ಅ.25: ಆರ್ಲಪದವಿನಲ್ಲಿ 35ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ-ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ

0

ನಿಡ್ಪಳ್ಳಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು ಪಾಣಾಜೆ ಇದರ ಆಶ್ರಯದಲ್ಲಿ 35ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್ಯಕ್ರಮ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅ.12ರಂದು ಆರ್ಲಪದವು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ವಠಾರದಲ್ಲಿ ಜರಗಲಿದೆ.

ಧಾರ್ಮಿಕ ಕಾರ್ಯಕ್ರಮಗಳು:

ಬೆಳಿಗ್ಗೆ ಗಂಟೆ 7.40 ರ ಶುಭ ಮುಹೂರ್ತದಲ್ಲಿ ಶ್ರೀ ಶಾರದಾಮಾತೆಯ ವಿಗ್ರಹ ಪ್ರತಿಷ್ಟೆ, ಬೆಳಿಗ್ಗೆ ಗಂಟೆ 8-30 ರಿಂದ ಗಣಪತಿ ಹವನ ನಂತರ ಗಂಟೆ 10 ರ ತನಕ ಭಜನಾ ಕಾರ್ಯಕ್ರಮ. ಗಂಟೆ 9.30 ರಿಂದ ಅಕ್ಷರಾಭ್ಯಾಸ. ಗಂಟೆ 10.30 ರಿಂದ ಆಯುಧ ಪೂಜೆ.ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 7 ರಿಂದ ಮಹಾಪೂಜೆ, ನಂತರ ಶೋಭಾಯಾತ್ರೆ. ವಿಶೇಷ ಆಕರ್ಷಣೆ; ಶ್ರೀ ಶಾಸ್ತಾರ ಸಿಂಗಾರಿ ಮೇಳ ಮಣಿಯೂರು, ದೇಲಂಪಾಡಿ ಇವರಿಂದ ಸಿಂಗಾರಿ ಮೇಳ ಮತ್ತು ಸುಡುಮದ್ದು ಪ್ರದರ್ಶನ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು: 
ಬೆಳಿಗ್ಗೆ ಗಂಟೆ 10 ರಿಂದ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಸೂರಂಬೈಲು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ” ಚಿಣ್ಣರ ಕಲರವ”, ಗಂಟೆ 11 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 1ರಿಂದ ದಿವ್ಯನಿಧಿ ರೈ ಎರುಂಬು ಮತ್ತು ಬಳಗದಿಂದ ಸಂಗೀತ ಗಾನಸುಧೆ, ಮಧ್ಯಾಹ್ನ ಗಂಟೆ2.30 ರಿಂದ ಸಂಜೆ 7 ರ ತನಕ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ” ಸತ್ವ ಪರೀಕ್ಷೆ ” ಮುಂತಾದ ಕಾರ್ಯಕ್ರಮಗಳು ಜರಗಲಿದೆ ಎಂದು ಸಮಿತಿ ಅಧ್ಯಕ್ಷ ಪುಷ್ಪರಾಜ ರೈ ಕೋಟೆ ಮತ್ತು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here