3 ಇಲಾಖೆಗಳ 7 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ -10 ಮಂದಿ ಕಣದಲ್ಲಿ
ಎಪಿಎಂಸಿಯಿಂದ ಸಲ್ಲಿಕೆಯಾಗಿದ್ದ ಎರಡೂ ನಾಮಪತ್ರಗಳು ತಿರಸ್ಕೃತ
ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆಯ ಕಾರ್ಯಕಾರಿ ಸಮಿತಿಯ 34 ನಿರ್ದೇಶಕ ಸ್ಥಾನಗಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ತಾಲೂಕಿನ 21 ಇಲಾಖೆಗಳಿಂದ 25 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 3 ಇಲಾಖೆಗಳ 7 ಸ್ಥಾನಗಳಿಗೆ 10 ಮಂದಿ ಕಣದಲ್ಲಿದ್ದು ಅ.28ರಂದು ಚುನಾವಣೆ ನಡೆಯಲಿದೆ.
ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾದ ಅ.21ರಂದು ಪ್ರಾಥಮಿಕ ಶಾಲೆಗಳಿಂದ ಸಲ್ಲಿಕೆಯಾಗಿದ್ದ 7 ನಾಮಪತ್ರಗಳ ಪೈಕಿ ರಾಮಣ್ಣ ರೈ ಎಸ್,
ಸ್ಮಿತಾಶ್ರೀ, ಶಾಲಿನಿ ಜಿ.ಯವರು ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಹಾಗೂ ಸಾಂಖ್ಯಿಕ ಇಲಾಖೆಯ 2 ಸ್ಥಾನಗಳಿಗೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು 1 ಸ್ಥಾನ ಖಾಲಿಯಿದೆ. ಪ್ರಾಥಮಿಕ ಶಾಲೆಗಳ 3 ಸ್ಥಾನಕ್ಕೆ 4 ಮಂದಿ, ಸರಕಾರಿ ಪ್ರೌಢಶಾಲೆಗಳ 2 ಸ್ಥಾನಕ್ಕೆ 3 ಮಂದಿ ಕಣದಲ್ಲಿದ್ದಾರೆ. ಆರೋಗ್ಯ ಇಲಾಖೆಯ 4 ಸ್ಥಾನಗಳ ಪೈಕಿ ಸಾರ್ವಜನಿಕ ಆಸ್ಪತ್ರೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ತಲಾ ಒಂದು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 2 ಸ್ಥಾನಗಳಿಗೆ 3 ಮಂದಿ ಕಣದಲ್ಲಿದ್ದು ಚುನಾವಣೆ ನಡೆಯಲಿದೆ. ಚುನಾವಣಾಧಿಕಾರಿಯಾಗಿ ನಿವೃತ್ತ ಉಪ ತಹಶೀಲ್ದಾರ್ ಸೂರಪ್ಪ ಗೌಡ, ಸಹಾಯಕ ಚುನಾವಣಾಽಕಾರಿಯಾಗಿ ನಿವೃತ್ತ ಶಿಕ್ಷಕ ಪ್ಯಾಟ್ರಿಕ್ ಲೋಬೋ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
21 ಇಲಾಖೆಗಳಿಂದ 25 ಮಂದಿ ಅವಿರೋಧ ಆಯ್ಕೆ:
ಕೃಷಿ ಇಲಾಖೆಯಿಂದ ಭರತ್, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯಿಂದ ಡಾ.ಧರ್ಮಪಾಲ ಕೆ., ಕಂದಾಯ ಇಲಾಖೆಯಿಂದ ಚಂದ್ರ ನಾಯ್ಕ ಎನ್, ಸುಲೋಚನಾ ಪಿ.ಕೆ., ಲೋಕೋಪಯೋಗಿ ಇಲಾಖೆಯಿಂದ ಪ್ರತೀಕ್ ಎನ್.ಎಸ್., ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಸಂದೀಪ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಕಚೇರಿಯಿಂದ ಜಯರಾಜ ಕೆ.ಎಂ., ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಿಂದ ಹರಿಪ್ರಕಾಶ್ ಬಿ., ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತ ಇಲಾಖೆಯಿಂದ ಕೃಷ್ಣ ಬಿ., ಅರಣ್ಯ ಇಲಾಖೆಯಿಂದ ಶಿವಾನಂದ ಆಚಾರ್ಯ, ದಿವೀಶ್ ಕೆ., ಆರೋಗ್ಯ ಇಲಾಖೆಯಿಂದ ಎ-.ಜಿ ಮಂಗನ್ ಗೌಡ, ಲೀಲಯ್ಯ ಎಂ., ತೋಟಗಾರಿಕಾ ಇಲಾಖೆಯಿಂದ ಸುಽರ್ ಪಿ., ಖಜಾನೆ ಇಲಾಖೆಯಿಂದ ಆಶಾ ಕೆ., ಭೂಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಿಂದ ಪ್ರಮೋದ್ ಕುಮಾರ್ ಕೆ., ನ್ಯಾಯಾಂಗ ಇಲಾಖೆಯಿಂದ ಚಂದ್ರಶೇಖರ ನಾಯ್ಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ನಾಗೇಶ್ ಎಂ., ರವಿಚಂದ್ರ ಎಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸುಜಾತ ಎಸ್., ಸಾರಿಗೆ ಇಲಾಖೆಯಿಂದ ಗಣೇಶ್ ಕೆ.ಎಂ., ಅಬಕಾರಿ ಇಲಾಖೆಯಿಂದ ವಿಜಯ ಕುಮಾರ್ ಕೆ., ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕಪರಿಶೋಧನ ಹಾಗೂ ಸಾಂಖ್ಯಿಕ ಇಲಾಖೆಯಿಂದ ಕವಿತಾ ಕೆ., ವಾಣಿಜ್ಯ ತೆರಿಗೆ ಇಲಾಖೆಯಿಂದ ವರುಣ್ ಕುಮಾರ್ ಬಿ., ಕಾರ್ಮಿಕ ಇಲಾಖೆಯಿಂದ ಸಾವಿತ್ರಿ ಬಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಪಿಎಂಸಿಯ ಎರಡೂ ನಾಮಪತ್ರಗಳು ತಿರಸ್ಕೃತ:
ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ 1 ಸ್ಥಾನಕ್ಕೆ ರಾಮಚಂದ್ರ, ಪವಿತ್ರ ಕೆ.ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆಯ ಸಂದರ್ಭದಲ್ಲಿ ಎರಡೂ ಅಭ್ಯರ್ಥಿಗಳಿಂದಲೂ ಪರಸ್ಪರ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ರಾಮಚಂದ್ರರವರ ವಿರುದ್ಧದ ಆರೋಪದ ಇಲಾಖಾ ವಿಚಾರಣೆ ಕಾಯ್ದಿರಿಸಿ ಅವರ ಅಮಾನತು ತೆರವುಗೊಳಿಸಿ ಖಾಲಿ ಇದ್ದ ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕ್ಷಕ ಹುದ್ದೆಗೆ ನಿಯುಕ್ತಿಗೊಳಿಸಿ ಕರ್ನಾಟಕ ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಬೆಂಗಳೂರು ಇವರ ಆದೇಶವಾಗಿರುವ ಹಿನ್ನೆಲೆಯಲ್ಲಿ ರಾಮಚಂದ್ರರವರ ನಾಮಪತ್ರ ತಿರಸ್ಕೃತಗೊಳಿಸಲಾಗಿದೆ. ಪವಿತ್ರರವರ ನಾಮಪತ್ರದಲ್ಲಿ ಸೂಚಕರಾಗಿರುವ ಎಪಿಎಂಸಿ ಕಾರ್ಯದರ್ಶಿ ಎಂ.ಸಿ ಪಡಗನೂರ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಎಂ.ಸಿ ಪಾಡುರಂಗ ಎಂದು ಉಲ್ಲೇಖವಿದೆ. ಅವರು ತಿದ್ದುಪಡಿಗೆ ಮನವಿ ಮಾಡಿದ್ದರೂ, ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು ಅವರು ಪರಿಶೀಲನೆ ಸಂದರ್ಭದಲ್ಲಿ ಆಕ್ಷೇಪಣೆ ಸಲ್ಲಿಸದೇ ಇರುವುದರಿಂದ ಪವಿತ್ರ ರವರ ನಾಮಪತ್ರ ತಿರಸ್ಕೃತಗೊಳಿಸಲಾಗಿದೆ ಎಂದು ಚುನಾವಣಾಽಕಾರಿಗಳು ತಿಳಿಸಿದ್ದಾರೆ.
ಅ.28: ಚುನಾವಣೆ
ಸರಕಾರಿ ಪ್ರಾಥಮಿಕ ಶಾಲೆಗಳ 3 ಸ್ಥಾನ, ಸರಕಾರಿ ಪ್ರೌಢಶಾಲೆಗಳ 2 ಸ್ಥಾನ ಹಾಗೂ ಆರೋಗ್ಯ ಇಲಾಖೆ 2 ಸ್ಥಾನಗಳಿಗೆ ಸ್ಪರ್ಧೆ ಏರ್ಪಟ್ಟಿದ್ದು ಅ.28ರಂದು ಚುನಾವಣೆ ನಡೆಯಲಿದೆ. ಮತದಾನ ಪ್ರಕ್ರಿಯೆಗಳು ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ನಡೆದು ಸಂಜೆ ಮತ ಎಣಿಕೆಯಾಗಿ ಫಲಿತಾಂಶ ಘೋಷಣೆಯಾಗಲಿದೆ.
3 ಇಲಾಖೆಗಳ 7 ಸ್ಥಾನಕ್ಕೆ 10 ಮಂದಿ ಕಣದಲ್ಲಿ;
ಸರಕಾರಿ ಪ್ರಾಥಮಿಕ ಶಾಲೆಗಳ 3 ಸ್ಥಾನಕ್ಕೆ ಜೂಲಿಯಾನ್ ಮೊರಾಸ್, ಶಾಲಿನಿ ಬಿ., ಬಾಬು ಎಂ., ರಾಮಣ್ಣ ರೈ ಎಸ್., ಸ್ಮಿತಾಶ್ರೀ ಬಿ., ಮಹಮ್ಮದ್ ಅಶ್ರಫ್ ಕೆ., ತನುಜಾ ಮೋಹನ ಕಡವಾಡ್ಕರ್ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ರಾಮಣ್ಣ ರೈ ಎಸ್., ಸ್ಮಿತಾಶ್ರೀ ಬಿ., ಶಾಲಿನಿ ಬಿ.ಯವರು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಜೂಲಿಯಾನ್ ಮೊರಾಸ್, ತನುಜಾ ಮೋಹನ ಕಡವಾಡ್ಕರ್, ಬಾಬು ಎಂ., ಮಹಮ್ಮದ್ ಅಶ್ರಫ್ ಕೆ. ಅಂತಿಮ ಕಣದಲ್ಲಿದ್ದಾರೆ. ಸರಕಾರಿ ಪ್ರೌಢಶಾಲೆಗಳ 2 ಸ್ಥಾನಗಳಿಗೆ ಅಬ್ರಹಾಂ ಎಸ್.ಎ., ಕೆ.ಎಸ್ ವಿನೋದ್ ಕುಮಾರ್, ಜಗನ್ನಾಥ ಪಿ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಾಕಿಯುಳಿದ 2 ಸ್ಥಾನಗಳಿಗೆ ಇಂದಿರಾ ಕೆ.ಎಸ್., ಪದ್ಮಾವತಿ ಎಂ.ಆರ್., ಸುನೀಲ್ ವಿ.ಕಣದಲ್ಲಿದ್ದು ಚುನಾವಣೆ ನಡೆಯಲಿದೆ.