ಪುತ್ತೂರು : ಕೇಂದ್ರ ಸರ್ಕಾರ ಪುರಸ್ಕೃತ ಪಿಎಂಶ್ರೀ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ನ. 14 ರಂದು ಮಕ್ಕಳ ದಿನ ದಿನಾಚರಣೆಯ ಅಂಗವಾಗಿ ಪೂರ್ವಾಹ್ನ ದಿಂದ ಇಳಿಸಂಜೆಯವರೆಗೆ ಪಿಎಂಶ್ರೀ ಸಡಗರ ನಡೆಯಲಿದೆ.
ಮಕ್ಕಳ ದಿನಾಚರಣೆ, ಚಾಚಾ ನೆಹರುರವರ ಸಂಸ್ಮರಣೆ, ಪಿಎಂಶ್ರೀ ಯೋಜನೆಯ ವಿವಿದ ಚಟುವಟಿಕೆಗಳಾದ Field Visit, Expouser Visit ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳ ಅನುಭವ ಹಂಚಿಕೆ, ಪಿಎಂಶ್ರೀ ಯೋಜನೆಯಿಂದ ಕೊಡಮಾಡಿದ ಆಟೋಟ ಸಲಕರಣೆಗಳು,ಗ್ರಂಥಭಂಡಾರ, ಬಾಲಾಯೋಜನೆಯ ಕಲಿಕೋಪಕರಣಗಳು ಮತ್ತು ಪೂರ್ವ ಪ್ರಾಥಮಿಕ ಮಕ್ಕಳಿಗೆ ಶಾಲಾ ಬ್ಯಾಗ್, T-shirt, ಕಲಿಕಾ ಸಾಧನಗಳ ವಿತರಣೆ ನಡೆಯಲಿದೆ. ಪಿಎಂಶ್ರೀ ಯೋಜನೆಯಲ್ಲಿ ನೂತನವಾಗಿ ಸೇರಿದ ಯೋಗಶಿಕ್ಷಕಿ ಮಧುಶ್ರೀ ಮತ್ತು ಆಪ್ತಸಮಾಲೋಚಕಿ ಸುಮಿತ್ರಾ ಇವರನ್ನು ಸ್ವಾಗತಿಸುವ ಕಾರ್ಯಕ್ರಮದೊಂದಿಗೆ ವಿಷಯ ತಜ್ಞರಿಂದ Mentoring by Eminent Export ನಡೆಯಲಿದೆ.
ಪಿಎಂಶ್ರೀ ಚಟುವಟಿಕೆಗಳ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಹಬೋಜನ ಮತ್ತು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಗ್ರಾ.ಪಂ ಅಧ್ಯಕ್ಷೆ ಹರಿಣಿ, ಗ್ರಾಪಂ ಸದಸ್ಯರಾದ ಬಾಬು ಶೆಟ್ಟಿ, ವಸಂತಿ, ಪದ್ಮಾವತಿ, ಚಿತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ತಾ.ಪಂ, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ಸಮನ್ವಯಾಧಿಕಾರಿ ನವೀನ್ ವೇಗಸ್, ಶಿಕ್ಷಣಸಂಯೋಜಕ ಅಮೃತಕಲಾ, ನರಿಮೊಗರು ಸಿಆರ್ ಪಿ ಪರಮೇಶ್ವರಿ, ಶಿಕ್ಷಣ ತಜ್ಞ ನಾರಾಯಣ ರೈ ಕುಕ್ಕುವಳ್ಳಿ,ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯಗುರು ತಾರಾನಾಥ ಸವಣೂರು ತಿಳಿಸಿದ್ದಾರೆ.