ಯೂನಿಯನ್ ಬ್ಯಾಂಕ್ ಪೆರ್ಲಂಪಾಡಿ ಶಾಖೆಯ ಹೆಡ್ ಕ್ಯಾಶಿಯರ್ ಸುಬ್ಬಪ್ಪ ಪಾಟಾಳಿ ನಿವೃತ್ತಿ

0

ಪುತ್ತೂರು: ಯೂನಿಯನ್ ಬ್ಯಾಂಕ್ ಪೆರ್ಲಂಪಾಡಿ ಶಾಖೆಯಲ್ಲಿ ಹೆಡ್ ಕ್ಯಾಶಿಯರ್ ಆಗಿರುವ ಸುಬ್ಬಪ್ಪ ಪಾಟಾಳಿ ಪಟ್ಟೆ ಇವರು ಅ.30ರಂದು ವಯೋನಿವೃತ್ತಿ ಹೊಂದಲಿದ್ದಾರೆ.
ಪಟ್ಟೆ ದಿ.ಮಹಾಲಿಂಗ ಪಾಟಾಳಿ ಮತ್ತು ಗಿರಿಜ ದಂಪತಿ ಪುತ್ರರಾಗಿರುವ ಸುಬ್ಬಪ್ಪ ಪಾಟಾಳಿಯವರು ಪಟ್ಟೆ ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ , ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಕೊಂಬೆಟ್ಟು ಸ.ಪ.ಪೂ ಕಾಲೇಜಿನಲ್ಲಿ ಪಿಯುಸಿಯನ್ನು ಪೂರೈಸಿದ್ದರು.


ಇವರು 1984 ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡು ಹೈದರಾಬಾದ್ ನಲ್ಲಿ ತರಬೇತಿಯನ್ನು ಮುಗಿಸಿ ರಾಜಸ್ಥಾನದ ನಸೀರಬಾದ್, ಜಮ್ಮುವಿನ ಪೂಂಚ್, ಝಾನ್ಸಿ, ಹರ್ಯಾಣದ ಅಂಬಾಳ, ಪಂಜಾಬ್ ನ ಫರೀದ್ ಕೊಟ್, ಸಿಕಂದರಾಬಾದ್, ಮಧ್ಯಪ್ರದೇಶದ ತಾಲ್ ಬಹಾಟ್, ಮಹಾರಾಷ್ಟ್ರದ ನಾಸಿಕ್ ಸೇರಿದಂತೆ ಒಟ್ಟು 17 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿದ್ದರು.

2001ರಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದು ಹುಟ್ಟೂರಿಗೆ ಆಗಮಿಸಿದ ಬಳಿಕ, 2007 ಏಪ್ರಿಲ್ ತಿಂಗಳಲ್ಲಿ ಮಂಗಳೂರಿನ ಕಾರ್ಪೊರೇಷನ್ ಬ್ಯಾಂಕ್ ನ ಪ್ರಧಾನ ಕಛೇರಿಯಲ್ಲಿ ಉದ್ಯೋಗಕ್ಕೆ ನೇಮಕಗೊಂಡು, ನಂತರ ಪುತ್ತೂರಿನ ಪ್ರಧಾನ ಕಛೇರಿ, ಪೆರ್ಲಂಪಾಡಿ ಹಾಗೂ ದರ್ಬೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಯೂನಿಯನ್ ಬ್ಯಾಂಕ್ ನ ಪೆರ್ಲಂಪಾಡಿ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತ ಗ್ರಾಹಕ ಸ್ನೇಹಿ ನೌಕರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತಾಯಿ ಗಿರಿಜ, ಪತ್ನಿ ಪವಿತ್ರ, ಪುತ್ರ ಬಜಾಜ್ ಎಲಯನ್ಸ್ ಉದ್ಯೋಗಿ ಶ್ರೇಯಸ್, ಪುತ್ರಿ ಬೆಂಗಳೂರಿನ ಕೆಪಿಎಂಜಿ ಕಂಪನಿ ಉದ್ಯೋಗಿ ಹರ್ಷಿತಾರವರೊಂದಿಗೆ ಪಟ್ಟೆಯಲ್ಲಿ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here