ಪುತ್ತೂರು: ಎಪಿಎಂಸಿ ಪ್ರಾಂಗಣದಲ್ಲಿರುವ ವಸತಿಗೃಹದಲ್ಲಿ ವಾಸ್ತವ್ಯವಿದ್ದು ಇದೀಗ, ಅನಧಿಕೃತ ವಾಸ್ತವ್ಯ ಆರೋಪದಲ್ಲಿ ಅಧಿಕಾರಿಗಳು ವಸತಿಗೃಹಕ್ಕೆ ಬೀಗ ಜಡಿದಿರುವುದರಿಂದ ಸಮಸ್ಯೆಗೆ ಸಿಲುಕಿರುವ ಸಂತ್ರಸ್ತೆ ಜಾನಕಿ ಅವರಿಗೆ ಮನೆ ನಿರ್ಮಾಣಕ್ಕೆ ನಿವೇಶನ ಒದಗಿಸಿಕೊಡುವುದಾಗಿ ಶಾಸಕ ಅಶೋಕ್ ಕುಮಾರ್ ರೈ ಭರವಸೆ ನೀಡಿದ್ದಾರೆ.ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂತ್ರಸ್ತೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕರು ನಿವೇಶನದ ಭರವಸೆ ನೀಡಿದ್ದಾರೆ.
ಎಪಿಎಂಸಿ ಪ್ರಾಂಗಣದಲ್ಲಿರುವ ಸರಕಾರಿ ವಸತಿಗೃಹದಲ್ಲಿ ಹೊರಗುತ್ತಿಗೆ ಸಿಬ್ಬಂದಿ ಅನಧಿಕೃತವಾಗಿ ವಾಸವಾಗಿದ್ಧಾರೆ ಎಂಬ ಆರೋಪದಲ್ಲಿ ಮನೆಗೆ ಬೀಗ ಜಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆ ವಿಕಲಚೇತನ ಮಹಿಳೆ ಮಧ್ಯರಾತ್ರಿ ತನಕ ಒಂಟಿಯಾಗಿ ಮನೆ ಹೊರಗಡೆ ಕುಳಿತಿದ್ದು, ಬಳಿಕ ಸಂತ್ರಸ್ಥ ಮಹಿಳೆ ಅಸ್ವಸ್ಥ್ಥಗೊಂಡು ರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿರುವ ಘಟನೆ ನಡೆದಿತ್ತು. ಆ ಬಳಿಕ ಅವರ ಪರಿಸ್ಥಿತಿಯನ್ನು ಮನಗಂಡ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಪಂಧಿಸಿದ್ದಾರೆ.