ತಾ.ಮಟ್ಟದ ಕ್ರೀಡಾಕೂಟ: ವಿವೇಕಾನಂದ ಆ.ಮಾ ಶಾಲೆ- 1ಕೂಟ ದಾಖಲೆ, 5ವೈಯಕ್ತಿಕ ಚಾಂಪಿಯನ್ ಶಿಪ್, 3 ಪ್ರಥಮ ಸಮಗ್ರ ಮತ್ತು 2 ದ್ವಿತೀಯ ಸಮಗ್ರ ತಂಡ ಪ್ರಶಸ್ತಿಗಳೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,  ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಮತ್ತು ಸಾಂದೀಪನಿ ಗ್ರಾಮೀಣ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಗಳು, ಇವರ ಸಂಯುಕ್ತ ಆಶ್ರಯದಲ್ಲಿ  ನಡೆದ ತಾಲೂಕು  ಮಟ್ಟದ  ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿನ ವಿಧ್ಯಾರ್ಥಿಗಳು ಭಾಗವಹಿಸಿ  ಹಲವಾರು ಪದಕಗಳನ್ನು ಗಳಿಸಿ  ನವೆಂಬರ್ 4 ಮತ್ತು 05ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ  ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ 19 ವಿಧ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

17ರ ವಯೋಮಾನದ ಬಾಲಕರ ವಿಭಾಗದಲ್ಲಿ ಮನ್ವಿತ್ ನೆಕ್ಕರೆ 10ನೇ ತರಗತಿ ( ಉಮೆಶ್ ನೆಕ್ಕರೆ ಮತ್ತು ಕವಿತ ಬಿ ದಂಪತಿಯವರ ಪುತ್ರ) 200ಮೀ ಪ್ರಥಮ , 4×100ಮೀ ರಿಲೇ ಪ್ರಥಮ,  4×400ಮೀ ರಿಲೇ ಪ್ರಥಮ, 110ಮೀ ಹರ್ಡಲ್ಸ್ ದ್ವಿತೀಯ. ಮನೋಹರ್ ಕುಮಾರ್ 10ನೇ ತರಗತಿ  ( ಮಿಶ್ರಾರಾಮ್ ಮತ್ತು ಲಕ್ಶ್ಮೀದೇವಿ ದಂಪತಿಯ ಪುತ್ರ) 400ಮೀ ಪ್ರಥಮ, 8೦೦ಮೀ ದ್ವಿತೀಯ, 4×100ಮೀ ರಿಲೇ ಪ್ರಥಮ, 4×400ಮೀ ರಿಲೇ ಪ್ರಥಮ. ಮೋಕ್ಶಿತ್ 10ನೇ ತರಗತಿ ( ನಾಗರಾಜ್ ಕೆ ಮತ್ತು ಶೋಭಾ ಕೆ  ದಂಪತಿಯ   ) ಎತ್ತರ ಜಿಗಿತ ತೃತೀಯ. ಕೃಪಾಲ್ 10ನೇ ತರಗತಿ ( ಪ್ರಕಾಶ್ ಮತ್ತು ಸುನಿತಾ ದಂಪತಿಯ ಪುತ್ರ) 4×100ಮೀ ರಿಲೇ ಪ್ರಥಮ, 4×400ಮೀ ರಿಲೇ ಪ್ರಥಮ. ಮನ್ವಿತ್  ಎಮ್ ರೈ 10ನೇ ತರಗತಿ( ಮಂಜುನಾಥ ರೈ ಮತ್ತು ಪ್ರವೀಣ ರೈ ದಂಪತಿಯ ಪುತ್ರ) 4×100ಮೀ ರಿಲೇ ಪ್ರಥಮ, 4×400ಮೀ ರಿಲೇ ಪ್ರಥಮ.  ಈ ವಿಭಾಗದ ದ್ವಿತೀಯ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿರುತ್ತಾರೆ.

17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ದಿವಿಜ್ಞ ಯು ಯಸ್ 9ನೇ ತರಗತಿ( ಶಿವಪ್ರಸಾದ್ ಯು ಎ (ಪವಿತ್ರ ದಂಪತಿಯ ಪುತ್ರಿ)  400 ಮೀಟರ್ ಪ್ರಥಮ, 800 ಮೀಟರ್ ತೃತೀಯ. 4×100 ಮೀ ರಿಲೇ ಪ್ರಥಮ, 4x 400 ಮೀಟರ್ ರಿಲೇ ಪ್ರಥಮ. ಡಿಂಪಲ್ ಶೆಟ್ಟಿ( ಉದಯ ಶೆಟ್ಟಿ ಮತ್ತು ಸುನಿತಾ ಶೆಟ್ಟಿ ದಂಪತಿಯ ಪುತ್ರಿ )10ನೇ ತರಗತಿ 100ಮೀ ದ್ವಿತೀಯ, 200ಮೀ ದ್ವಿತೀಯ, 4×100ಮೀ  ರಿಲೇ ಪ್ರಥಮ, 4×400ಮೀ  ರಿಲೇ ಪ್ರಥಮ. ಶ್ರೀವರ್ಣ ಪಿ ಡಿ 10ನೇ ತರಗತಿ( ಧರ್ಣಪ್ಪ ಗೌಡ ಮತ್ತು ಮಮತ  ಪಿ ದಂಪತಿಯ ಪುತ್ರಿ )  100ಮೀ ಹರ್ಡಲ್ಸ್  ಪ್ರಥಮ, 4×100ಮೀ  ರಿಲೇ ಪ್ರಥಮ, ಕೃತಿ .ಕೆ( ಕೊರಗಪ್ಪ ಗೌಡ ಮತ್ತು ವನಿತ ಎ ದಂಪತಿಯ ಪುತ್ರಿ) 4×100ಮೀ  ರಿಲೇ ಪ್ರಥಮ, 4×400ಮೀ  ರಿಲೇ ಪ್ರಥಮ . ಚಿಂತನ ಸಿ  9ನೇ ತರಗತಿ  ( ಗಿರಿಶ್ ರಾಜ್ ಎಮ್ ವಿ ಮತ್ತು ಧನೇಶ್ವರಿ ದಂಪತಿ ಪುತ್ರಿ)  100ಮೀ ಹರ್ಡಲ್ಸ್ ದ್ವಿತೀಯ. ಶಾನ್ವಿ 9ನೇ ತರಗತಿ ಮೋಹನ್ ಮತ್ತು ಸುಮಲತ ದಂಪತಿ ಪುತ್ರಿ) 4×400ಮೀ  ರಿಲೇ ಪ್ರಥಮ.  ಈ ವಿಭಾಗದ ದ್ವಿತೀಯ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿರುತ್ತಾರೆ.

 14ನೇ ವಯೋಮಾನದ ಬಾಲಕರ ವಿಭಾಗದಲ್ಲಿ ಧನುಶ್ ಪಿ ಡಿ 8ನೇತರಗತಿ ( ಧರ್ಣಪ್ಪ ಗೌಡ ಮತ್ತು ಮಮತ  ಪಿ ದಂಪತಿಯ ಪುತ್ರ ) 400 ಮೀಟರ್ ಪ್ರಥಮ, 600ಮೀ ಪ್ರಥಮ, 80ಮೀ ಹರ್ಡಲ್ಸ್  ಪ್ರಥಮ, ಈ ಮೂರು ಚಿನ್ನದ ಪದಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಆಗಿರುತ್ತಾರೆ. ಕೃತಿಕ್ ಆರ್ 8ನೇತರಗತಿ ( ರಾಜೇಶ್ ಮತ್ತು ರೇಖಾ ಅರ್ ದಂಪತಿಯ ಪುತ್ರ ) 80ಮೀ ಹರ್ಡಲ್ಸ್ ದ್ವಿತೀಯ. ಈ ವಿಭಾಗದ ಪ್ರಥಮ  ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿರುತ್ತಾರೆ.

14ನೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ನಿಧಿಶ್ರೀ  8ನೇತರಗತಿ (ದೇರಣ್ಣ  ಗೌಡ ಮತ್ತು ಹೇಮಲತ ದಂಪತಿಯ ಪುತ್ರಿ) 100ಮೀ ಪ್ರಥಮ, 80ಮೀ ಹರ್ಡಲ್ಸ್  ಪ್ರಥಮ, ಉದ್ದ ಜಿಗಿತ ದ್ವಿತೀಯ ಸ್ಥಾನದೊಂದಿಗೆ್ ಎರಡು ಚಿನ್ನ ಮತ್ತು ಒಂದು ಬೆಳ್ಳಿಯ ಪದಕಗಳನ್ನು ಪಡೆದು ವೈಯಕ್ತಿಕ ಚಾಂಪಿಯನ್ ಆಗಿರುತ್ತಾಳೆ. 80ಮೀ ಹರ್ಡಲ್ಸ್ನಲ್ಲಿ 14.85 ನಿಮಿಷದೊಂದಿಗೆ  ನೂತನ ಕೂಟ ದಾಖಲೆಯನ್ನು ನಿರ್ಮಿಸಿರುತ್ತಾಳೆ. 2011 ರಲ್ಲಿ ನಿರ್ಮಾಣವಾಗಿದ್ದ ದಾಖಲೆಯನ್ನುಅಳಿಸಿ ಹಾಕಿರುತ್ತಾಳೆ . ಕ್ಷಮಾ ಜೆ ರೈ  8ನೇತರಗತಿ ( ಜಗದೀಶ ರೈ ಮತ್ತು ಶೊಭಾ ರೈ ದಂಪತಿಗಳ ಪುತ್ರಿ) 400 ಮೀಟರ್ ಪ್ರಥಮ, 600ಮೀ ಪ್ರಥಮ, ಎತ್ತರ ಜಿಗಿತ ದ್ವಿತೀಯ, ಈಕೆಯು ಎರಡು ಚಿನ್ನದ ಪದಕ ಮತ್ತು ಒಂದು ಬೆಳ್ಳಿಯ ಪದಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಅಗಿರುತ್ತಾಳೆ. ಈ ವಿಭಾಗದ ಪ್ರಥಮ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಪ್ರೀತಮ್ 7ನೇ ತರಗತಿ( ಕರುಣಾಕರ ಮತ್ತು ಜಯಂತಿ ಎಸ್ ದಂಪತಿಯ ಪುತ್ರ) 80ಮೀ ಹರ್ಡಲ್ಸ್  ದ್ವಿತೀಯ.

ಪ್ರಾಥಮಿಕ ಬಾಲಕಿಯರರ ವಿಭಾಗದಲ್ಲಿಾಅತ್ಮಿ ಕೆ ಎಲ್ 7ನೇ ತರಗತಿ(ಲಕ್ಷ್ಮಣ ಗೌಡ ಮತ್ತು ಅಶ್ವಿನಿ ದಂಪತಿಯ ಪುತ್ರಿ) 100ಮೀ ಪ್ರಥಮ, 200ಮೀ ಪ್ರಥಮ , 4×100ಮೀ ರಿಲೇ ಪ್ರಥಮ , ಈಕೆ ಎರಡು ಚಿನ್ನದ ಪದಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಅಗಿರುತ್ತಾಳೆ.  ವಂಶಿತಾ ಎನ್ 7ನೇ ತರಗತಿ ( ವಸಂತ ಕುಮಾರ್ ಮತು ಸುಜತಾ ದಂಪತಿಯ ಪುತ್ರಿ) 400 ಮೀಟರ್ ಪ್ರಥಮ, ಉದ್ದ ಜಿಗಿತ ಪ್ರಥಮ, 4×100ಮೀ ರಿಲೇ ಪ್ರಥಮ , ಈಕೆ ಎರಡೂ ಚಿನ್ನದ ಪದಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಅಗಿರುತ್ತಾಳೆ ಸಾನ್ವಿ ಆನಂದ್ 7ನೇ ತರಗತಿ ( ಆನಂದ್  ಮತ್ತು ವಾಣಿಶ್ರೀ ದಂಪತಿಯ ಪುತ್ರಿ ) 80ಮೀ ಹರ್ಡಲ್ಸ್  ಪ್ರಥಮ, 4×100ಮೀ ರಿಲೇ ಪ್ರಥಮ, ನಿಶ್ಮ ಕೆ 7ನೇ ತರಗತಿ ( ಪ್ರದೀಪ್ ಕೆ ಮತ್ತು ಪ್ರಶಾಂತಿ ದಂಪತಿಯ ಪುತ್ರಿ) ಚಕ್ರ ಎಸೆತ ಪ್ರಥಮ. ಅನ್ವಿಕ ರಾಜ್ 6ನೇ ತರಗತಿ ( ರಾಜೇಶ್ ಮತ್ತು ಅಶ್ವಿನಿ ಆರ್ ದಂಪತಿಯ ಪುತ್ರಿ) 4×100ಮೀ ರಿಲೇ ಪ್ರಥಮ. ಈ ವಿಭಾಗದ ಪ್ರಥಮ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯುವ ಮೂಲಕ ಉತ್ತಮ ಸಾಧನೆಗಳೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here