ರಾಜ್ಯ ಸರಕಾರಿ ನೌಕರರ ಸಂಘದ ಕಡಬ ಕಾರ್ಯಕಾರಿ ಸಮಿತಿ- 14 ಇಲಾಖೆಗಳಿಂದ 22 ನಿರ್ದೇಶಕರ ಅವಿರೋಧ ಆಯ್ಕೆ

0

ಕಡಬ: ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಗೆ ಕಡಬ ತಾಲೂಕಿನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 14 ಇಲಾಖೆಗಳ 22 ಸ್ಥಾನಗಳಿಗೆ 30 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಇವರಲ್ಲಿ 8 ಮಂದಿ ನಾಮಪತ್ರಗಳನ್ನು ಅ.21ರಂದು ಹಿಂತೆಗೆದುಕೊಂಡ ಹಿನ್ನಲೆಯಲ್ಲಿ 22 ಸ್ಥಾನಗಳಿಗೆ ನಿರ್ದೇಶಕರಾಗಿ ಅವಿರೋಧ ಆಯ್ಕೆ ನಡೆದಿದೆ.


ಪಶುಪಾಲನೆ ಇಲಾಖೆಯ 1 ಸ್ಥಾನಕ್ಕೆ ದಿವಾಕರರವರು. ಕಂದಾಯ ಇಲಾಖೆಯ 2 ಸ್ಥಾನಗಳಿಗೆ ಶೇಷಾದ್ರಿ ಹಾಗೂ ಶುತಿಯವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಾಲೆಯ 4 ಸ್ಥಾನಗಳಿಗೆ ಒಟ್ಟು 9 ನಾಮಪತ್ರಗಳು ಸಲ್ಲಿಕೆಯಾಗಿದ್ದು ಇವರಲ್ಲಿ ಬಾಲಕೃಷ್ಣ ಕೆ. ಅಬ್ರಹಾಂ.ಎಂ. ಪ್ರದೀಪ್ ಬಿ. ಗೋವಿಂದ ನಾಯ್ಕ, ಕುಮಾರ್ ಕೆ.ಎಸ್.ರವರು ನಾಮಪತ್ರ ಹಿಂತೆಗೆದುಕೊಂಡಿದ್ದು ಈ ಹಿನ್ನಲೆಯಲ್ಲಿ ರಾಮಕೃಷ್ಣ ಮಲ್ಲಾರ, ದಿಲೀಪ್ ಕುಮಾರ್, ವಿಮಲ್ ಕುಮಾರ್, ನಿಂಗರಾಜುರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರೌಢ ಶಾಲಾ ವಿಭಾಗದ 1 ಸ್ಥಾನಕ್ಕೆ ಮಾಮಚ್ಚನ್, ಶಾಂತರಾಮರವರು ನಾಮಪತ್ರ ಹಿಂತೆಗೆದುಕೊಂಡ ಹಿನ್ನಲೆಯಲ್ಲಿ ಶ್ರೀಲತಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಿಕ್ಷಣ ಇಲಾಖೆಯ ಆಡಳಿತ ಕಛೇರಿ ವಿಭಾಗದ 1 ಸ್ಥಾನಕ್ಕೆ ಅತುಲ್ ಭಟ್, ಪ.ಪೂ.ಕಾಲೇಜು ವಿಭಾಗದ 1 ಸ್ಥಾನಕ್ಕೆ ವಾಸುದೇವ ಕೋಲ್ಪೆ, ಸಮಾಜ ಕಲ್ಯಾಣ ಇಲಾಖೆಯ 1 ಸ್ಥಾನಕ್ಕೆ ಲತೇಶ್ ಕುಮಾರ್, ಅರಣ್ಯ ಇಲಾಖೆಯ 1 ಸ್ಥಾನಕ್ಕೆ ಯೋಗೀಶ್‌ರವರು ಆಯ್ಕೆಯಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 4 ಸ್ಥಾನಕ್ಕೆ ಸಲ್ಲಿಸಲಾಗಿದ್ದ ನಾಮಪತ್ರದಲ್ಲಿ ರವಿಶಂಕರ್ ಎಂ. ಅವರು ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ ಮಾಲತಿ ಎಂ.ಡಿ. ಯಶ್ ರಾಜ್, ಹರ್ಷ ಕುಮಾರ್, ಜಿನ್ಸಿ ಪಿ.ಎ.ರವರು ಆಯ್ಕೆಯಾಗಿದ್ದಾರೆ. ಖಜಾನೆ ಇಲಾಖೆಯ 1 ಸ್ಥಾನಕ್ಕೆ ಶಿವರಾಜ್ ಎಂ. ಗ್ರಾಮೀಣಾಭಿವೃದ್ಧಿ ಇಲಾಖೆಯ 2 ಸ್ಥಾನಗಳಿಗೆ ಸಂದೇಶ್ ಹಾಗೂ ಯಶವಂತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ 1 ಸ್ಥಾನಕ್ಕೆ ಪುಷ್ಪಾವತಿ ಡಿ.ಎಂ. ಪಟ್ಟಣ ಪಂಚಾಯತ್ ನ 1 ಸ್ಥಾನಕ್ಕೆ ಹರೀಶ್ ಬೆದ್ರಾಜೆ, ಭೂಮಾಪನ ಇಲಾಖೆಯ 1 ಸ್ಥಾನಕ್ಕೆ ಗಿರಿ ಗೌಡರವರುಗಳು ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ನಿವೃತ್ತ ಪಿಡಿಒ ಜೆರಾಲ್ಡ್ ಮಸ್ಕರೇನಸ್ ಚುನಾವಣಾಧಿಕಾರಿಯಾಗಿದ್ದರು.

LEAVE A REPLY

Please enter your comment!
Please enter your name here