ಆಲಂಕಾರು: ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.2ರಿಂದ ಅ.12ರ ವಿಜಯದಶಮಿ ತನಕ ನವರಾತ್ರಿ ಉತ್ಸವ ನಡೆಯಿತು. ಅ. 2ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶ್ರೀ ಆದಿಶಕ್ತಿ ಭಜನಾ ಮಂಡಳಿ, ಶ್ರೀ ಕ್ಷೇತ್ರ ಶರವೂರು ಇವರಿಂದ ಭಜನೆ, ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ, ಪ್ರಸಾದ ವಿತರಣೆ ಸಂತರ್ಪಣೆ ನಡೆಯಿತು. ಅ.3ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭಕ್ತಿ ನೃತ್ಯಾರ್ಚನೆ, ಮಯೂರ ಸಾಂಸ್ಕೃತಿಕ ಕಲಾ ಕೇಂದ್ರ ಆಲಂಕಾರು ಇದರ ವಿದ್ಯಾರ್ಥಿಗಳಿಂದ ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಅ. 4ರಂದು ಶುಕ್ರವಾರ ಬೆಳಿಗ್ಗೆ 8:00 ರಿಂದ ಸಾಮೂಹಿಕ ಚಂಡಿಕಾಯಾಗ ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಭಕ್ತಿ ಸಂಗೀತ
ಸಾಕ್ಷತ್ ಶಿವ ಸಾಂಸ್ಕೃತಿಕ ಕಲಾ ಕೇಂದ್ರ ಚಾರ್ವಾಕ ಇವರಿಂದ ರಾತ್ರಿ ರಂಗಪೂಜೆ, ಗಣಪತಿ ರಂಗಪೂಜೆ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
ಅ.5ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ,ಅನ್ನಸಂತರ್ಪಣೆ,ಸಂಜೆ ಯಕ್ಷಗಾನ ಗರುಡ ಗರ್ವಭಂಗ ನಡೆಸಿಕೊಡುವವರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರಿಂದ ಪ್ರಾಯೋಜಕತ್ವ ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ರಾತ್ರಿ ರಂಗಪೂಜೆ, ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಅ. 6ರಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ನೃತ್ಯ ನಿನಾದ ಭಾರತೀಯ ಕಲೆಗಳ ತರಬೇತಿ ಕೇಂದ್ರ ಕಡಬ ಇವರಿಂದ. ರಾತ್ರಿ
ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಅ.7ರಂದು ಸೋಮವಾರ ಲಲಿತಾ ಪಂಚಮಿ ದಿನದಂದು ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಯಕ್ಷಗಾನ ಪ್ರಸಂಗ ಅಗ್ರಪೂಜೆ ಸಂಯೋಜನೆ ಯಕ್ಷಮಿತ್ರರು ಶರವೂರು – ಆಲಂಕಾರು ಇವರಿಂದ, ರಾತ್ರಿ ಮಹಾಪೂಜೆ, ಗಣಪತಿ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಅ.8ರಂದು ಮಂಗಳವಾರ ಮದ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಸಂಜೆ ಭದ್ರಕಾಳಿ ಗುಡಿಯಲ್ಲಿ ರಂಗಪೂಜೆ, ಶಾಸ್ತ್ರೀಯ ಸಂಗೀತ ಕಚೇರಿ ವಿದ್ವಾನ್ ಶ್ರೀ ಈಶ್ವರ ಭಟ್ಟರ ಶಿಷ್ಯೆಯರಿಂದ ರಾತ್ರಿ ಮಹಾಪೂಜೆ,ಗಣಪತಿ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಿತು.
ಅ. 9ರಂದು ಮದ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ನಾಟ್ಯರಾಧನಾ ನೃತ್ಯಾಲಯ ಇವರಿಂದ ನಿರ್ದೇಶನ ವಿದ್ವಾನ್ ಶ್ರೀ ರಾಘವೇಂದ್ರ ಪ್ರಸಾದ್ ಎ ಸಹಶಿಕ್ಷಕರು ಪೆರಾಬೆ ಇವರಿಂದ ರಾತ್ರಿ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಅ. 10 ದುರ್ಗಾಷ್ಟಮಿಯಂದು ಬೆಳಿಗ್ಗೆ ಚಂಡಿಕಾ ಹೋಮ ಮದ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಮಹಿಳಾ ಯಕ್ಷಗಾನ ತಾಳಮದ್ದಳೆ ಯಕ್ಷಶ್ರೀ ಹವ್ಯಾಸಿ ಬಳಗ ಇವರಿಂದ ದುರ್ಗಾ ವಿಲಾಸ ಯಕ್ಷ ನಾಟ್ಯರ್ಥ ವೈಭವ, ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಅ.11 ರಂದು ಮದ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಮಾತೃಶ್ರೀ ಭಜನಾ ಮಂಡಳಿ ಕೊಂಡಾಡಿ ಕೊಪ್ಪ ಇವರಿಂದ ಭಜನೆ ರಾತ್ರಿ ರಂಗಪೂಜೆ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆ,ಮಹಾಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು.
ಅ. 12ರಂದು ವಿಜಯದಶಮಿ ಯಂದುಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ,ಅಕ್ಷರಾಭ್ಯಾಸ ಮದ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆಯಾಗಿ, ನವಾನ್ನ ಸಂತರ್ಪಣೆ ನಡೆಯಿತು.ಅಗಮಿಸಿದ ಊರ ಪರವೂರ ಭಕ್ತಾದಿಗಳು ವಿವಿಧ ಸೇವೆಯಲ್ಲಿ ಪಾಲ್ಗೊಂಡು,ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು ಈ ಸಂಧರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ಪ್ರಮುಖರಾದ ಹರೀಶ ಆಚಾರ್ಯ ನಗ್ರಿಗುತ್ತು,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಹೇಮಂತ್ ರೈ ಮನವಳಿಕೆಗುತ್ತು, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರಿಪ್ರಸಾದ ಉಪಾಧ್ಯಾಯ, ರಾಧಾಕೃಷ್ಣ ರೈ ಪರಾರಿಗುತ್ತು, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ವಿಠಲ ರೈ ಪೆರಾಬೆ ಪಟ್ಟೆ, ವಾಸಪ್ಪ ಗೌಡ ಕೆದ್ದೊಟ್ಟೆ, ಮೋಹನ ಶರವೂರು, ಪುಷ್ಪಲತಾ ಕೆ ಹಳೆನೇರೆಂಕಿ, ರೋಹಿಣಿ ಬಿ.ಎನ್ ನಾಡ್ತಿಲ ಗೌರವ ಸದಸ್ಯರಾದ ದಾಮೋದರ ಗೌಡ ಶರವೂರು, ಸೇರಿದಂತೆ ದೇವಸ್ಥಾನದ ಆರ್ಚಕರು,ಸಿಬ್ಬಂದಿ ವರ್ಗ, ಸೀಮೆಯ ಹತ್ತು ಸಮಸ್ತರು,ಕಾರ್ಯಕರ್ತರು,ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಸಹಕರಿಸಿದರು.