ವಿದ್ಯಾರ್ಥಿಗಳ ಯಶಸ್ಸಿಗೆ ಏಕಾಗ್ರತೆ , ಶಿಸ್ತು, ಆತ್ಮ ನಂಬಿಕೆಗಳು ಕೀಲಿ ಕೈ :ಡಾ. ಎ. ಎನ್ ಕುಮಾರ್
ಪುತ್ತೂರು : ಸಂತ ಫಿಲೋಮಿನಾ ಪ. ಪೂ ಕಾಲೇಜಿನ ಮಾನವಿಕ ವಿಭಾಗದ ವತಿಯಿಂದ ಕಲಾ ವಿದ್ಯಾರ್ಥಿಗಳಿಗೆ ಅ.18 ರಂದು ಕಾಲೇಜಿನ ಸಭಾಂಗಣದಲ್ಲಿ ವ್ಯಕ್ತಿತ್ವ ವಿಕಸನದ ಕುರಿತು ಅರಿವು ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿ ಡಾ. ಎ. ಎನ್ ಕುಮಾರ್ ಮಾತನಾಡಿ ಯುವಕರು ದೇಶದ ಆಶಾಕಿರಣ. ಈ ನಿರೀಕ್ಷೆಗೆ ಅರ್ಹರಾಗಲು ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳಿ. ಯಶಸ್ಸಿಗೆ ಏಕಾಗ್ರತೆ, ಶಿಸ್ತು, ಆತ್ಮ ನಂಬಿಕೆಗಳು ಕೀಲಿ ಕೈಗಳಿದ್ದಂತೆ ಎಂದರು. ಶಿಸ್ತು ವಿದ್ಯಾರ್ಥಿಗಳಿಗೆ ತಮ್ಮ ಗುರಿಗಳನ್ನು ಸಾಧಿಸಲು ಉತ್ತಮ ಮಾರ್ಗದರ್ಶನ ನೀಡುತ್ತದೆ. ಪೋಷಕರು ಮತ್ತು ಶಿಕ್ಷಕರ ಸಂತೃಪ್ತಿಯು ವಿದ್ಯಾರ್ಥಿಗಳಲ್ಲಿ ಶಾಲೆಯ ಶಿಸ್ತಿನ ಮಟ್ಟವನ್ನು ಪ್ರತಿಬಿಂಬಿಸುತ್ತದೆ. ಉತ್ತಮ ಸಮಯ ನಿರ್ವಹಣೆಯು ಯಶಸ್ಸಿನ ರಹಸ್ಯವಾಗಿದೆ ಮತ್ತು ಇದು ಕೌಶಲ್ಯವನ್ನು ಅಭಿವೃದ್ಧಿಪಡಿಸಬೇಕು. ಸಾಧನೆ ಎಂಬುವುದೇ ಹಾಗೇ ಅದಕ್ಕೆ ನಂಬಿಕೆ, ಆತ್ಮವಿಶ್ವಾಸ, ನಿರ್ದಿಷ್ಟ ಗುರಿ ಎಂಬುವುದು ಅತೀ ಅಗತ್ಯ. ಸಾಧನೆಯ ಹಂಬಲ ಎಂಬುದು ಇದ್ದರೆ ವ್ಯಕ್ತಿ ಯಶಸ್ಸಿನ ಉತ್ತುಂಗಕ್ಕೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಭರತ್ ಕುಮಾರ್ ಎ ವಂದಿಸಿದರು. ಕಲಾ ವಿಭಾಗದ ವಿದ್ಯಾರ್ಥಿಗಳು,ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.