ಬಡಗನ್ನೂರು: ಶ್ರಮದಾನದ ಮೂಲಕ ಶಾಲಾ ಕೊಠಡಿ ದುರಸ್ತಿ

0

ಬಡಗನ್ನೂರು:  ಸ.ಉ.ಹಿ.ಪ್ರಾಥಮಿಕ ಶಾಲೆ ಬಡಗನ್ನೂರು ಪ್ರಾರಂಭೋತ್ಸವ  ಅ.21ರಂದು ನಡೆಯಲಿದ್ದು, ಶಾಲಾ ಆರಂಭದ ಮೊದಲು ಶಾಲಾ ಕಟ್ಟಡದ ಮೇಲ್ಛಾವಣಿ ದುರಸ್ತಿ ಕಾರ್ಯ ಅ.2೦ರಂದು ನಡೆಯಿತು.

ಶಾಲಾ ಮೂರು ಕೊಠಡಿಯ ಪಕಾಸು ಹಾಗೂ ರೀಪು ಗೆದ್ದಲು ಹಿಡಿದು  ಬೀಲುವ ಹಂತದಲ್ಲಿ ಇತ್ತು. ಈ ಬಗ್ಗೆ ಹಿರಿಯ ವಿದ್ಯಾರ್ಥಿ ಗೌರವಾಧ್ಯಕ್ಷ ನಾರಾಯಣ ರೈ ಕುದ್ಕಾಡಿ ನೇತೃತ್ವದಲ್ಲಿ  ಹಾಗೂ ಶಾಲಾಭಿವೃದ್ಧಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿ ಸಂಘ ಮತ್ತು ಪೋಷಕರ ಸಹಕಾರದಿಂದ ಶಾಲಾ ಕೊಠಡಿ ದುರಸ್ತಿ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎ ಹಾಗೂ ಶಿಕ್ಷಕ ವೃಂದದವರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here