ಪುತ್ತೂರು: ಶ್ರೀಅಖಿಲ ಹವ್ಯಕ ಮಹಾಸಭಾ(ರಿ.) ಪುತ್ತೂರು ಶಾಖೆಯ ವತಿಯಿಂದ ನ.10ರಂದು ಬನ್ನೂರು ಹವ್ಯಕ ಭವನದಲ್ಲಿ ‘ಸ್ಪರ್ಧಾ ಸೌರಭ-ಪ್ರತಿಬಿಂಬ’ ಕಾರ್ಯಕ್ರಮ
ನಡೆಯಿತು.
ಈ ಸಂದರ್ಭ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಇದರ ಕಲಾ ತಂಡದಿಂದ ‘ನೃತ್ಯೋಹಂ’ ಭರತನಾಟ್ಯ ಕಾರ್ಯಕ್ರಮ ಏರ್ಪಟ್ಟಿತು. ನೃತ್ಯಗುರು, ವಿದುಷಿ
ಶಾಲಿನಿ ಆತ್ಮಭೂಷಣ್ ಅವರು ನೃತ್ಯ ನಿರ್ದೇಶನದಲ್ಲಿ ಕಾರ್ಯಕ್ರಮ ಪ್ರದರ್ಶನಗೊಂಡಿತು.
ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪದಲ್ಲಿ ಮುಳಿಯ ಜುವೆಲ್ಲರ್ಸ್‌ನ ಕೇಶವ ಪ್ರಸಾದ್ ಮುಳಿಯ, ಆದರ್ಶ ಆಸ್ಪತ್ರೆಯ
ಡಾ.ಶ್ಯಾಮಭಟ್ ಬಡೆಕ್ಕಿಲ ಇವರು ಸ್ಪರ್ಧಾ ಸೌರಭದ ಬಹುಮಾನ ವಿತರಿಸಿದರು. ವಿವಿಧ ಕ್ಷೇತ್ರದ ಸಾಧಕರಾದ ವೇದಮೂರ್ತಿ ವೆಂಕಟೇಶ ಸುಬ್ರಹ್ಮಣ್ಯ ಭಟ್, ಡಾ.ಕೈಪಂಗಳ
ಗೋಪಾಲಕೃಷ್ಣ ಭಟ್, ಕುರಿಯ ಗಣಪತಿ ಶಾಸ್ತ್ರಿ, ಅಡ್ಕ ಗೋಪಾಲಕೃಷ್ಣ ಭಟ್, ಈಳಂತಕೋಡಿ ವೆಂಕಪ್ಪ ಭಟ್, ಡಾ.ಗಣಪತಿ ಭಟ್ ಕುಳಮರ್ವ, ಸಂಕರ ಭಟ್ ಬಾಲ್ಯ, ಡಾ.ವಸಂತಿ ಕೆ.,
ವೇ.ಮೂ.ತಿರುಮಲೇಶ್ವರ ಭಟ್ ಮಿತ್ತೂರು, ಪಾರ್ವತಿ ಎಂ.ಭಟ್, ವಿಷ್ಣು ಗಣಪತಿ ಭಟ್, ವಿದುಷಿ ಶಾಲಿನಿ ಆತ್ಮಭೂಷಣ್, ಸುಧಾ ಕೆ.ಟಿ.ಭಟ್, ಮುರಳೀಧರ ಕೆ., ಮೀರಾ ಮುರಳೀಧರ
ಹಾಗೂ ದಿನೇಶ ಪ್ರಸನ್ನ ಕರಿಯಾಲ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಸಂಯೋಜಕ ಶಂಕರ ಭಟ್, ಅಖಿಲ ಹವ್ಯಕ ಮಹಾಸಭಾ ನಿರ್ದೇಶಕ ಬೋನಂತಾಯ ಶಿವಶಂಕರ ಭಟ್, ದ್ವಾರಕ ಕನ್‌ಸ್ಟ್ರಕ್ಷನ್‌ನ ಗೋಪಾಲಕೃಷ್ಣ ಭಟ್, ನಗರ ಸಭಾ ಸದಸ್ಯೆ ವಿದ್ಯಾಗೌರಿ, ನಿವೃತ್ತ ಮುಖ್ಯಗುರು ಶಿವರಾಮ ಭಟ್ ನೆಡ್ಲೆ, ವಿದ್ವಾನ್ ಕೆ.ವಿ.ರಮಣ್ ಮತ್ತಿತರರು ಇದ್ದರು.