ಕೆಯ್ಯೂರು: ಪ್ರತಿಭಾ ಪ್ರೌಢಶಾಲೆ ಪಟ್ಟೆ ಶಾಲೆಯಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹದಿನೇಳರ ವಯೋಮಾನದ ಬಾಲಕರ ವಿಭಾಗ ಹಾಗೂ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳನ್ನು ಪಡೆದುಕೊಂಡು ಕೆಪಿಎಸ್ ಕೆಯ್ಯೂರಿನ ಪ್ರೌಢಶಾಲಾ ವಿಭಾಗವು ಶ್ರೇಷ್ಠ ಸಾಧನೆ ಮಾಡಿದೆ.
ಹದಿನೇಳರೊಳಗಿನ ವಯೋಮಾನದ ಬಾಲಕರ ವಿಭಾಗದಲ್ಲಿ ಮಹಮ್ಮದ್ ಸುಹೈಲ್: ಉದ್ದಜಿಗಿತ ಪ್ರಥಮ, 100 ಮೀ. ಓಟ ದ್ವಿತೀಯ ಹಾಗೂ 200 ಮೀ ಓಟ ದ್ವಿತೀಯ, ಮಹಮ್ಮದ್ ಜಂಶೀದ್ : 400 ಮೀ ಓಟ ಪ್ರಥಮ, 800 ಮೀ ಓಟ ಪ್ರಥಮ, ನಿಶಾಂತ್ ಪಿ: 3000 ಮೀ ಓಟ ದ್ವಿತೀಯ, 1500 ಮೀ ಓಟ ದ್ವಿತೀಯ, ಮಹಮ್ಮದ್ ಫೈಝಲ್ ಶೇಕ್ : ಎತ್ತರ ಜಿಗಿತ ಪ್ರಥಮ, 4×400 ಮೀ ರಿಲೇ ಮಹಮ್ಮದ್ ಫೈಝಲ್ ಶೇಕ್, ಗುರುಕಿರಣ್, ಮಹಮ್ಮದ್ ಅನ್ಸೀಫ್, ಮಹಮ್ಮದ್ ಜಂಶೀದ್ ಇವರ ತಂಡ ಪ್ರಥಮ ಸ್ಥಾನ ಪಡೆಯುವದರೊಂದಿಗೆ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿತು. ಅದೇ ರೀತಿ ಹದಿನೇಳರೊಳಗಿನ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಫಾತಿಮತ್ ಶಮ್ನಾ: 100 ಮೀ ಓಟ ಪ್ರಥಮ, 200 ಮೀ ಓಟ ಪ್ರಥಮ, ಧೃತಿ ಜೆ ರೈ: ಎತ್ತರ ಜಿಗಿತ ಪ್ರಥಮ, ಫಾತಿಮತ್ ಇಶಾನ: ಉದ್ದಜಿಗಿತ ಪ್ರಥಮ, ಫಾತಿಮತ್ ಅಝ್ಮಿಯಾ: ಉದ್ದ ಜಿಗಿತ ದ್ವಿತೀಯ, ಫಾತಿಮತ್ ಅಫ್ರೀನಾ: 100 ಮೀ ಓಟ ತೃತೀಯ, ಫಾತಿಮತ್ ಅಫ್ರೀನಾ 3000 ಮೀ ಓಟ ತೃತೀಯ, ಅಫ್ರೀನಾ: 800 ಮೀ ಓಟ ತೃತೀಯ, ನವ್ಯಶ್ರೀ ಬಿ: 400 ಮೀ ಓಟ ಪ್ರಥಮ, ಯಕ್ಷಿತಾ: ಜ್ಯಾವೆಲಿನ್ ಎಸೆತ ತೃತೀಯ, 4×400 ಮೀ ರಿಲೇಯಲ್ಲಿ ಫಾತಿಮತ್ ಅಫ್ರೀನಾ, ನವ್ಯಶ್ರೀ ಬಿ, ಅಫ್ರೀನಾ ಹಾಗೂ ಫಾತಿಮತ್ ಅಝ್ಮಿಯಾ ಇವರ ತಂಡ ಪ್ರಥಮ, 4×100 ಮೀ ರಿಲೇಯಲ್ಲಿ ಫಾತಿಮತ್ ಶಮ್ನಾ, ಫಾತಿಮತ್ ಅಫ್ರೀನಾ, ಅಫ್ರೀನಾ ಹಾಗೂ ಯಕ್ಷಿತಾ ಇವರ ತಂಡ ಪ್ರಥಮ ಸ್ಥಾನವನ್ನು ಗಳಿಸುವುದರೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಹದಿನಾಲ್ಕರೊಳಗಿನ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಫಾತಿಮತ್ ರಿಫಾನ: ಗುಂಡೆಸೆತದಲ್ಲಿ ತೃತೀಯ, ಚಕ್ರ ಎಸೆತದಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ.
ಕೆಪಿಎಸ್ ಕೆಯ್ಯೂರು ಉಪಪ್ರಾಂಶುಪಾಲ ಕೆ.ಎಸ್ ವಿನೋದ್ ಕುಮಾರ್ ತಿಳಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿಯಾದ ಇಂದಿರಾ ಪಿ ಕ್ರೀಡಾಪಟುಗಳಿಗೆ ತರಬೇತಿ ನೀಡಿದರು. ಅತಿಥಿ ಶಿಕ್ಷಕಿಯರಾದ ನಾಗವೇಣಿ ಹಾಗೂ ರಮ್ಯ ಪಿ.ಡಿ, ತಂಡದ ವ್ಯವಸ್ಥಾಪಕರಾಗಿ ಸಹಕರಿಸಿದರು.