ಪುತ್ತೂರು: ಕೆಮ್ಮಾಯಿ ಜಂಕ್ಷನ್ನಲ್ಲಿ ರಸ್ತೆ ಮಧ್ಯೆ ಅಪಾಯಕಾರಿ ಹೊಂಡಕ್ಕೆ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆ ನಡೆಯುತ್ತಲೇ ಇದೆ.ಈ ಕುರಿತು ಸಂಬಂಧಿಸಿ ಇಲಾಖೆಗೆ ಮನವಿ ಮಾಡಿದರೂ ಸ್ಪಂಧನೆ ಇಲ್ಲದಾಗ ಕೊನೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಸಾರ್ವಜನಿಕರ ಮನವಿಯಂತೆ ಅಧಿಕಾರಿಗಳಿಗೆ ಹೊಂಡ ಮುಚ್ಚಲು ತಿಳಿಸಿದ ಬಳಿಕ ದುರಸ್ಥಿ ಕಾರ್ಯ ನಡೆದಿದೆ.
ರಸ್ತೆ ಮಧ್ಯೆ ನಿರ್ಮಾಣಗೊಂಡ ಹೊಂಡದಿಂದಾಗಿ ಹಲವು ದ್ವಿಚಕ್ರ ವಾಹನಗಳು ಅಪಘಾತಗೊಂಡು ಸವಾರರು ಗಾಯಗೊಂಡಿದ್ದರು. ಈ ಕುರಿತು ಸ್ಥಳೀಯರು ಸೇರಿ ಸಂಬಂಧಿಸಿದ ಇಲಾಖೆಗೆ ಹೊಂಡ ಮುಚ್ಚುವಂತೆ ಮನವಿ ಮಾಡಿದ್ದರು. ಆದರೆ ಅದಕ್ಕೂ ಸ್ಪಂಧನೆ ಸಿಗದಾಗ ಶಾಸಕರು ಆ ರಸ್ತೆಯಲ್ಲಿ ಕಾರಿನಲ್ಲಿ ಹೋಗುವಾಗ ಅವರ ಕಾರನ್ನು ತಡೆದ ಸಾರ್ವಜನಿಕರು ರಸ್ತೆ ಹೊಂಡದ ವಿಚಾರ ತಿಳಿಸಿದರು. ಸಾರ್ವಜನಿಕರ ಮನವಿಗೆ ಸ್ಪಂಧಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು ತಕ್ಷಣ ಅಧಿಕಾರಿಗಳಿಗೆ ಕರೆ ಮಾಡಿ ಹೊಂಡ ಮುಚ್ಚಿಸುವ ಸೂಚನೆ ನೀಡಿದರು.
ಈ ಸಂದರ್ಭ ಸ್ಥಳೀಯರಾದ ಎಂ ಮಂಜುನಾಥ್ ಕೇಮ್ಮಾಯಿ, ಚಿದಾನಂದ್ ಕೊಪಲ್ಲ, ದಯಾನಂದ ಗೌಡ ಕೇಮ್ಮಾಯಿ, ಜನಾರ್ದನ, ಉಮೇಶ್ ಗೌಡ, ಕೃಷ್ಣಪ್ಪ ಗೌಡ, ಚೇತನ್, ಸಂಶುದ್ದೀನ್ ಕೆಮ್ಮಾಯಿ, ಹುಸೇನ್ ಕೇಮ್ಮಾಯಿ, ಅದ್ದು ಕೇಮ್ಮಾಯಿ, ಸಂದೀಪ್, ಮಹೇಶ್, ನಾರಾಯಣ ಉಪಸ್ಥಿತರಿದ್ದರು.