ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಐತ್ತಪ್ಪರವರ ವಿದಾಯ ಸಮಾರಂಭ

0

ಶಾಲೆಯ ಅಭಿವೃದ್ಧಿಯಲ್ಲಿ ಐತ್ತಪ್ಪರವರ ಸೇವೆ ಶ್ಲಾಘನೀಯ- ಕಾವು ಹೇಮನಾಥ ಶೆಟ್ಟಿ

ಚಿತ್ರ- ಜೀತ್ ಪುತ್ತೂರು


ಪುತ್ತೂರು: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ 38 ವರ್ಷಗಳ ಕಾಲ ಅಟೆಂಡರ್ ಕಂ ಪಿಯೋನ್ ಆಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾದ ಐತ್ತಪ್ಪ ಎಂರವರ ವಿದಾಯ ಸಮಾರಂಭ ಅ.30 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.


ಸನ್ಮಾನ
ಐತ್ತಪ್ಪರವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಐತ್ತಪ್ಪರವರ ಪತ್ನಿ ಗೀತಾರವರನ್ನು ಗೌರವಿಸಲಾಯಿತು.

ಶಾಲೆಯ ಅಭಿವೃದ್ಧಿಯಲ್ಲಿ ಐತ್ತಪ್ಪರವರ ಸೇವೆ ಶ್ಲಾಘನೀಯ- ಕಾವು ಹೇಮನಾಥ ಶೆಟ್ಟಿ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸುದೀರ್ಘವಾಗಿ 38 ವರ್ಷಗಳ ಕಾಲ ಐತ್ತಪ್ಪರವರು ಪ್ರಾಮಾಣಿಕವಾಗಿ ಸೇವೆಗೈದು ಎಲ್ಲರ ಶ್ಲಾಘನೆಯನ್ನು ಪಡೆದಿದ್ದಾರೆ. ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ವ್ಯಕ್ತಿಯಾಗಿ ಐತ್ತಪ್ಪರವರು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ 60 ವರ್ಷ ಪ್ರಾಯ ಆಯಿತು ಎಂದು ನಂಬಲು ಸಾಧ್ಯವಿಲ್ಲ, ಈಗಲೂ 50 ವರ್ಷದವರಂತೆ ಕಾಣುತ್ತಾರೆ. ಶಾಲೆಯಲ್ಲಿ ತರಕಾರಿ ಕೃಷಿಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ, ಅವರ ಕೈಗುಣದಿಂದ ತರಕಾರಿ ಕೃಷಿ ಅದ್ಭುತವಾಗಿ ಬೆಳೆದಿದೆ ಎಂದು ಹೇಳಿ, ನಿವೃತ್ತಿಯ ಬಳಿಕ ಅವರ ಕೃಷಿಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಲಿ ಎಂದು ಶುಭಹಾರೈಸಿದರು.

ಐತ್ತಪ್ಪರವರ ಸಾರ್ಥಕ ಸೇವೆ- ದಯಾನಂದ ರೈ ಮನವಳಿಕೆಗುತ್ತು
ಶಾಲಾ ಆಡಳಿತ ಮಂಡಳಿ ಸದಸ್ಯ, ಮಾತೃ ಸಂಘದ ನಿರ್ದೇಶಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ಐತ್ತಪ್ಪರವರು 38 ವರ್ಷಗಳ ಕಾಲ ಸಾರ್ಥಕವಾದ ಸೇವೆಯನ್ನು ಶಾಲೆಯಲ್ಲಿ ಸಲ್ಲಿಸಿದ್ದಾರೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.

ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ- ಮನೋಹರ್ ರೈ
ಶ್ರೀರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಎನ್ ಮನೋಹರ್ ರೈಯವರು ಮಾತನಾಡಿ ಐತ್ತಪ್ಪರವರು ಶಾಲೆಯ ಎಲ್ಲಾ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ ಎಂದು ಹೇಳಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಸಂತೃಪ್ತಿ ಇದೆ- ಐತ್ತಪ್ಪ
ಸನ್ಮಾನ ಸ್ವೀಕರಿಸಿದ ಐತ್ತಪ್ಪರವರು ಮಾತನಾಡಿ ನನ್ನ 38 ವರ್ಷಗಳ ಸೇವಾವಧಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂಬ ಸಂತೃಪ್ತಿ ಇದೆ. ನನಗೆ ಇಂದು ಶಾಲೆಯ ವತಿಯಿಂದ ಅದ್ದೂರಿಯಾದ ಸನ್ಮಾನವನ್ನು ಕಂಡು ಕೃತಜ್ಞತೆ ಸಲ್ಲಿಸಿದರು.

ಶ್ರೀರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ರೂಪಕಲಾ, ನಿವೃತ್ತ ವಿಜ್ಞಾನ ಶಿಕ್ಷಕಿ ವಸಂತಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ಮಾತನಾಡಿದರು.
ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕ ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ, , ಶಾಲಾ ಆಡಳಿತ ಮಂಡಳಿ ಸದಸ್ಯ ಹಾಗೂ ಮಾತೃ ಸಂಘದ ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು, ನಿವೃತ್ತ ಶಿಕ್ಷಕಿ ವನಿತಾ, ನಿವೃತ್ತ ಕ್ಲರ್ಕ್ ಸುವಮ್ಮ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಗಾಯತ್ರಿ ಅಭಿನಂದನಾ ಭಾಷಣಗೈದರು, ಶಿಕ್ಷಕಿ ಸಂಧ್ಯಾ ಕೆ ಸ್ವಾಗತಿಸಿ, ಶಿಕ್ಷಕಿ ಗೀತಾ ರೈ ವಂದಿಸಿದರು. ಶಿಕ್ಷಕಿಯರಾದ ಸೌಮ್ಯ ಹಾಗೂ ಶಿಲ್ಪ ಕಾರ್‍ಯಕ್ರಮ ನಿರೂಪಿಸಿದರು.

ಶಶಿಕುಮಾರ್ ರೈ ಬಾಲ್ಯೊಟ್ಟುರವರಿಂದ ಗೌರವರ್ಪಣೆ
ಬಂಟರ ಸಂಘದ ನಿಕಟಪೂರ್ವಧ್ಯಕ್ಷ ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಐತ್ತಪ್ಪರವರನ್ನು ಶಾಲು ಹಾಕಿ ಗೌರವಿಸಿದರು.
ಸಮಾರಂಭದಲ್ಲಿ ತಾಲೂಕು ಬಂಟರ ಸಂಘದ ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಗಗನ್ ಶೆಟ್ಟಿ ಕಾವು ಹಾಗೂ ಐತ್ತಪ್ಪರವರು ಕುಟುಂಬ ಬಂಧುಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here