ಅಕ್ಷಯ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನದ ಆಚರಣೆ

0

ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ಇದರ ಫ್ಯಾಶನ್ ಡಿಸೈನ್ ವಿಭಾಗದ “ಫೇಸರ” ಫ್ಯಾಶನ್ ಡಿಸೈನ್ ಅಸೋಸಿಯೇಷನ್ ನ ಆಯೋಜನೆಯಲ್ಲಿ ಮತ್ತು ಐಕ್ಯೂಏಸಿ ಸಹಯೋಗದಲ್ಲಿ ನಡೆದ ಸಾಂಪ್ರದಾಯಿಕ ದಿನಾಚರಣೆ – 2024ರ ಪ್ರಯುಕ್ತ ಫ್ಯಾಶನ್ ಶೋ ಅ.19ರಂದು ಕಾಲೇಜಿನ ಆಡಿಟೋರಿಯಂ ನಲ್ಲಿ ನಡೆಯಿತು. 

ಸಾಂಪ್ರದಾಯಿಕ ಉಡುಗೆಗಳ ವಿಷಯದಲ್ಲಿ ನಡೆದ ಫ್ಯಾಶನ್ ಶೋ ಸ್ಪರ್ಧೆಯ ಉದ್ಘಾಟಕರಾಗಿ ವಿದುಷಿ ಪ್ರೀತಿಕಲಾ, ನಿರ್ದೇಶಕರು, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ಪುತ್ತೂರು ಅವರು  ಆಗಮಿಸಿದ್ದರು. ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಇವರು ವಹಿಸಿದ್ದು, ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ. ಎ., ಫ್ಯಾಶನ್ ಡಿಸೈನ್ ಅಸೋಸಿಯೇಷನ್ ಮುಖ್ಯಸ್ಥ ಕಿಶನ್ ಎನ್. ರಾವ್ ಹಾಗೂ ಅಧ್ಯಾಪಕ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.       

ಪ್ರಥಮ ಫ್ಯಾಶನ್ ಡಿಸೈನ್ ವಿಭಾಗದ ಮೋಕ್ಷ ಅವರು ಕಾರ್ಯಕ್ರಮದ ನಿರೂಪಣೆ  ಮಾಡಿದರು. ತೃತೀಯ ಫ್ಯಾಶನ್ ಡಿಸೈನ್ ವಿದ್ಯಾರ್ಥಿನಿ ಧನ್ಯಶ್ರೀ ಅವರು ಸ್ವಾಗತ ಮಾಡಿದರು. ಉದ್ಘಾಟಕರ ಕಿರುಪರಿಚಯವನ್ನು  ತೃತೀಯ ಫ್ಯಾಶನ್ ಡಿಸೈನ್ ವಿದ್ಯಾರ್ಥಿನಿ ಐಶ್ವರ್ಯ ಅವರು ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಫ್ಯಾಶನ್ ಶೋ ಸ್ಪರ್ಧೆಯ ಫಲಿತಾಂಶವನ್ನು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ರಶ್ಮಿ ಅವರು ಘೋಷಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ತೃತೀಯ ಫ್ಯಾಶನ್ ಡಿಸೈನ್ ವಿದ್ಯಾರ್ಥಿನಿ ಅಮಿತ ಅವರು ಧನ್ಯವಾದ ಸಮರ್ಪಿಸಿದರು.

ವಿಜೇತರ ಪಟ್ಟಿ:

Best costume female –  Aishwarya 3rd Bsc Fd

Best costume male – Hariprasad 1st B.A

Winner female – Pratheeksha 1st Bsc Fd

Winner male – Sathyanarayana  2nd BCA

Runner female – Poojitha3rd Bsc ID

Runner male – Srujan 2nd BCA

Winner team – Team Drona

1st runner up -Team Garuda

2nd runner up – Team Vajra

LEAVE A REPLY

Please enter your comment!
Please enter your name here