ಬೊಳುವಾರು: ಫ್ಲೈಟೆಕ್ ಹಾಲಿಡೇಸ್ ನಲ್ಲಿ ‘ಮರ್ಹಬ ಹಜ್ , ಉಮ್ರಾ’ ಸರ್ವಿಸ್ ಉದ್ಘಾಟನೆ, ಲೋಗೊ ಅನಾವರಣ

0

ಪುತ್ತೂರು: ಬೊಳುವಾರಿನ ಇನ್ ಲ್ಯಾಂಡ್ ಮಯೂರ ಸಂಕೀರ್ಣದಲ್ಲಿ ವ್ಯವಹಾರ ನಡೆಸುತ್ತಿರುವ ಫ್ಲೈಟೆಕ್ ಹಾಲಿಡೇಸ್ ನ ಪ್ರೈ.ಲಿ. ನ ನೂತನ ಹಜ್ ಸರ್ವಿಸ್ ‘ಮರ್ಹಬ ಹಜ್ ಮತ್ತು ಉಮ್ರಾ’ದ ಉದ್ಘಾಟನೆ ಹಾಗೂ ಲೋಗೊ ಅನಾವರಣ ಕಾರ್ಯಕ್ರಮ ಸಂಸ್ಥೆಯಲ್ಲಿ ನಡೆಯಿತು.

ಮುಹಮ್ಮದ್ ಫೈಝಿ ಒಲೆಮುಂಡೆವು ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಸ್ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಎಣ್ಮೂರ್ ರವರು ಕಾರ್ಯಕ್ರಮದ ನೇತೃತ್ವವ ವಹಿಸಿ ಲೋಗೊ ಅನಾವರಣ ಗೊಳಿಸಿದರು. ಅಸ್ಸಯ್ಯಿದ್ ಮುಝಮ್ಮಿಲ್ ತಂಙಳ್ ಕಾಸರಗೋಡುರವರು ದುಆ ಆಶೀರ್ವಚನಾ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಅತಿಥಿಗಳು 2025 ನೆಯ ಹಜ್ಜ್ ಬುಕ್ಕಿಂಗ್ ಪೋಸ್ಟರನ್ನು ಬಿಡುಗಡೆ ಮಾಡಿದರು. 2025 ನೇ ಮೊದಲ ಹಜ್ಜ್ ಪಾಸ್ಪೋರ್ಟ್ ಅನ್ನು ಅಬ್ದುಲ್ ಹಮೀದ್ ಹಾಜಿ ಹ್ಯಾಬಿಟ್ಯೂಡ್ ರವರ ಕುಟುಂಬದ ಸದಸ್ಯರ ಪಾಸ್ಪೋರ್ಟನ್ನು ಅಸ್ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಎಣ್ಮೂರ್ ಅವರಿಗೆ ಹಸ್ತಾಂತರಿಸುವ ಮೂಲಕ ಮೊದಲ ಹಜ್ಜ್ ಬುಕಿಂಗ್ ಪ್ರಾರಂಭಿಸಲಾಯಿತು.

ಫ್ಲೈಟೆಕ್ ಸಂಸ್ಥೆಯ ಮರ್ಹಬ ಹಜ್ಜ್ ಹಾಗೂ ಉಮ್ರಾ ಇದರ ಚೀಫ್ ಅಮೀರರಾದ ಬದ್ರುದ್ದೀನ್ ಅಹ್ಸನಿ ಉಸ್ತಾದರು, ಹಜ್ಜ್ -ಉಮ್ರಾ ವಿಷಯದ ಕುರಿತು ಮಾಹಿತಿ ನೀಡಿದರು.

ಡಾ|| ನಝೀರ್ ಅಹ್ಮದ್ ಹಾಗೂ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ಫ್ಯಾಮಿಲಿ ಗ್ರೂಪ್ ಮಾಲಿಕರಾದ ಅಬ್ದುಲ್ ಹಮೀದ್ ಮಾಡವು, ಹಮೀದ್ ಹಾಜಿ ಹ್ಯಾಬಿಟ್ಯೂಡ್, ಇಸ್ಮಾಯಿಲ್ ಬಲ್ನಾಡು, ಕೆ.ಪಿ. ಇಬ್ರಾಹಿಮ್ ಹಾಜಿ ಉಜಿರೋಡಿ, ನಿಝಾಂ ದಾರಿಮಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಮ್ಮದ್ ಇಹ್‌ತಿಶಾಂ , ಮಹಮ್ಮದ್ ಸಿರಾಜ್, ಮಹಮ್ಮದ್ ಅನ್ಸಾರ್ ಅತಿಥಿಗಳನ್ನು ಸ್ವಾಗತಿಸಿದರು. ಯೂಟುಬರ್ ‌ಮಹಮ್ಮದ್‌ ಆಶಿಕ್ ಕುಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ರಿಯಾಯಿತಿ ದರದಲ್ಲಿ ವಿವಿಧ ಪ್ಯಾಕೇಜ್ ಗಳು
ಫ್ಲೈಟೆಕ್ ಮರ್ಹಬ ವತಿಯಿಂದ ಪ್ರತೀ ತಿಂಗಳು ಉಮ್ರಾ ಪ್ಯಾಕೇಜ್ ಗಳು ಲಭ್ಯವಿದ್ದು ಕನಿಷ್ಠ ದರದಲ್ಲಿ ಉತ್ತಮ ಸೇವೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಮತ್ತು ಹಾಲಿಡೇಸ್ ಪ್ಯಾಕೇಜ್, ರಿಯಾಯಿತಿ ದರದಲ್ಲಿ ಹನಿಮೂನ್ ಪ್ಯಾಕೇಜ್ ಗಳು ಸಹಿತ ವಿವಿಧ ಸೇವೆಗಳು ಲಭ್ಯವಿದೆ ಎಂದು ಪಾಲುದಾರರು ತಿಳಿಸಿದ್ದಾರೆ.

ಕನಿಷ್ಠ ದರದಲ್ಲಿ ಉತ್ತಮ ಸೇವೆ
ತಮ್ಮ ಸಂಸ್ಥೆಯಲ್ಲಿ ಹಜ್ಜ್ – ಉಮ್ರಾ ಪ್ಯಾಕೇಜ್ ಮತ್ತು ಹಾಲಿಡೇಸ್ ಪ್ಯಾಕೇಜ್ ಹಾಗೂ ಇನ್ನಿತರ ಪ್ರಯಾಣದ ನೆರವು ಸೇರಿದಂತೆ ಹಲವಾರು ಸೇವೆಗಳನ್ನು ಈ ಸಂಸ್ಥೆಯು ಒದಗಿಸುತ್ತದೆ.
ಇಂಟರ್ ನ್ಯಾಶನಲ್ ಟೂರ್ ಫ್ಯಾಕೇಜ್, ಏರ್ ಟಿಕೆಟ್, ವಿಸ ಸವೀಸ್, ಡಾಕ್ಯುಮೆಂಟ್ ಅಟಸ್ಟೇಶನ್, ಪಾಸ್ ಪೋರ್ಟ್ ಸರ್ವೀಸ್ ಗಳು ಲಭ್ಯವಿದೆ. ಈಗಾಗಾಲೇ ೨೦೨೫ರ ಹಜ್ ಬುಕ್ಕಿಂಗ್ ಆರಂಭಗೊಂಡಿದೆ.
ನಿಮ್ಮ ಧಾರ್ಮಿಕ ಮತ್ತು ವಿರಾಮ ಪ್ರಯಾಣಗಳಿಗೆ ತಡೆರಹಿತ ಅನುಭವವನ್ನು ಒದಗಿಸುವ ಗುರಿಯನ್ನು ಸಂಸ್ಥೆ ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9606903006 , 9164371148 ಯನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here