ಕೇರಳದಲ್ಲಿ ಪೂಜ್ಯ ಸಂತರ ವಾಹನ ಮೇಲೆ ದಾಳಿ – ವಿಶ್ವ ಹಿಂದೂ ಪರಿಷದ್‌ ಖಂಡನೆ

0

puttur: ಕೇರಳದ ಬೊವಿಕಾನ ಪರಿಸರದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀಮದ್ ಎಡನೀರು ಮಠಾಧೀಶರರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾಂದಗಳವರು ಸಂಚರಿಸುತ್ತಿದ್ದ ವಾಹನದ ಮೇಲೆ ನಡೆದಿರುವಂತಹ ದಾಳಿ ಇದು ಅತ್ಯಂತ ಖಂಡನೀಯ ಎಂದು ವಿಶ್ವ ಹಿಂದೂ ಪರಿಷದ್‌ ತಿಳಿಸಿದೆ.

ಸಂತರುಗಳಿಗೆ,ಹಿಂದೂ ಧರ್ಮದ ಶ್ರದ್ಧಾ ಬಿಂದುಗಳಿಗೆ ಸೂಕ್ತ ರಕ್ಷಣೆ ಇಲ್ಲದ ರೀತಿಯಲ್ಲಿ ಕೇರಳದಲ್ಲಿ ಗೂಂಡಾರಾಜ್ಯ ನಿರ್ಮಾಣವಾಗುತ್ತಿರುವುದಕ್ಕೆ ಇದು ಸಾಕ್ಷಿ.ಶೀಘ್ರವೇ ಕೇರಳ ಪೊಲೀಸ್ ಇಲಾಖೆ ದುಷ್ಕರ್ಮಿಗಳನ್ನು ಬಂಧಿಸಬೇಕು ಮತ್ತು ಹಿಂದೂ ಸಮಾಜಕ್ಕೆ ನ್ಯಾಯವನ್ನು ಒದಗಿಸಬೇಕು ಎಂದು ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲೆ ಆಗ್ರಹಿಸುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here