ಕಾಣಿಯೂರು: ಯೋಗ ಕೇಂದ್ರ ಪುತ್ತೂರು , ಪ್ರಶಾಂತಿ ಸದ್ಭಾವನಾ ಟ್ರಸ್ಟ್ ಪುತ್ತೂರು ಹಾಗೂ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇದರ ಸಹಯೋಗದೊಂದಿಗೆ ಯೋಗ ಸತ್ಸಂಗ-9 ಕಾರ್ಯಕ್ರಮವು ಪ್ರಗತಿ ವಿದ್ಯಾಸಂಸ್ಥೆಯ ಲಕ್ಷ್ನೀ ಕರಿಯಪ್ಪ ರೈ ಮಾದೋಡಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವು ಓಂಕಾರ, ಶಂಖನಾದ ,ಭಜನೆ ಮತ್ತು ಪತಂಜಲಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ಆರಂಭವಾಯಿತು. ಸಭಾಧ್ಯಕ್ಷತೆಯನ್ನು ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ ವಹಿಸಿ ಗಣ್ಯರನ್ನು ಸ್ವಾಗತಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿ ಸಂಸ್ಕೃತ ಉಪನ್ಯಾಸಕ ಪರೀಕ್ಷಿತ ತೋಳ್ಪಾಡಿ ವಿಷ್ಣು ಸಹಸ್ರನಾಮ – ಒಂದು ರಾಜಮಾರ್ಗ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಯೋಗ ಕೇಂದ್ರ ಪುತ್ತೂರು ಇದರ ಅಧ್ಯಕ್ಷ, ಖ್ಯಾತ ವಕೀಲಗಿರೀಶ್ ಮಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಗುರು ಪ್ರಸಾದ್ ಪಾಣಾಜೆ ಮುಖ್ಯ ಅತಿಥಿಗಳ ವ್ಯಕ್ತಿ ಪರಿಚಯ ಮತ್ತು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿ ಸಂಸ್ಥೆಯ ಶಾಲಾಡಳಿತ ಮಂಡಳಿಯ ಕೋಶಾಧಿಕಾರಿ ಉದಯ ರೈ ಮಾದೋಡಿ, ಸಂಸ್ಥೆಯ ಟ್ರಸ್ಟಿಗಳಾದ ವೃಂದಾ ಜೆ ರೈ, ದೇವಿಕಿರಣ್ ರೈ ಮಾದೋಡಿ, ಹರಿಚರಣ್ ರೈ ಮಾದೋಡಿ, ಸಂಚಾಲಕರ ಮಾತ್ರಶ್ರೀ ಲಕ್ಷ್ಮಿ ಕರಿಯಪ್ಪ ರೈ ಮಾದೋಡಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ದಿವೀಶ್ ಮುರುಳ್ಯ ಮುಖ್ಯಗುರುಗಳು, ಶಿಕ್ಷಕ ವೃಂದದವರು ಮತ್ತು ಪೋಷಕರು, ವಿದ್ಯಾರ್ಥಿ ಮಿತ್ರರು ಉಪಸ್ಥಿತರಿದ್ದರು.
ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ ವಂದಿಸಿದರು. ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾನ್ವಿತ ಯೋಗ ಪಟುಗಳಿಂದ ಯೋಗ ಪ್ರದರ್ಶನ , ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.