ಪುತ್ತೂರು: ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಯುವತಿಯರಿಗೆ ಕಿರುಕುಳ ನೀಡುತ್ತಿದ್ದಾರೆಂಬ ಆರೋಪದಲ್ಲಿ ಯುವಕನೊಬ್ಬ ಸಾರ್ವಜನಿಕರಿಂದ ಗೂಸ ತಿಂದ ಘಟನೆ ನ.3ರಂದು ಸಂಜೆ ನಡೆದಿದೆ.
ಇಬ್ಬರು ಯುವಕರು ಬಸ್ ನಿಲ್ದಾಣದಲ್ಲಿ ಇದ್ದು, ಬಂದ ಹೋದ ಬಸ್ಗಳಲ್ಲಿ ಇತರ ಪ್ರಯಾಣಿಕರೊಂದಿಗೆ ಬಸ್ ಏರುವ ಮತ್ತು ಇಳಿಯುವ ನೆಪದಲ್ಲಿ ಯುವತಿಯರಿಗೆ ಕಿರುಕುಳ ನೀಡುತ್ತಿದ್ದರು. ಇದನ್ನು ದೂರದಿಂದಲೇ ನೋಡುತ್ತಿದ್ದ ಸಾರ್ವಜನಿಕರು ಇಬ್ಬರು ಯುವಕರನ್ನು ವಿಚಾರಿಸಲು ಹೋದಾಗ ಅವರು ಅಲ್ಲಿಂದ ತಪ್ಪಿಕೊಂಡು ಓಡಿದ್ದರು. ಕೊನೆಗೆ ಇಬ್ಬರು ಯುವಕರ ಪೈಕಿ ಒಬ್ಬ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದು ಸಾರ್ವಜನಿಕರಿಂದ ಗೂಸ ತಿಂದಿದ್ದಾನೆ. ಘಟನೆ ಕುರಿತು ಸ್ಥಳಕ್ಕೆ ಪೊಲೀಸರು ಆಗಮಿಸಿ ವಿಚಾರಣೆ ನಡೆಸುತಿದ್ದಾರೆ.
Home ಇತ್ತೀಚಿನ ಸುದ್ದಿಗಳು ಪುತ್ತೂರು ಬಸ್ ನಿಲ್ದಾಣದಲ್ಲಿ ಯುವತಿಯರಿಗೆ ಕಿರುಕುಳ ಆರೋಪ – ಯುವಕನಿಗೆ ಸಾರ್ವಜನಿಕರಿಂದ ಗೂಸ