ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಪನ್ನ

0

ಪುತ್ತೂರು : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯು ಅ.2ರಿಂದ ಪ್ರಾರಂಭಗೊಂಡು ಅ.12ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.


ಅ.2ರಂದು ಬೆಳಿಗ್ಗೆ ಗಣಪತಿ ಹವನ ,ಹುಂಡಿ ಸಮರ್ಪಣೆ ನಡೆಯಿತು. ನ. 2 ರಿಂದ 12 ರತನಕ ನವರಾತ್ರಿ ಪ್ರಯುಕ್ತ 10 ದಿನಗಳ ಕಾಲ ಮಧ್ಯಾಹ್ನ ಮತ್ತು ಸಂಜೆ ವಿವಿಧ ಭಜನಾ ತಂಡಗಳಿಂದ‌ ಭಜನಾ ಕಾರ್ಯಕ್ರಮ, ಪ್ರತಿ ದಿನ ಮಧ್ಯಾಹ್ನ ಮತ್ತು‌ ರಾತ್ರಿ‌ ಅನ್ನ ಸಂತರ್ಪಣೆ‌, ಶ್ರೀ ಕ್ಷೇತ್ರದ ರಂಗಪೂಜೆ ಹಾಗೂ ಭಕ್ತಾಧಿಗಳಿಂದ ಸಾಮೂಹಿಕ ರಂಗಪೂಜೆ ನಡೆಯಿತು.


ದೇವಸ್ಥಾನದ ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ದೇವಸ್ಥಾನದ ಆಡಳಿತಾಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಮಾಜಿ ಸದಸ್ಯರುಗಳಾದ ವೆಂಕಟಕೃಷ್ಣ ರಾವ್, ನಾರಾಯಣ ಕೆ, ಭೋಜರಾಜ ಶೆಟ್ಟಿ, ಕುಶಾಲಪ್ಪ ಗೌಡ ಪೆರುವಾಜೆ, ಜಯಪ್ರಕಾಶ್ ರೈ, ದೇವಾಲಯದ ಮ್ಯಾನೇಜರ್ ವಸಂತ ಪೆರುವಾಜೆ ಹಾಗೂ ಭಕ್ತಾದಿಗಳು, ದೇವಸ್ಥಾನದ ಸಿಬ್ಬಂದಿ ವರ್ಗದವರು ಸೇರಿದಂತೆ ಸಾವಿರಾರು ಭಕ್ತಾಧಿಗಳು ಭಾಗವಹಿಸಿದರು.
ಅ.13ರಂದು ದೇವಾಲಯದಲ್ಲಿ ಅಕ್ಷರಾಭ್ಯಾಸ ನಡೆಯುವ ಮೂಲಕ ನವರಾತ್ರಿ ಕಾರ್ಯಕ್ರಮ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here