ಬಡಗನ್ನೂರು: ತಿರುಮಲೆ ಶಬರಿಮಲೆಯ ಹಾಗೆ ಪಡುಮಲೆ ಜಗತ್ ಪ್ರಸಿದ್ಧವಾಗಲಿದೆ ಎಂದು ಮೂಡಬಿದಿರೆ ಶ್ರೀ ದಿಗಂಬರ ಜೈನ ಮಠ ,ಜೈನಕಾಸಿ ಸ್ವಸ್ತಿಶ್ರೀ ಭಟ್ಟಾರಕ ನಗರ ಹೇಳಿದರು.
ಅವರು ಪಡುಮಲೆ ವೀರ ಪುರುಷ ಶ್ರೀ ಕೋಟಿ ಚೆನ್ನಯರ ಜನ್ಮಸ್ಥಳ ಮತ್ತು ಮೂಲಸ್ಥಾನದಲ್ಲಿ ಮಹಾ ಮಾತೆ ಸಾಕ್ಷಿಯಾತ್ ದೇವಿ ಸ್ವರೂಪಿಯಾದ ಶ್ರೀ ದೇಯಿ ಬೈದೇತಿ ನವರಾತ್ರಿ ಲಲಿತಾ ಪಂಚಮಿ ದಿನದಂದು ನವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವಾರ್ಯ ಮಹಾಸ್ವಾಮೀಜಿ, ಶ್ರೀ ದಿಗಂಬರ ಜೈನ ಮಠ ,ಜೈನಕಾಸಿ ಸ್ವಸ್ತಿಶ್ರೀ ಭಟ್ಟಾರಕ ನಗರ,ಮೂಡಬಿದಿರೆ ದಿವ್ಯ ಸಾನಿಧ್ಯದಲ್ಲಿ ನಡೆದ ನವರಾತ್ರಿ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವಳಿ ವೀರ ಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಳ ಮತ್ತು ಮೂಲಸ್ಥಾನಕ್ಕೆ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡ ಅವರು, ಈ ಸಂದರ್ಭದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದರು. ಕೋಟಿ-ಚೆನ್ನಯರು ಸತ್ಯದ ಹಾದಿಯಲ್ಲಿ ಸಾಗಿ ನ್ಯಾಯಕ್ಕಾಗಿ ಹೋರಾಡಿದ ಅವಳಿ ವೀರಪುರುಷರು. ಮರಣಾನಂತರ ದೈವತ್ವಕ್ಕೇರಿ ಕರಾವಳಿಯಾಧ್ಯಂತ ಗರಡಿಗಳ ಮೂಲಕ ಆರಾಧಿಸಲ್ಪಡುತ್ತಿರುವ ಈ ದೈವಿಕ ಪುರುಷರು ಜನಿಸಿದ ಈ ಸ್ಥಳ ಪರಮ ಪಾವನ ಪುಣ್ಯ ಭೂಮಿಯಾಗಿದೆ. ತಿರುಮಲೆ, ಶಬರೀಮಲೆಯಂತೆ ಈ ಪಡುಮಲೆಯೂ ಮುಂದೆ ಬೆಳಗಲಿದೆ ಎಂದರು.
ಮೂಡಬಿದಿರೆ ಶ್ರೀ ದಿಗಂಬರ ಜೈನ ಮಠ ,ಜೈನಕಾಸಿ ಸ್ವಸ್ತಿಶ್ರೀ ಭಟ್ಟಾರಕ ನಗರ, ಸ್ವಾಮೀಜಿಯವರ ಪಾದಸ್ಪರ್ಶ:-
ಅವಳಿ ವೀರ ಪುರುಷ ಶ್ರೀ ಕೋಟಿ ಚೆನ್ನಯರ ಜನ್ಮಸ್ಥಳ ಮತ್ತು ಮೂಲಸ್ಥಾನವಾದ ಪಡುಮಲೆಯ ಪುಣ್ಯ ಭೂಮಿಗೆ ಮೂಡಬಿದಿರೆ ಶ್ರೀ ದಿಗಂಬರ ಜೈನ ಮಠ ,ಜೈನಕಾಸಿ ಸ್ವಸ್ತಿಶ್ರೀ ಭಟ್ಟಾರಕ ನಗರ, ಭೇಟಿ ನೀಡಿ ಅವಳಿ ವೀರ ಪುರುಷರ ಅರಾಧ್ಯ ದೇವರಾದ ನಾಗ ಬೆರ್ಮೆರಿಗೆ ಮತ್ತು ಮಹಾ ಮಾತೆ ಸಾಕ್ಷಿಯಾತ್ ದೇವಿ ಸ್ವರೂಪಿಯಾದ ಶ್ರೀ ದೇಯಿಬೈದೇತಿ ದೀಪ ಪ್ರಜ್ವಲಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹಾಗೂ ಸಮಿತಿ ಸದಸ್ಯರು ಸ್ವಾಮಿಜೀಯವರನ್ನು ಹಾರ ಫಲಪುಷ್ಪ ನೀಡಿ ಗೌರವಾರ್ಪಣೆ ಸಲ್ಲಿಸಿದರು
ಬಿರ್ಮ್ಮರಗುಂಡ ಮುಗೇರ ತರವಾಡು ಜೀರ್ಣೋದ್ಧಾರ ಕಾರ್ಯ ಪ್ರಾರಂಭಗೊಂಡಿದ್ದು ಪ್ರಶ್ನೆ ಚಿಂತನೆ ಸಂದರ್ಭದಲ್ಲಿ ಕೋಟಿ ಚೆನ್ನಯರ ಜನ್ಮಸ್ಥಳದಲ್ಲಿ ಕೋಟಿ ಚೆನ್ನಯರ ಅರಾಧ್ಯದೇವರಿಗೆ ಹಾಗೂ ಮಹಾ ಮಾತೆ ಸಾಕ್ಷಿಯಾತ್ ದೇವಿ ಸ್ವರೂಪಿಯಾದ ಶ್ರೀ ದೇಯಿಬೈದೇತಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ತರಬೇಕೆಂದು ಕಂಡು ಬಂದ ಹಿನ್ನೆಲೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಲಾಯಿತು.
ಈ ಸಂದರ್ಭದಲ್ಲಿ ಪಡುಮಲೆ ಶ್ರೀ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ವಿಧಾನ ಪರಿಷತ್ ಸದಸ್ಯ ಹರೀಶ್ ಕಮಾರ್ , ಜಗದೀಶ್ ಅಧಿಕಾರಿ ಮೂಡಬಿದಿರೆ, ಜೈನ ಮಿಲನ ಅಧ್ಯಕ್ಷ ವಿ.ಕೆ ಜೈನ್ ರಾಜಶೇಖರ ಜೈನ್, ಅತ್ವೀರ್ ಜೈನ್, ಶ್ರೀ ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನ ಟ್ರಸ್ಟಿನ ಸದಸ್ಯರಾದ ರತ್ನಾಕರ್ ಜೈನ್, ಶ್ರೀಧರ ಪಟ್ಲ , ವಿಜಯ ಕುಮಾರ್ ಸೊರಕೆ, ವೇದನಾಥ ಸುವರ್ಣ, ನವುಡ ಗರಡಿ ಪಾತ್ರಿಗಳಾದ ರವಿಂದ್ರ ಹಾಗೂ ರಾಜೇಂದ್ರ , ಕುತ್ತಿಲ ಗರಡಿ ಯಜಮಾನ ಸುರೇಶ್ ಕುಮಾರ್ ಕರ್ಕೆರ, ಮುಗೇರ ದೈವರಾಧಕರಾದ ವಿಜಯವಿಕ್ರಮ ರಾಮಕುಂಜ,ಶೇಖರ ಮಾಡಾವು, ,ಕರುಣಾಕರ ಪಳ್ಳತ್ತಾರು ಸುಳ್ಯ, ಚಂದ್ರಶೇಖರ ಕನಕಮಜಲು ಹಾಗೂ ಕುತ್ತಿಲ ಪಿಲಾತಬೆಟ್ಟು ಬಿಲ್ಲವ ಸಮಾಜ ಸೇವಾ ಸಂಘ ಸದಸ್ಯರು ಮೂಡುಬಿದಿರೆ ಜೈನ ಮಿಲನದ ಸದಸ್ಯರು ಮತ್ತು , ಗ್ರಾಮಸ್ಥರು ಭಾಗವಹಿಸಿದರು.