ಉಪ್ಪಿನಂಗಡಿ: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಅಮೂಲ್ಯ ದಾಖಲೆ ಪತ್ರ ಹಾಗೂ ನಗದು ಹಣವಿದ್ದ ಚೀಲವನ್ನು ವಾರೀಸುದಾರರಿಗೆ ಹಿಂದಿರುಗಿಸುವ ಮೂಲಕ ಸಾಮಾಜಿಕ ಮುಂದಾಳು ರಾಮಚಂದ್ರ ಮಣಿಯಾಣಿ ಪ್ರಾಮಾಣಿಕತೆ ಮೆರೆದಿದ್ದಾರೆ.
ರಾಮಕುಂಜ ಗ್ರಾಮದ ನೆಬಿಸಾ ತನ್ನ ಮನೆಯ ಮೂಲ ದಾಖಲೆಗಳನ್ನು ಹಾಗೂ ಹಣವಿದ್ದ ಚೀಲವನ್ನು ಕಳೆದುಕೊಂಡಿದ್ದರು. ಇದು ರಾಮಚಂದ್ರ ಮಣಿಯಾಣಿಯವರಿಗೆ ಸಿಕ್ಕಿದ್ದು, ಆ ಚೀಲದಲ್ಲಿದ್ದ ಅರ್ಜಿಯೊಂದರಲ್ಲಿ ಬರೆದಿದ್ದ ಮೊಬೈಲ್ ಸಂಖ್ಯೆಯನ್ನು ಬಳಸಿ ಸಂಪರ್ಕಿಸಿದಾಗ, ನೆಬೀಸಾ ರವರು ದಾಖಲೆಗಳನ್ನು ಕಳೆದುಕೊಂಡು ಕಂಗಾಲಾಗಿರುವುದು ತಿಳಿದುಬಂತು. ಕೂಡಲೇ ನೆಬೀಸಾ ಅವರು ಮಕ್ಕಳನ್ನು ಉಪ್ಪಿನಂಗಡಿಗೆ ಕಳುಹಿಸಿ ರಾಮಚಂದ್ರ ಮಣಿಯಾಣಿಯವರಿಂದ ನಗದು ಸಹಿತ ದಾಖಲೆಗಳನ್ನು ಸ್ವೀಕರಿಸಿ ಧನ್ಯವಾದ ಸಲ್ಲಿಸಿದರು.