ಪುತ್ತೂರು: ಕಲಾ ಸಿರಿ ಗೊಂಬೆ ಬಳಗ ಪುತ್ತೂರು ಇವರ ವತಿಯಿಂದ ನವರಾತ್ರಿಯ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರಿಗಾಗಿ 7ನೇ ವರ್ಷದ ಧನ ಸಂಗ್ರಹಿಸುವ ಕಾರ್ಯಕ್ರಮ ‘ಭವತಿ ಭಿಕ್ಷಾಂ ದೇಹಿ’ ಯೋಜನೆಯಲ್ಲಿ ಸಂಗ್ರಹವಾದ ರೂ.47,000ನ್ನು ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ಕುಟುಂಬದ ಹೆಣ್ಣು ಮಗಳಾದ ಕುಮಾರಿ ಅಶ್ವಿನಿ ಅವರಿಗೆ ಹಸ್ತಾಂತರಿಸಲಾಯಿತು. ವಿಟ್ಲ ಪ್ರೌಢ ಶಾಲೆಯ ಕನ್ನಡ ಪ್ರಾಧ್ಯಾಪಕಿ ಅನ್ನಪೂರ್ಣ ರವರು ನೆರವು ಮೊತ್ತವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರಕ್ತದಾನಿ ಸಂಘಟಕ ನವೀನ್ ಸಿಟಿಗುಡ್ಡೆ, ಕಲಾ ಸಿರಿ ಗೊಂಬೆ ಬಳಗದ ಕಲಾವಿದರು ಉಪಸ್ಥಿತರಿದ್ದರು.