ಆಲಂಕಾರು: ಇಲ್ಲಿನ ಮೂಲೆತ್ತಮಜಲು ನಿವಾಸಿ, ಆಲಂಕಾರು ಶ್ರೀಕೃಷ್ಣ ಎಲೆಕ್ಟ್ರಾನಿಕ್ಸ್ ಮಾಲಕ ಪುರುಷೋತ್ತಮ ಬಿ.ಎಲ್.(46 ವ.)ಅವರು ಹೃದಯಾಘಾತದಿಂದ ನ.1ರಂದು ರಾತ್ರಿ ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ನಿಧನರಾದರು.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪುರುಷೋತ್ತಮ ಅವರು ಡಯಾಲಿಸಿಸ್ ಚಿಕಿತ್ಸೆಯಲ್ಲಿದ್ದು ನ.1ರಂದು ಬೆಳಿಗ್ಗೆ ಅವರಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿದ್ದು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ರಾತ್ರಿ ವೇಳೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು ಎಂದು ವರದಿಯಾಗಿದೆ.
ಮೃತರು ತಾಯಿ ಸುಂದರಿ, ಪತ್ನಿ ಸವಿತಾ, ಪುತ್ರಿ ಶ್ರಾವಣಿ ಹಾಗೂ ಸಹೋದರ ಆಲಂಕಾರು ಜ್ಞಾನಸುಧಾ ವಿದ್ಯಾಲಯದ ಸಂಚಾಲಕ ಬಿ.ಎಲ್.ಜನಾರ್ದನ, ನಾದಿನಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ಸರಿತಾ, ಸಹೋದರಿ ಹೇಮಲತಾ, ಬಾವಾ ನಾರಾಯಣ ನೀರುಮಾರ್ಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನ.2ರಂದು ಆಲಂಕಾರು ಮನೆಯಲ್ಲಿ ನಡೆಯಿತು. ಆಲಂಕಾರಿನ ವರ್ತಕರ ಸಹಿತ ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.