ಪುತ್ತೂರು:ಸ್ಪಂದನಾ ಸೇವಾ ಬಳಗ ಕುಂಬ್ರ ಇದರ ಆಶ್ರಯದಲ್ಲಿ, ಎ. ಜೆ. ಇನ್ಸ್ ಟ್ಯೂಷನ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು ಇವರ ಸಹಯೋಗದೊಂದಿಗೆ
ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮವು ನ.10ರಂದು ಶ್ರೀ ರಾಮ ಭಜನಾ ಮಂದಿರದ ಸಭಾಂಗಣ ಕುಂಬ್ರದಲ್ಲಿ ನಡೆಯಿತು.
ಮೊದಲಿಗೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಕುಂಬ್ರ ಇಲ್ಲಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಬಿ.ಆರ್.ರವರು ಮಾತನಾಡಿ ,ಸ್ಪಂದನಾ ಸಂಸ್ಥೆಯ ಉತ್ತಮ ಸೇವೆ ಇದಾಗಿದ್ದು ,ಯಾವುದೇ ಪ್ರಚಾರವನ್ನು ಬಯಸದೆ ಸಮಾಜ ಸೇವೆ ಮಾಡುವ ಈ ಸಂಸ್ಥೆಗೆ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿಕೊಂಡರು.
ಮುಖ್ಯ ಅತಿಥಿ ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ ಮಾತನಾಡಿ , ಸ್ಪಂದನಾ ಸೇವಾ ಬಳಗ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಸಂತಸ ತಂದಿದೆ.ಈ ಕಾರ್ಯ ಇನ್ನೂ ಮುಂದುವರಿಯಲಿ ಎಂದು ಶುಭ ಹಾರೈಸಿದರು.ಸ್ಪಂದನಾ ಸೇವಾ ಬಳಗದ ಗೌರವಾಧ್ಯಕ್ಷರಾದ ಮೋಹನ್ ದಾಸ್ ರೈ ಕುಂಬ್ರ ಮಾತನಾಡಿ, ಸಂಘಟನೆ ಬೆಳೆಯಲು, ಪ್ರತಿಯೊಬ್ಬರೂ ಕೈ ಜೋಡಿಸ ಬೇಕು, ನಮ್ಮ ಸಂಘಟನೆ ಎತ್ತರಕ್ಕೆ ಬೆಳೆದು ತಾಲೂಕಿನಲ್ಲಿ ಉತ್ತಮ ಹೆಸರು ಪಡೆಯುವಂತಾಗಲಿ ಎಂದು ಆಶಿಸಿದರು.
ಸ್ಪಂದನಾ ಸೇವಾ ಬಳಗದ ಗೌರವ ಸಲಹೆಗಾರರಾದ ಸುಧಾಕರ ರೈ ಮಾತನಾಡಿ,ಜನ ಸೇವೆಯೇ ಜನಾರ್ದನ ಸೇವೆ.ನಮ್ಮ ಸಂಘ ಶೋಷಿತರ ಪರವಾಗಿ ಕೆಲಸ ಮಾಡಿದೆ.ಮುಂದಿನ ದಿನಗಳಲ್ಲಿ ಸಮಾಜದ ಒಳಿತಿಗಾಗಿ,ಜನಪರ ಯೋಜನೆಗಳನ್ನು ರೂಪಿಸಿಕೊಂಡು ಇನ್ನಷ್ಟು ಸೇವೆ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಸ್ಪಂದನಾ ಸೇವಾ ಬಳಗದ ಗೌರವ ಸಲಹೆಗಾರ ತಿಲಕ್ ರೈ ಕುತ್ಯಾಡಿ ಪ್ರಾಸ್ತಾವಿಕವಾಗಿ ಮಾತನಾಡಿ , ಸಂಸ್ಥೆ ಬಹುಬೇಗನೆ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸಿ , ಸಾರ್ವಜನಿಕರ ಮನಮುಟ್ಟಿದೆ.ಕಳೆದ ಬಾರಿ ಕೊರೋನ ಸಮಯದಲ್ಲಿ ದಾನಿಗಳ ನೆರವಿನಿಂದ ಅಶಕ್ತ ಕುಟುಂಬಗಳಿಗೆ ಸ್ಪಂದನಾ ಮುಖೇನ ಸಹಾಯ ನೀಡಲಾಗಿದೆ.ದುಡಿಮೆಯಲ್ಲಿ ಒಂದು ಪಾಲು ಸಮಾಜಕ್ಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜ ಚಟುವಟಿಕೆ ಮಾಡುತ್ತಾ ಮುಂದುವರಿಯುತ್ತಿದ್ದೇವೆ.ನಮ್ಮ ಕ್ರೀಯಾಶೀಲಾ ಅಧ್ಯಕ್ಷ ರತನ್ ರೈ ಕುಂಬ್ರ ಮತ್ತು ಸದಸ್ಯರು ಹಾಗೂ ದಾನಿಗಳು ನಮ್ಮ ಸಂಘಟನೆಯ ಆಸ್ತಿ ಎಂದರು.
ಈ ಸಂದರ್ಭದಲ್ಲಿ ವಿದ್ಯಾಲತಾ ರೈ ಕುಂಬ್ರ, ರಾಜೇಶ್ ರೈ ಪರ್ಪುಂಜ, ಪದ್ಮನಾಭ ಗೌಡ ಮುಂಡಾಲ, ನಿತೀಶ್ ಕುಮಾರ್ ಶಾಂತಿವನ, ಕರುಣಾ ರೈ ಬಿಜಳ, ಚಂದ್ರ ಕಾಂತ್ ಶಾಂತಿವನ,ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು.ಸ್ಪಂದನಾ ಸೇವಾ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.ವೇದಿಕೆಯಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಗಣ್ಯರ ಭೇಟಿ
ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಹಾವೀರ ಆಸ್ಪತ್ರೆ ವೈದ್ಯ ಸುರೇಶ್ ಪುತ್ತೂರಾಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ, ಬಿಜೆಪಿ ಜಿಲ್ಲಾಉಪಾಧ್ಯಕ್ಷ ಪ್ರಸನ್ನ ಮಾರ್ತಾ,ಎ.ಪಿ.ಎಂ.ಸಿ ಪುತ್ತೂರು ಇದರ ಮಾಜಿ ಅಧ್ಯಕ್ಷ ಡಿ.ಅಮ್ಮಣ್ಣ ರೈ ಪಾಪೆ ಮಜಲು,ಸಹಿತ ಹಲವಾರು ಗಣ್ಯರು ಶಿಬಿರಕ್ಕೆ ಭೇಟಿ ನೀಡಿದರು.
ಸದಸ್ಯೆ ಉಷಾನಾರಾಯಣ ಕುಂಬ್ರ ಪ್ರಾರ್ಥಿಸಿ ,ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು.ಕಾರ್ಯಾಧ್ಯಕ್ಷ ಅಶೋಕ್ ತ್ಯಾಗರಾಜೆ ವಂದಿಸಿದರು.ಹರೀಶ್ ರೈ ಮುಗೇರು ಕಾರ್ಯಕ್ರಮ ನಿರೂಪಿಸಿದರು.ಶರತ್ ಕುಮಾರ್ ಗುತ್ತು, ಸಂತೋಷ್ ಕುಮಾರ್ ರೈ ಕೈಕಾರ ಸಹಕರಿಸಿದರು.
ಶಿಬಿರದ ವಿಶೇಷತೆಗಳು………
ಶಿಬಿರದಲ್ಲಿ ಸುಮಾರು 450ಕ್ಕೂ ಮಿಕ್ಕಿ ಶಿಬಿರಾರ್ಥಿಗಳು ಪಾಲ್ಗೊಂಡರು. 150 ಕ್ಕೂ ಹೆಚ್ಚು ಜನರಿಗೆ ಕನ್ನಡಕ ವಿತರಿಸಲಾಯಿತು.
50 ಕ್ಕೂ ಅಧಿಕ ಮಂದಿ ಅಂಚೆ ಇಲಾಖೆಯ ಅಪಘಾತ ವಿಮೆ ಮಾಡಿಸಿಕೊಂಡರು. ಅಯುಷ್ಮಾನ್ ಕಾರ್ಡ್ ನ ಪ್ರಯೋಜನ ಕೂಡ ಪಡೆದುಕೊಂಡರು.
ಸ್ಪಂದನಾ ಸೇವಾ ಬಳಗದ ಗೌರವಾಧ್ಯಕ್ಷರಾದ ಸುಧಾಕರ ರೈ ಕುಂಬ್ರ ಉಚಿತವಾಗಿ ಕನ್ನಡಕದ ವ್ಯವಸ್ಥೆಯನ್ನು ಮಾಡಿದರು.
ಕಳೆದ 8 ವರ್ಷಗಳಿಂದ ಸ್ಪಂದನಾ ಸಂಸ್ಥೆಯ ಸಮಾಜ ಸೇವಾ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದು, ಯಾವುದೇ ಪ್ರಚಾರ ಇಲ್ಲದೆ ದುಡಿಮೆಯಲ್ಲಿ ಒಂದು ಪಾಲು ಸಮಾಜಕ್ಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಹಲವಾರು ಜನರ ಕಷ್ಟಗಳಿಗೆ ಸ್ಪಂದಿಸಿದ ಸಂಸ್ಥೆ ಸ್ಪಂದನಾ.ಈಗ ಹೊಸ ವ್ಯವಸ್ಥೆಯೊಂದಿಗೆ ಪ್ರಚಾರಕ್ಕಾಗಿ ಅಲ್ಲ, ಪ್ರೇರಣೆಗಾಗಿ. ಸಾರ್ವಜನಿಕವಾಗಿ ಪ್ರಚಾರದ ಜೊತೆ ಹಲವು ದಾನಿಗಳ ಸಹಕಾರದೊಂದಿಗೆ ಸಮಾಜ ಸೇವೆ ಜನರ ಕಷ್ಟಗಳಿಗೆ ಸ್ಪಂದಿಸುವ ನೂರಕ್ಕೂ ಅಧಿಕ ಸದಸ್ಯರಿರುವ ಸಮಾನ ಮನಸ್ಕ ತಂಡವೇ ಸ್ಪಂದನಾ…..
ರತನ್ ರೈ ಕುಂಬ್ರ
ಅಧ್ಯಕ್ಷರು ಸ್ಪಂದನಾ ಸೇವಾ ಬಳಗ ಕುಂಬ್ರ