ಪಡುಮಲೆ ಮದಕ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ

0

ಬಡಗನ್ನೂರು: ಸಂಸಾರ ದುಃಖಮಯವಾಗಿದೆ. ಶರೀರ ರೋಗಮಯವಾಗುತ್ತಿದೆ ಎಂಬುವುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ. ಭಗವಂತನ ಸಾನಿಧ್ಯ, ಭಜನೆ,ಪೂಜೆ, ಸತ್ಸಂಗ, ಸನಾತನ ಪರಂಪರೆಗಳಿದ್ದರೆ ಮಾತ್ರ ಜೀವನ ಆನಂದಮಯವಾಗಲು ಸಾಧ್ಯ. ಜೀವನದಲ್ಲಿ ಆನಂದ ಬಿಟ್ಟರೆ ಬೇರೇನಿಲ್ಲ. ಹಾಗಾಗಿ ಪ್ರತಿಯೊಬ್ಬರು ಒಳ್ಳೆಯ ಸತ್ಸಂಗಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಜನೆಯ ಮೂಲಕ ಜೀವನವನ್ನು ಪಾವನವಾಗಿಸಿಕೊಳ್ಳಬೇಕು ಎಂದು ಮೂಡಬಿದರೆಯ ಜೈನಕಾಶಿ ದಿಗಂಬರ ಜೈನ ಮಠದ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿ ಅವರು ಹೇಳಿದರು.

ಪಡುಮಲೆಯ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರು ಕೂರ್ಮಾವತಾಳಿದ ಮೂಲಸ್ಥಾನವಾದ ಮದಕ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಡೆಯುವ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮಕ್ಕೆ ಭೇಟಿ ನೀಡಿ  ಭಕ್ತರನ್ನುದ್ದೇಶಿಸಿ ಮಾತನಾಡಿದರು.

ಮಲೆ ಎಂದರೆ ಗುಡ್ಡ, ಬೆಟ್ಟ, ಕಾಡು ಇರುವ ಪ್ರದೇಶ ಎಂದರ್ಥ.ಪ್ರಕೃತಿ ಎಲ್ಲಿದೆಯೋ ಅಲ್ಲೆಲ್ಲಾ ಮಲೆ ಇರುತ್ತದೆ. ಪಶ್ಚಿಮದ ಮಲೆಗಳಲ್ಲಿ ಶ್ರೇಷ್ಟವಾದ ಮಲೆ ಪಡುಮಲೆ. ಪಡುಮಲೆ ಅದ್ಭುತವಾದ ಕ್ಷೇತ್ರವಾಗಿದ್ದು,ಶಬರಿಮಲೆಗೆ ಮಾಲೆ ಹಾಕಿ ಭಕ್ತರು ಹೋಗುವಂತೆ ಪಡುಮಲೆಗೂ ಭಕ್ತರು ಮಾಲೆ ಹಾಕಿಕೊಂಡು ಸಾಲುಸಾಲಾಗಿ ಬರುವ ದಿನವನ್ನು ಮುಂದೆ ಕಾಣಬಹುದು ಎಂದರು.

ವಿಷ್ಣು ದೇವರ ದಶಾವತಾರಗಳಲ್ಲಿ ಕೂರ್ಮಾವತಾರ  ತಾಳಿದ ಕ್ಷೇತ್ರವೆಂಬ ಇತಿಹಾಸ ದೊಡ್ಡದಾದ ಸರೋವರ `ಮದಕ’ ಹೊಂದಿರುವ ಈ ಕ್ಷೇತ್ರಕ್ಕಿದೆ. ಸತ್ಯಕ್ಕಾಗಿ ಹೋರಾಡಿದ ಕೋಟಿ-ಚೆನ್ನಯರು ಬಾಳಿದ, ದೈವಿಕ ಶಕ್ತಿ ಹೊಂದಿರುವ ಮಾತೆ ದೇಯಿ ಬೈದತಿ ಮೊಟ್ಟೆಯ ರೂಪದಲ್ಲಿ ಅವತಾರ ತಾಳಿದ ಪವಿತ್ರ ಭೂಮಿ ಇದಾಗಿದೆ. ಆದರೂ ಇದು ಪ್ರಸಿದ್ಧಿ ಯಾಕೆ ಆಗಿಲ್ಲ ಎಂದು ಆಶ್ಚರ್ಯವಾಗುತ್ತಿದೆ ಎಂದ ಅವರು, ಈ ಕ್ಷೇತ್ರಕ್ಕೆ ಪ್ರಚಾರ ನೀಡುವ ಕಾರ್ಯ ಆಗಬೇಕು. ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಪಡುಮಲೆಗೂ ಬರುವಂತಾಗಬೇಕು ಎಂದು ಆಶಿಸಿದರು.  

ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿ ರವರನ್ನು  ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು,    

ತುಳಸಿ ಹಾರ ಹಾಕಿ ಫಲಪುಷ್ಪ ನೀಡಿ ಸ್ವಾಗತಿಸಿ ಕೊಂಡರು.

ಮದಕ ರಾಜರಾಜೇಶ್ವರಿ ಸಾನಿಧ್ಯದಲ್ಲಿ  4 ನೇ ದಿವಸದ ಧಾರ್ಮಿಕ ಕಾರ್ಯಕ್ರಮವು ಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ ಕನ್ನಡ್ಕ ಇದರ ಸದಸ್ಯರಿಂದ ಭಜನೆ,ಮತ್ತು  ಸರ್ವಶಕ್ತಿ ಮಕ್ಕಳ ಭಜನಾ ತಡದಿಂದ ಕುಣಿತ ಭಜನಾ ಕಾರ್ಯಕ್ರಮ  ಸಂಕೀರ್ತನೆ, ಸಹಸ್ರನಾಮ ಪಾರಾಯಣ ಹಾಗೂ  ಹೂವಿನ ಪೂಜೆ ಯೊಂದಿಗೆ ವಿಜೃಂಭಣೆಯಿಂದ ನಡೆಯಿತು.

 ಧಾರ್ಮಿಕ ಕಾರ್ಯಕ್ರಮವು ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ  ಶ್ರೀ ಶರನ್ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ ಗಿರಿಮನೆ ಕಾರ್ಯದರ್ಶಿ ಗಂಗಾಧರ ರೈ ಮೇಗಿನಮನೆ, ಕೋಶಾಧಿಕಾರಿ ಶಿವಕುಮಾರ್ ಮೋಡಿಕೆ, ಶ್ರೀ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಬಸವಹಿತ್ತಿಲು ,ಪುತ್ತೂರು ಭಜನಾ ಪರಿಷತ್ತಿನ ಮಾಜಿ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ ಹಾಗೂ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here