ಬಂಟರ ಸಂಘ ಪುತ್ತೂರು ಮಹಿಳಾ ವಿಭಾಗದಿಂದ ಸನ್ಮಾನ ಆರೋಗ್ಯ ಮಾಹಿತಿ

0

ಪುತ್ತೂರು: ತಾಲೂಕು ಬಂಟರ ಸಂಘ ಇದರ ಮಹಿಳಾ ವಿಭಾಗದ ಮಾಸಿಕ ಸಭೆ ಅ.17ರಂದು‌ ಪುತ್ತೂರು ಬಂಟರ ಭವನದಲ್ಲಿ ಜರಗಿತು. ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಂಟ್ಸ್ ಹಾಸ್ಟೆಲ್ ಮಂಗಳೂರು ಇಲ್ಲಿ ನಡೆದ ಬಂಟರ ಕ್ರೀಡಾ ಕೂಟದಲ್ಲಿ ಬಂಟರ ಮಹಿಳಾ ವಿಭಾಗ, ಪುತ್ತೂರು ಬಂಟರ ಸಂಘವನ್ನು ಪ್ರತಿನಿಧಿಸಿ, ತ್ರೋಬಾಲ್ ಆಟದಲ್ಲಿ ದ್ವಿತೀಯ ಬಹುಮಾನವನ್ನು ಪಡಕೊಂಡ ಬಗ್ಗೆ ಬಂಟರ ಮಹಿಳಾ ತಂಡಕ್ಕೆ ಸೂಕ್ತ ರೀತಿಯಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ನೀಡುತ್ತಿರುವ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೊರ್ಮಂಡ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಪ್ರೇಮನಾಥ ಶೆಟ್ಟಿ ಕಾವು ಇವರನ್ನು ಗೌರವಿಸಲಾಯಿತು. ಹಾಗೆಯೇ ಆಟಗಾರ್ತಿಯರನ್ನು ಮತ್ತು ಬಂಟರ ಮಹಿಳಾ ವಿಭಾಗದ ಕ್ರೀಡಾ ಸಂಚಾಲಕರಾದ ಸಬಿತಾ ಭಂಡಾರಿ ಹಾಗೂ ಸ್ವರ್ಣಲತಾ ಜೆ ರೈ ಇವರನ್ನು ಅಭಿನಂದಿಸಲಾಯಿತು.


ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮತ್ತು ಹರಿಣಾಕ್ಷಿ ಜೆ ಶೆಟ್ಟಿ ಇವರ ಪುತ್ರಿ ಸಮೃದ್ಧಿ ಜೆ. ಶೆಟ್ಟಿಯವರು ಎಳವೆಯಲ್ಲೇ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಕ್ರೀಡಾಪಟುವಾಗಿ, ಯಕ್ಷಗಾನ, ನೃತ್ಯ, ನಾಟಕ ಇತ್ಯಾದಿ ಎಲ್ಲಾ ರಂಗಗಳಲ್ಲೂ ಮಾಡಿದ ಸಾಧನೆಯನ್ನು ಗುರುತಿಸಿ ಪುತ್ತೂರು ಬಂಟರ ಮಹಿಳಾ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಪುತ್ತೂರು ಸಿಟಿ ಆಸ್ಪತ್ರೆಯ ಡಾ| ನಿರುಪಮಾ ರೈ ಇವರಿಂದ “ಮಹಿಳೆಯಿರಿಗೆ ಆರೋಗ್ಯ” ಈ ವಿಷಯ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.


ತಾಲೂಕು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಬಂಟರ ಮಹಿಳಾ ವಿಭಾಗದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನಮ್ಮ ದೇಶದಲ್ಲಿ ಮಹಿಳೆಯರನ್ನು ಮಾತೃ ಸ್ಥಾನದಲ್ಲಿ ನೋಡುತ್ತೇವೆ ಹಾಗೆಯೇ ಗೌರವಿಸುತ್ತೇವೆ. ಮಹಿಳಾ ವಿಭಾಗದವರ ಕೆಲಸ ಕಾರ್ಯಗಳಿಗೆ ನಮ್ಮ ಸಹಾಯ ಸಹಕಾರ ಬೆಂಬಲ ಎಂದಿಗೂ ಇದೆ ಎಂದರು.


ಗೌರವಾರ್ಪಣೆ ಸ್ವೀಕರಿಸಿ ಮಾತಾಡಿದ ದಯಾನಂದ ರೈ ಕೊರ್ಮಂಡ ಇವರು ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ಸಂಚಾಲಕರಾದ ಸಬಿತಾ ಭಂಡಾರಿ ಹಾಗೂ ಸ್ವರ್ಣಲತಾ ಜೆ ರೈ ಇವರ ಸಾಧನೆ ಹಾಗೂ ಶ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಪುತ್ತೂರು ಬಂಟರ ಮಹಿಳಾ ವಿಭಾಗದವರು ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಬಲಿಷ್ಟ ತ್ರೋಬಾಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ ಅದಕ್ಕೆ ನನ್ನ ಪೂರ್ಣ ಸಹಕಾರ ನೀಡುತ್ತೇನೆ ಎಂದರು.


ಹರಿಣಾಕ್ಷಿ ಜೆ ಶೆಟ್ಟಿ ಸಂದಭೋಚಿತವಾಗಿ ಮಾತನಾಡಿದರು.
ಶಕುಂತಳಾ ವಿ. ಕೆ. ಶೆಟ್ಟಿ ಪ್ರಾರ್ಥಿಸಿದರು. ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ ರೈ ಸ್ವಾಗತಿಸಿದರು. ಗೀತಾ ಡಿ ರೈ, ಅನ್ನಪೂರ್ಣಿಮಾ ರೈ , ಅನಿತಾ ಹೇಮನಾಥ ಶೆಟ್ಟಿ , ಜಯಂತಿ ಎಂ.ರೈ, ನಯನಾ ರೈ ನೆಲ್ಲಿಕಟ್ಟೆ, ಕೃಷ್ಣವೇಣಿ ರೈ ಅತಿಥಿಗಳನ್ನು ಗೌರವಿಸಿದರು. ಶೀಲಾವತಿ ಎಂ, ರೈ , ರಾಜೀವಿ ವಿ ಶೆಟ್ಟಿ ಸಹಕರಿಸಿದರು. ಸುಜಾತ ಸುರೇಂದ್ರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಬಂಟರ ವಿಭಾಗದ ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಅರುಣಾ ಡಿ ರೈ ವಂದಿಸಿದರು.

LEAVE A REPLY

Please enter your comment!
Please enter your name here