ಪುತ್ತೂರು: ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪುತ್ತೂರು ತಾಲೂಕು ಇದರ ತೀರ್ಪುಗಾರರ ಮಂಡಳಿಯ ಮಹಾಸಭೆಯು ಅ.2ರಂದು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷರಾದ ಎನ್.ಚಂದ್ರಹಾಸ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಜರಗಿತು.
ಸಭಾಧ್ಯಕ್ಷತೆ ವಹಿಸಿದ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ಮಾತನಾಡಿ, ಎಲ್ಲಾ ತೀರ್ಪುಗಾರರಿಗೆ ಉತ್ತಮ ಸಲಹೆ-ಸೂಚನೆಗಳನ್ನು ನೀಡಿ, ಎಲ್ಲರೂ ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು. ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಸುರೇಂದ್ರ ರೈಯವರು ಕಬಡ್ಡಿ ಆಟದ ಬಗ್ಗೆ ಮಾಹಿತಿ ನೀಡಿದರು. ತಾಲೂಕು ರೆಫ್ರಿ ಬೋರ್ಡ್ ಅಧ್ಯಕ್ಷ ಅಬ್ದುಲ್ ಆಸಿಫ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಕಬಡ್ಡಿ ಪಂದ್ಯಾಟದ ನೂತನ ನಿಯಮಗಳನ್ನು ತಿಳಿಸಿದರು.
ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ ವಂದಿಸಿದರು. ರೆಫ್ರಿ ಬೋರ್ಡ್ ಸಂಚಾಲಕ ರಾಜೇಶ್ ರೈ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ತೀರ್ಪುಗಾರರಾದ ಪುರುಷೋತ್ತಮ ಕೋಲ್ಪೆ, ಸುಧೀರ್ ರೈ ಪಾಣಾಜೆ, ಮನೋಹರ ನುಳಿಯಾಲು, ರಾಧಾಕೃಷ್ಣ ಅರಂಭ್ಯ, ಅಶೋಕ್ ಪೆರಿಗೇರಿ, ವಿಜೀತ್ ನಿಡ್ಪಳ್ಳಿ, ಸಿದ್ಧಿಕ್ ತಂಬುತ್ತಡ್ಕ, ಜಿಹಾದ್ ರೆಂಜ, ಕಾರ್ತಿಕ್ ಪುತ್ತೂರು, ಹರೀಶ್ ಆರ್ಲಪದವು, ಗುರುಕಿರಣ್ ಸುಳ್ಯ ಪದವು, ಗಣೇಶ್ ಸಬ್ರು ಕಜೆ, ದೀಪಕ್ ಪುತ್ತೂರು ಭಾಗವಹಿಸಿದ್ದರು.
ಪ್ರಸ್ತುತ ವರ್ಷ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಖಡ್ಡಾಯವಾಗಿ ನೋಂದಣಿಯನ್ನು ಮಾಡಬೇಕು. ನೊಂದಾಯಿಸಿದ ತಂಡಗಳಿಗೆ ಮಾತ್ರ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶವಿದೆ. ಆಮೆಚೂರು ಕಬಡ್ಡಿ ಅಸೋಸಿಯೇಶನ್ ನ ಅನುಮತಿ ಇಲ್ಲದ ಪಂದ್ಯಾಟದಲ್ಲಿ ತೀರ್ಪುಗಾರರು ಕಡ್ಡಾಯವಾಗಿ ಭಾಗವಹಿಸುವಂತಿಲ್ಲ. ಭಾಗವಹಿಸಿದ್ದೇ ಆದಲ್ಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ನೋಂದಣಿಯನ್ನು ಅ.28ರ ಒಳಗೆ ನೀಡಬೇಕು. ಹೆಚ್ಚಿನ ಮಾಹಿತಿಗೆ ಅಬ್ಬುಲ್ ಆಸಿಫ್ (9972644313), ಪುರುಷೋತ್ತಮ ಕೋಲ್ಪೆ (9019104069, 9480160270)ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.