ಕೆದಂಬಾಡಿ: ಮನ್‌ಕಿ ಬಾತ್ ವೀಕ್ಷಣೆ ಪ್ರಮುಖರಾಗಿ ಮೋಹನ್ ತಿಂಗಳಾಡಿ ಆಯ್ಕೆ

0

ಪುತ್ತೂರು: ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರ ಮನ್ ಕಿ ಬಾತ್ ಬೂತ್ 188 ರ ಮನ್ ಕೀ ಬಾತ್ ವೀಕ್ಷಣೆ ಪ್ರಮುಖ್ ರಾಗಿ ಮೋಹನ್ ತಿಂಗಳಾಡಿ ಇವರು ಆಯ್ಕೆಯಾಗಿದ್ದಾರೆ. ನರೇದ್ರ ಮೋದಿಯವರ ಪ್ರಮುಖ ಕಾರ್ಯಕ್ರಮದಲ್ಲಿ ಒಂದಾದ ಮನ್ ಕೀ ಬಾತ್ ಕಾರ್ಯಕ್ರಮವು ಪ್ರತಿ ತಿಂಗಳ ಕೊನೆಯ ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ಪ್ರಸಾರಗೊಳ್ಳುತ್ತಿದೆ ಈ ಕಾರ್ಯಕ್ರಮದಲ್ಲಿ ಪಧಾನಿಯವರು ದೇಶದ ಜನರನ್ನು ಉದ್ದೇಶಿಸಿ ದೇಶದ ಬಗ್ಗೆ ಮತ್ತು ಇತರ ಪ್ರಮುಖ ಅಂಶಗಳನ್ನು ಜನರ ಜೊತೆ ಹಂಚಿಕೊಳ್ಳುತ್ತಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಯಾವ ವಿಚಾರದ ಬಗ್ಗೆ ಮಾತನಾಡಬೇಕು ಎಂಬ ಅಭಿಪ್ರಾಯವನ್ನು ತಿಳಿಸಲು ನಮೋ ಆಪ್ ಮೂಲಕ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮವನ್ನು ಪ್ರತೀ ಮನೆಯಲ್ಲೂ ವೀಕ್ಷಿಸಬೇಕೆನ್ನುವ ದೃಷ್ಟಿಯಿಂದ ಮತ್ತು ಇದರ ಮಾಹಿತಿ ಪ್ರತಿಯೊಬ್ಬರಿಗೂ ತಲುಪಿಸುವ ದೃಷ್ಟಿಯಿಂದ ಪ್ರತಿ ಬಿಜೆಪಿ ಶಕ್ತಿಕೇಂದ್ರಕ್ಕೆ ವೀಕ್ಷಣೆ ಪ್ರಮುಖರನ್ನು ಆಯ್ಕೆಮಾಡಲಾಗಿದೆ.

LEAVE A REPLY

Please enter your comment!
Please enter your name here