ಪುತ್ತೂರು: ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಸವಣೂರು ಇಲ್ಲಿನ ನೂತನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ರಚನೆಗೊಂಡಿದ್ದು ಅಧ್ಯಕ್ಷರಾಗಿ ಅಶ್ರಫ್ ಜನತಾ ಹಾಗೂ ಉಪಾಧ್ಯಕ್ಷೆಯಾಗಿ ರೇವತಿ ಆಯ್ಕೆಗೊಂಡಿರುತ್ತಾರೆ. ಸದಸ್ಯರುಗಳಾಗಿ ಗುಲಾಬಿ, ಶೇಖರ್ ಎಲ್ ಐಸಿ, ಜಯಶ್ರೀ, ಉಮ್ಮರ್ ಅಬಾಬಿಲ್, ಸಾಯಿನಾ, ಖತೀಜಾ, ಉಮ್ಮರ್ ಕನಡಕುಮೇರು, ಜೈನಾಬಿ, ಸಫಿಯಾ, ಹನೀಫ್ ಕುಂಬಮೂಲೆ, ಫಾತಿಮಾ, ಸತೀಶ್ ಬಲ್ಯಾಯ ಕನಡಕುಮೇರು, ಸುರೇಶ್ ರವರುಗಳು ಆಯ್ಕೆಯಾದರು.
ಸವಣೂರು ಗ್ರಾ.ಪಂ. ಅಧ್ಯಕ್ಷೆ ಸುಂದರಿ, ಸದಸ್ಯರುಗಳಾದ ರಫೀಕ್ ಎಂ ಎ, ತೀರ್ಥರಾಮ ಕೆಡೆಂಜಿ ಹಾಗೂ ಚಂದ್ರಾವತಿ ಸುಣ್ಣಾಜೆ ಇವರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಸದಸ್ಯರಿಗೆ ಸ್ವಾಗತವನ್ನು ಬಯಸಿಕೊಂಡು ನಿರ್ಗಮಿತ ಅಧ್ಯಕ್ಷರಿಗೆ ಮತ್ತು ಸದಸ್ಯರಿಗೆ ಅಭಿಮಾನದ ಅಭಿನಂದನೆಗಳನ್ನು ಸಲ್ಲಿಸಿ ಗೌರವಿಸಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ವಹಿಸಿದ್ದರು. ಎಸ್ ಡಿಎಂಸಿ ನಿಕಟಪೂರ್ವ ಅಧ್ಯಕ್ಷರು ಮಹಮ್ಮದ್ ಹನೀಫ್ , ಉಪಾಧ್ಯಕ್ಷೆ ಜಯಶ್ರೀ ಹಾಗೂ ಸದಸ್ಯರು ಹಾಜರಿದ್ದರು. ಶಶಿಕಲಾ ಪ್ರಾರ್ಥನೆಗೈದರು. ಶಾಲಾ ಮುಖ್ಯಗುರು ನಿಂಗರಾಜು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಾಗವೇಣಿ ಕಾರ್ಯಕ್ರಮ ನಿರೂಪಿಸಿದರು.