ಆಲಂಕಾರು: ಅಲಂಕಾರು ಗ್ರಾ.ಪಂ ಸಾಮಾನ್ಯ ಸಭೆಯು ಗ್ರಾ.ಪಂ ಸದಸ್ಯರ ಕೋರಂ ಕೊರತೆಯಿಂದ ಮುಂದೂಡಿದ ಘಟನೆ ಆಲಂಕಾರು ಗ್ರಾ.ಪಂ ನಲ್ಲಿ ನಡೆದಿದೆ.
ನ.5 ಬೆಳಿಗ್ಗೆ 11 ಗಂಟೆಗೆ ಸಾಮಾನ್ಯ ಸಭೆ ನಿಗದಿಯಾಗಿತ್ತು ಗ್ರಾ.ಪಂ ಅಧ್ಯಕ್ಷರು,ಉಪಾಧ್ಯಕ್ಷರು ಸಹಿತ ಒಟ್ಟು ಐವರು ಸದಸ್ಯರು ಸಭೆಯಲ್ಲಿ ಹಾಜರಿದ್ದು, 6 ಸದಸ್ಯರು ಗೈರಾಗಿದ್ದರು .ಸಾಮಾನ್ಯ ಸಭೆ ನಡೆಸಲು ಕೋರಂ ಕೊರತೆ ಉಂಟಾದ ಹಿನ್ನಲೆಯಲ್ಲಿ ಸಭೆಯನ್ನು ಮುಂದೂಡಲಾಯಿತು.
ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷರಾದ ಸುಶೀಲ, ಉಪಾಧ್ಯಕ್ಷರಾದ ರವಿಪೂಜಾರಿ. ಕೆ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ.ಕೆ,ಕಾರ್ಯದರ್ಶಿ ವಸಂತ ಶೆಟ್ಟಿ ಸದಸ್ಯರಾದ ಚಂದ್ರಶೇಖರ, ರೂಪಾಶ್ರೀ,ಸುಮತಿ ಸೇರಿದಂತೆ ಐದು ಮಂದಿ ಉಪಸ್ಥಿತರಿದ್ದರು. ಸದಾನಂದ ಆಚಾರ್ಯ ಶರವೂರು, ಶ್ವೇತಕುಮಾರ್,ಕೃಷ್ಣ ಗಾಣಂತಿ,ಶಾರದ,ಸುನಂದಾ, ವಾರಿಜ ಸೇರಿದಂತೆ ಆರು ಮಂದಿ ಸದಸ್ಯರು ಗೈರಾಗಿದ್ದರು.
“ಸಾಮಾನ್ಯ ಸಭೆಗೆ ಎಂದಿನಂತೆ ಎಲ್ಲಾ ಸದಸ್ಯರಿಗೆ ಮುಂಚಿತವಾಗಿ ನೋಟೀಸ್ ಕಳಿಸಲಾಗಿತ್ತು ಆಲ್ಲದೇ ಅಡಳಿತ ಮಂಡಳಿ ವಾಟ್ಸಪ್ ಗ್ರೂಪ್ ನಲ್ಲಿಯೂ ಸಾಮಾನ್ಯ ಸಭೆಯ ನೋಟೀಸ್ ಷೇರ್ ಮಾಡಿದ್ದೇನೆ ಸಭೆಯಲ್ಲಿ 6 ಸದಸ್ಯರು ಗೈರು ಹಾಜರಾದ ಹಿನ್ನಲೆಯಲ್ಲಿ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ.
ಸುಶೀಲ ಅಧ್ಯಕ್ಷರು ಗ್ರಾ.ಪಂ ಆಲಂಕಾರು
11 ಸದಸ್ಯ ಬಲದ ಆಲಂಕಾರು ಗ್ರಾ.ಪಂ ನಲ್ಲಿ 11 ಸದಸ್ಯರು ಬಿ.ಜೆ.ಪಿ ಬೆಂಬಲಿತರಾಗಿದ್ದಾರೆ.ಅಧ್ಯಕ್ಷರ ಏಕ ನಿರ್ಧಾರ ಹಾಗು ಸದಸ್ಯರ ಕಡೆಗಣನೆಯಿಂದ ಕೆಲವು ಸದಸ್ಯರು ಅಸಮಾಧಾನಗೊಂಡು ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಹೇಳಲಾಗಿದೆ.