ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ- ಸಭಾ ಕಾರ್ಯಕ್ರಮ, ಪ್ರಶಸ್ತಿಪ್ರದಾನ, ಸನ್ಮಾನ, ಸಾಮೂಹಿಕ ಪುದ್ವಾರ್

0

ಪುತ್ತೂರು: ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಅ.3ರಿಂದ 12ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಂಡಿತು.


ಅ.5ರಂದು ಬೆಳಿಗ್ಗೆ ಮತ್ತು ಸಂಜೆ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಸಂಜೆ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯಾಂಜಲಿ ನೃತ್ಯ ಪ್ರದರ್ಶನ, ರಾತ್ರಿ ಸೇವಾರ್ಥಿಗಳಿಂದ ಶ್ರೀದೇವಿಗೆ ಅಲಂಕಾರ ಪೂಜೆ, ಅನ್ನಸಂತರ್ಪಣೆ ನಡೆಯಿತು. ಅ.6ರಂದು ಬೆಳಿಗ್ಗೆ ಗಣಪತಿ ಹೋಮ, ಭಜನೆ, ರಾಥ್ರಿ ಸಾರ್ವಜನಿಕ ಹೂವಿನ ಪೂಜೆ, ಸಭಾಕಾರ್ಯಕ್ರಮ ಬಳಿಕ ಶಾಸಕ ಅಶೋಕ್ ಕುಮಾರ್ ರೈ ಕೆ.ಎಸ್. ಮತ್ತು ಮನೆಯವರ ಪ್ರಾಯೋಜಕತ್ವದಲ್ಲಿ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ನಾಗಮಾಣಿಕ್ಯ ನಾಟಕ ನಡೆಯಿತು.

ಅ.7ರಂದು ಬೆಳಿಗ್ಗೆ ಶಾಸಕ ಅಶೋಕ್ ಕುಮಾರ್ ರೈ ಮತ್ತು ಮನೆಯವರ ಸೇವಾರ್ಥ ಚಂಡಿಕಾ ಹೋಮ ನಡೆಯಿತು. ಭಜನೆ, ರಾತ್ರಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ಸೇವಾರ್ಥಿಗಳಿಂದ ಶ್ರೀದೇವಿಗೆ ಅಲಂಕಾರ ಪೂಜೆ, ರಂಗಪೂಜೆ, ಅನ್ನಸಂತರ್ಪಣೆ ನಡೆಯಿತು. ಅ.8ರಂದು ಬೆಳಿಗ್ಗೆ ಭಜನೆ, ರಾತ್ರಿ ಸೇವಾರ್ಥಿಗಳಿಂದ ಶ್ರೀದೇವಿಗೆ ರಂಗಪೂಜೆ, ಪುತ್ತೂರು ಯಕ್ಷಸಾರಥಿ ಯಕ್ಷಗಾನ ಬಳಗದಿಂದ ರಾಮ ಶ್ರೀರಾಮ ಯಕ್ಷಗಾನ, ಅನ್ನಸಂತರ್ಪಣೆ ನಡೆಯಿತು. ಅ.9ರಂದು ಬೆಳಿಗ್ಗೆ ಭಜನೆ, ರಾತ್ರಿ ಭರತನಾಟ್ಯ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಸಿಂಚನ, ಸೇವಾರ್ಥಿಗಳಿಂದ ಶ್ರೀದೇವಿಗೆ ರಂಗಪೂಜೆ, ಅನ್ನಸಂತರ್ಪಣೆ ನಡೆಯಿತು. ಅ.10ರಂದು ಬೆಳಿಗ್ಗೆ ಭಜನೆ, ರಾತ್ರಿ ಮಠಂತಬೆಟ್ಟು ಕೀರ್ತಿಶೇಷ ಶ್ರೀನಿವಾಸ ರೈರವರ ಸ್ಮರಣಾರ್ಥ ಮಠಂತಬೆಟ್ಟು ಸವಿತ ಎಸ್.ರೈ ಮತ್ತು ಮನೆಯವರ ಪ್ರಾಯೋಜಕತ್ವದಲ್ಲಿ ಶುಕ್ರ ಸಂಜೀವಿನಿ ಯಕ್ಷಗಾನ, ಶ್ರೀದೇವಿಗೆ ನವರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಿತು. ಅ.11ರಂದು ಬೆಳಿಗ್ಗೆ ಭಜನೆ, ರಾತ್ರಿ ನವರಾತ್ರಿ ಪೂಜೆ, ಪೊರ್ಲು ಕಲಾವಿದರು ಮಠಂತಬೆಟ್ಟು ಇವರಿಂದ ಕತೆನೇ ಬೇತೆ ತುಳು ಹಾಸ್ಯಮಯ ನಾಟಕ, ಅನ್ನಸಂತರ್ಪಣೆ ನಡೆಯಿತು.

ಸಾಮೂಹಿಕ ಪುದ್ವಾರ್ ಹೊಸ ಅಕ್ಕಿ ಊಟ:
ಅ.12ರಂದು ಬೆಳಿಗ್ಗೆ ಭಜನೆ, ಕೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಶ್ರೀದೇವಿಗೆ ಮಹಾ ಅಲಂಕಾರ, ತ್ರಿಮಧುರ ನೈವೇದ್ಯ, ಕ್ಷೀರಪಾಯಸ ಸೇವೆ, ಲಲಿತಾ ಸಹಸ್ರನಾಮ ಪಾರಾಯಣ, ಅಕ್ಷರಾಭ್ಯಾಸ, ತುಲಾಭಾರ ಸೇವೆ, ಆಯುಧ ಪೂಜೆ, ತೆನೆ ತುಂಬಿಸುವುದು, ಸತ್ಯನಾರಾಯಣ ಪೂಜೆ, ಮಹಾಪೂಜೆ, ಮಧ್ಯಾಹ್ನ ಸಾಮೂಹಿಕ ಪುದ್ವಾರ್ ಹೊಸ ಅಕ್ಕಿ ಊಟ, ಮಧ್ಯಾಹ್ನ ಹುಲಿಕುಣಿತ, ಭಜನೆ, ಸಂಜೆ ದುರ್ಗಾಪೂಜೆ, ಹರಕೆ ಬಂದ ಸೀರೆಗಳ ಏಲಂ, ದೀಪೋತ್ಸವ, ಶ್ರೀದೇವಿಗೆ ವಿಶೇಷ ಪೂಜೆ, ಸುಸ್ವರ ಮೆಲೋಡೀಸ್ ಉಪ್ಪಿನಂಗಡಿ ಇವರಿಂದ ಭಕ್ತಿ ಗಾನ ಸಂಗಮ ನಡೆಯಿತು.

ಸಭಾ ಕಾರ್ಯಕ್ರಮ, ಪ್ರಶಸ್ತಿಪ್ರದಾನ, ಸನ್ಮಾನ:
ಅ.6ರಂದು ರಾತ್ರಿ 9ರಿಂದ ಸಭಾ ಕಾರ್ಯಕ್ರಮ ನಡೆಯಿತು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್, ಪುತ್ತೂರು ಎಚ್‌ಪಿಆರ್ ಗ್ರೂಫ್ ಆಫ್ ಇನ್‌ಸ್ಟಿಟ್ಯೂಷನ್ ಚಯರ್‌ಮೆನ್ ಹರಿಪ್ರಸಾದ್ ರೈ, ಮಂಗಳೂರು ಎಎಸ್‌ಐ ರಾಮಣ್ಣ ರೈ ಮಠಂತಬೆಟ್ಟು, ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಕಾರ ಕ್ಷೇತ್ರದ ಸಾಧಕ ರಮೇಶ್ ನಾಯಕ್ ನಿಡ್ಯರವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಹಾಗೂ ತಾಳಮದ್ದಲೆ ಕಲಾವಿದರಾಗಿದ್ದ ಮಠಂತಬೆಟ್ಟು ಶ್ರೀನಿವಾಸ ರೈರವರ ಸ್ಮರಣಾರ್ಥ ಕೊಡಮಾಡುವ ವಾರ್ಷಿಕ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಬನ್ನೂರು ಗಂಗಾಧರ ಭಂಡಾರಿಯವರಿಗೆ ಪ್ರದಾನ ಮಾಡಲಾಯಿತು. ರೂ.10ಸಾವಿರ ನಗದು, ಬೆಳ್ಳಿಯ ವಿಗ್ರಹ ಮತ್ತು ಸನ್ಮಾನ ಪತ್ರವನ್ನೊಳಗೊಂಡ ಪ್ರಶಸ್ತಿಯನ್ನು ಗಣ್ಯರು ಪ್ರದಾನ ಮಾಡಿದರು. ಯೋಗೀಶ್ ಸಾಮಾನಿ ಸಂಪಿಗೆತಡಿ ಮತ್ತು ಬಾಲಕೃಷ್ಣ ಶೆಟ್ಟಿ ಮಠಂತಬೆಟ್ಟು ಸನ್ಮಾನ ಪತ್ರ ವಾಚಿಸಿದರು. ದೇವಸ್ಥಾನದ ವ್ಯವಸ್ಥಾಪಕ ಸಂತೋಷ್ ರೈ ಕದಿಕಂಡೆಗುತ್ತು ಸ್ವಾಗತಿಸಿದರು. ಜಗನ್ನಾಥ ಶೆಟ್ಟಿ ನಡುಮನೆ ಮತ್ತು ಕರುಣಾಕರ ಸಾಮಾನಿ ಸಂಪಿಗೆತಡಿ ಕಾರ್ಯಕ್ರಮ ನಿರೂಪಿಸಿದರು.

ಅಭಿನಂದನಾ ಕಾರ್ಯಕ್ರಮ:
ನವರಾತ್ರಿ ಕಾರ್ಯಕ್ರಮದಲ್ಲಿ ಶ್ಮವಹಿಸಿ ದುಡಿದು ಯಶಸ್ವಿಗೊಳಿಸಿದ ಸ್ವಯಂಸೇವಕರಿಗೆ ಹಾಗೂ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಅತಿಥಿ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.

ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ವೈದಿಕ ಕಾರ್ಯಕ್ರಮ ನೆರವೇರಿಸಿದರು. ನವರಾತ್ರಿ ಉತ್ಸವ ಸಮಿತಿ ಸಂಚಾಲಕರು, ಉಪಸಮಿತಿ ಸಂಚಾಲಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here