ಅಭಿವೃದ್ದಿ ಪರ ಮತ ಚಲಾಯಿಸುವ ಪೃವೃತ್ತಿ ಬೆಳೆಯಬೇಕು-ಬೆಟ್ಟಂಪಾಡಿಯಲ್ಲಿ 41.5 ಲಕ್ಷ ರೂ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಶಾಸಕ ಅಶೋಕ್‌ ರೈ

0

ಪುತ್ತೂರು: ಜನ ನನ್ನಿಂದ ಏನು‌ ನಿರೀಕ್ಷೆ ಇಟ್ಟುಕೊಂಡಿದ್ದರೋ ಆ ನಿರೀಕ್ಷೆಯನ್ನು‌ ನಾನು‌ ಎಂದಿಗೂ ಹುಸಿ‌ ಮಾಡಲ್ಲ, ನನ್ನ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇನೆ, ಬೆಟ್ಟಂಪಾಡಿ ಗ್ರಾಮದ ಬಹು ರಸ್ತೆಗಳಿಗೆ ಈ ಬಾರಿ ಅನುದಾನ ನೀಡಿದ್ದೇನೆ ,ಜನತೆ ಅಭಿವೃದ್ದಿ ಪರ ಮತ ಚಲಾಯಿಸುವ ಪೃವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.


ಅವರು ಬೆಟ್ಟಂಪಾಡಿ ಗ್ರಾಮದ ಇರ್ದೆಯಲ್ಲಿ ನಡೆದ 41.5 ಲಕ್ಷ ರೂ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ನೆರವೇರಿಸಿ‌ ಮಾತನಾಡಿದರು.
ಕಳೆದ ಬಾರಿ‌ ಮಾಡಿರುವ ಗುದ್ದಲಿ ಪೂಜೆಯ‌ ಕಾಮಗಾರಿ ಇನ್ನೂ ಆಗಿಲ್ಲ, ಇದಕ್ಕೆ ಕಾರಣವೂ ಇದೆ, ಚುನಾವಣಾ ನೀತಿ ಸಂಹಿತೆ ಒಂದು ಕಡೆಯಾದರೆ, ಈ ಬಾರಿಯ ವಿಪರೀತ ಮಳೆಯೂ ಒಂದು ಕಾರಣವಾಗಿದೆ. ಕಳೆದ ಬಾರಿ‌ ಗುದ್ದಲಿ ಪೂಜೆ ನಡೆದ‌ ಎಲ್ಲಾ ಕಾಮಗಾರಿಗಳೂ ಈ ಬಾರಿ ನಡೆಯಲಿದೆ. ಕಾಮಗಾರಿಗೆ ಅನುದಾನ ಬಿಡುಗಡೆಯಾಗಿಲ್ಲ ಎಂಬ ಅಪಪ್ರಚಾರವೂ ಕೆಲವು ಕಡೆ ನಡೆದಿದೆ. ಜನರಿಗೆ ಈ ವಿಚಾರದಲ್ಲಿ ಯಾವುದೇ ಆತಂಕ ಬೇಡ‌ ಎಂದು ಹೇಳಿದರು.

ಚೆಲ್ಯಡ್ಕ‌ ಮುಳುಗು ಸೇತುವೆಗೆ‌ ಮುಕ್ತಿ
ಕಳೆದ 40 ವರ್ಷಗಳಿಂದ ಪ್ರತೀ‌ ಮಳೆಗಾಲದಲ್ಲಿ‌ ಮುಳುಗಡೆಯಾಗುತ್ತಿದ್ದ ಚೆಲ್ಯಡ್ಕ ಸೇತುವೆಗೆ ನಾನು‌ ಮುಕ್ತಿ‌ ಕಾಣಿಸಿದ್ದೇನೆ,‌ಶಾಸಕನಾದ 6 ತಿಂಗಳಲ್ಲೇ ಇದಕ್ಕೆ 3 ಕೋಟಿ ಅನುದಾನ ತಂದಿದ್ದೇನೆ, ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ‌ ಮುಗಿದಿದೆ ಇನ್ನು ಕೆಲವೇ ವಾರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು‌ ತಿಳಿಸಿದ ಶಾಸಕರು. ಇಷ್ಟು ವರ್ಷಗಳೇ ಕಳೆದರೂ ಈ‌ ಮುಳುಗು ಸೇತುವೆ ಹೀಗೇ ಇರಲು ಯಾರು ಕಾರಣ? ಇಚ್ಚಾ ಶಕ್ತಿಯ ಕೊರತೆಯಿಂದ ಬಹುಕಾಲದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿತ್ತು. ಈ ಬಾರಿ ಜನರ ಬೇಡಿಕೆ ಈಡೇರಿಸಿದ್ದೇನೆ ಎಂದು ಹೇಳಿದರು.

ಜನ‌ ಎಲ್ಲವನ್ನೂ ಅರಿತಿದ್ದಾರೆ
ಜನತೆಗೆ ಕ್ಷೇತ್ರದ, ರಾಜ್ಯದ, ದೇಶದ ಎಲ್ಲಾ ವಿಚಾರಗಳ ಬಗ್ಗೆ ಅರಿವು ಇದೆ. ಯಾರು ಅಭಿವೃದ್ದಿ‌ ಮಾಡಿದ್ದಾರೆ, ಯಾರು ಜನರ‌ಪರ ಎಂಬುದನ್ನೂ ಅರಿತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಜನತೆ ನೆಮ್ಮದಿಯಲ್ಲಿದ್ದಾರೆ. ರಾಜ್ಯದಲ್ಲಿ ಶಾಂತಿ‌ ನೆಲೆಸಿದೆ. ಜನ ಅಭಿವೃದ್ದಿ ಪರ ಸರಕಾರಕ್ಕೆ ಬೆಂಬಲ ನೀಡಬೇಕು‌ ಎಂದು ಮನವಿ‌ ಮಾಡಿದರು.

ಯುವಕರಿಗೆ ಉದ್ಯೋಗ
ಕ್ಷೇತ್ರದ ವಿದ್ಯಾವಂತ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ‌ ನನ್ನ ಪ್ರಯತ್ನವನ್ನು‌ ಮಾಡುತ್ತಿದ್ದೇನೆ, ಕೆಎಸ್ ಆರ್ ಟಿ ಸಿ,ಮೆಸ್ಕಾಂ‌ನಲ್ಲಿ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಸ್ವಂತ ಖರ್ಚಿನಲ್ಲಿ ತರಬೇತಿಯನ್ನು‌ ನೀಡುತ್ತಿದ್ದೇನೆ. ವಿವಿಧ ಕಂಪೆನಿಯ ಸಹಭಾಗಿತ್ವದಲ್ಲಿ ಪುತ್ತೂರಿನ ಯುವಕರಿಗೆ ಮುಂದಿನ ವಾರ ಸುಮಾರು‌ 200 ಮಂದಿಗೆ ಉದ್ಯೋಗ ಕೊಡಿಸುವ ಕೆಲಸವನ್ನು‌ ಮಾಡಲಿದ್ದೇನೆ. ಯುವಕರ ಕೈಗೆ ಉದ್ಯೋಗ ಕೊಡಬೇಕೆ‌ ವಿನಾ ಅವರ‌ ಮನಸ್ಸಿನಲ್ಲಿ ಕೆಟ್ಟದ್ದನ್ನು ತುಂಬಿಸಬಾರದು ಎಂದು‌ ಮನವಿ‌ ಮಾಡಿದ ಶಾಸಕರು ಪ್ರತೀಯೊಬ್ಬ ತಂದೆ ತಾಯಿಯೂ ತನ್ನ‌ ಮಗನಿಗೆ ಉತ್ತಮ‌ ಉದ್ಯೋಗ ದೊರೆಯಬೇಕು ಎಂಬ ಕನಸು‌ ಉಳ್ಳವರಾಗಿದ್ದು ಅವರ‌ ಕನಸನ್ನು‌ ನನಸು‌ ಮಾಡುವ ಉದ್ದೇಶ ನನಗಿದೆ ಎಂದು‌ ಶಾಸಕರು ಹೇಳಿದರು.

ಶಾಸಕರಿಂದ ಪುತ್ತೂರಿನ ಅಭಿವೃದ್ದಿ
ಶಾಸಕ ಅಶೋಕ್ ರೈ ಅವರ ಕಾರಣಕ್ಕೆ ಇಂದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಬೆಟ್ಟಂಪಾಡಿ ಗ್ರಾಮ ಸೇರಿದಂತೆ ಕ್ಷೇತ್ರದ ಪ್ರತೀಯೊಂದು ಗ್ರಾಮಕ್ಕೂ ಶಾಸಕರು‌ ಸಮಾನ ರೀತಿಯಲ್ಲಿ‌ ಅನುದಾನವನ್ನು‌ ಹಂಚುವ ಕಾರ್ಯವನ್ನು ಮಾಡುತ್ತಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಪುತ್ತೂರು ಕ್ಷೇತ್ರ ಅಭಿವೃದ್ದಿ ಕಾಣಲಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಪಿ ಆಳ್ವ ಹೇಳಿದರು.
ಜನ‌ ಮುಂದಿನ‌ ದಿನಗಳಲ್ಲಿ‌ ಅಶೋಕ್ ರೈ ಗೆ ಬೆಂಬಲವನ್ನು‌ ನೀಡಬೇಕು ಅದೇ ರೀತಿ ರಾಜ್ಯದ ಕಾಂಗ್ರೆಸ್ ಸರಕಾರಕ್ಕೂ ಬೆಂಬಲ‌ ನೀಡಬೇಕು‌ ಎಂದು ಮನವಿ‌ ಮಾಡಿದರು.

ಬೆಟ್ಟಂಪಾಡಿಗೆ ಆರೋಗ್ಯ ಕೇಂದ್ರ ಬೇಕು
ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಮಾತನಾಡಿ ಬೆಟ್ಟಂಪಾಡಿ ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರದ ಅಗತ್ಯತೆ ಇದೆ ಇದಕ್ಕೆ ಶಾಸಕರು ಸಹಕಾರ‌ ನೀಡಬೇಕು. ಗ್ರಾಮದಲ್ಲಿರುವ ಕಟ್ಟಡ ಪಾಳು ಬಿದ್ದಿದೆ ಅದನ್ನು ಮರುಬಳಕೆ ಮಾಡುವಲ್ಲಿ ಕ್ರಮವಹಿಸಬೇಕು ಎಂದು‌ ಶಾಸಕರಲ್ಲಿ‌ ಮನವಿ‌ ಮಾಡಿದರು.


ಕಾರ್ಯಕ್ರಮದಲ್ಲಿ ಕೆ‌.ಪಿ ಭಟ್, ಗ್ರಾ.ಪಂ ಸದಸ್ಯರಾದ ಮೊಯಿದು, ಸುಮಲತಾ, ಮಹಾಲಿಂಗ ನಾಯ್ಕ, ಸದಾಶಿವ ರೈ ಚೆಲ್ಯಡ್ಕ, ಪುತ್ತು ಚೆಲ್ಯಡ್ಕ, ಬ್ಲಾಕ್ ಉಪಾಧ್ಯಕ್ಷ ರೋಶನ್ ರೈ ಬನ್ನೂರು, ಗುತ್ತಿಗೆದಾರ ರಾಕೇಶ್ ರೈ ಕುದ್ಕಾಡಿ, ಅಬೂಬಕ್ಕರ್ ಕೊರಿಂಗಿಲ,‌ಮಾಧವ‌ ಪೂಜಾರಿ ರೆಂಜ, ದಯನಾಂದ ರೈ ಕೊರ್ಮಂಡ,ದಾಮೊದರ ಪಾಟಾಳಿ ಉಪ್ಪಳಿಗೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here