ಪುತ್ತೂರು: ಆರ್ಯಾಪು ಗ್ರಾಮದ ನೀರ್ಕಜೆ ತರವಾಡು ಮನೆಯ ಶ್ರೀ ನಾಗದೇವರು, ಧರ್ಮದೈವ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಬಾಲಕೃಷ್ಣ ಆಚಾರ್ಯ ಕಾರಿಂಜರವರ ನೇತೃತ್ವದಲ್ಲಿ ಅ.11ರಂದು ಶ್ರೀ ಮಹಾಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾಪೂಜೆ ಮತ್ತು ಆಯುಧ ಪೂಜೆ ನಡೆಯಿತು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯವಾಗಿ ನನ್ಯ ಅಚ್ಯುತ ಮೂಡೆತ್ತಾಯ, ಕೆ.ಎಸ್.ವೆಂಕಟರಮಣ, ಸತ್ಯಾನಂದ ಗೌಡ ಗರಡಿಮಜಲು, ವೀರಪ್ಪ ಗೌಡ ದುಗ್ಗಳ, ಜಾಕೆ ಸದಾನಂದ ಗೌಡ, ದಿನೇಶ್ ಗೌಡ ಅಮ್ಚಿನಡ್ಕ, ವಸಂತ ಗೌಡ, ನ್ಯಾಯವಾದಿ ಗಿರೀಶ್ ಮಳಿ, ಡಾ.ನವೀನ್ ಶಂಕರ್, ಕಟ್ಟಪುಣಿ ವಿಠಲ ಗೌಡ, ಮಾಜಿ ಸೈನಿಕ ಪ್ರಭಾಕರ ಗೌಡ, ಗಂಗಾಧರ ಗೌಡ ಹಾಗೂ ಚೈತ್ರಾರವರುಗಳನ್ನು ಸನ್ಮಾಣಿಸಿ ಗೌರವಿಸಲಾಯಿತು. ವೈಧಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಬಾಲಕೃಷ್ಣ ಆಚಾರ್ಯ ಕಾರಿಂಜರವರನ್ನು ವಿಶೇಷವಾಗಿ ಗೌರವಿಸಲಾಯಿತು. ಕಾವು ಹೇಮನಾಥ ಶೆಟ್ಟಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ದಿವ್ಯನಾಥ ಶೆಟ್ಟಿ ಕಾವು ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯತು. ನೀರ್ಕಜೆ ತರವಾಡು ಮನೆಯ ಕುಟುಂಬಸ್ಥರು ಸೇರಿದಂತೆ ನೂರಾರು ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ತರವಾಡು ಮನೆಯ ಶೇಷಪ್ಪ ಗೌಡ, ಮೀನಾಕ್ಷಿ ಶೇಷಪ್ಪ ಗೌಡ, ಗಿರಿಜಾ, ಪುಷ್ಪಕರ ಮತ್ತು ಭರತ್ ಕುಮಾರ್ರವರು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು.