಆದ್ಯತೆಯ ಜೊತೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ 5,೦೦೦, ದ್ವಿತೀಯ ಬಹುಮಾನ 3೦೦೦, ತೃತೀಯ ಬಹುಮಾನ 2೦೦೦ ಜೊತೆಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು, ಶೌಚಾಲಯದ ವ್ಯವಸ್ಥೆ ಮಾಡಲಾಗಿದ್ದು, ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ ಎಂದು ವಿಜಯ ಸಾಮ್ರಾಟ್ ಮತ್ತು ಪಿಲಿಗೊಬ್ಬು ಸಮಿತಿ ತಿಳಿಸಿದೆ.


LEAVE A REPLY

Please enter your comment!
Please enter your name here