ಕಡಬ: ಕಸ್ತೂರಿರಂಗನ್ ವರದಿ ವಿರೋಧಿಸಿ ಗುಂಡ್ಯದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಈ ಭಾಗದ ಜನರ ಭವಿಷ್ಯದ ಮೇಲಾಗುವ ಪರಿಣಾಮಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಅವರು ಕರೆ ನೀಡಿದ್ದಾರೆ.
ವರದಿ ಜಾರಿಗೆ ತುದಿಕಾಲಲ್ಲಿ ನಿಂತಿರುವ ವ್ಯವಸ್ಥೆಯ ವಿರುದ್ದ ನಾವು ಸಂಘಟಿತವಾಗಿ ಹೋರಾಟ ಮಾಡಬೇಕಾಗಿತ್ತು ಈ ಹಿನ್ನಲೆಯಲ್ಲಿ ನ.15ರಂದು ಗುಂಡ್ಯದಲ್ಲಿ ನಡೆಯುವ ಬೃಹತ್ ಪ್ರತಿಭಟನೆಗೆ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಸಂಪೂರ್ಣ ಬೆಂಬಲ ಇದ್ದು, ಸಮುದಾಯದವರು ಒಂದು ದಿನದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ ಮಾಡಿಕೊಳ್ಳುವುದಾಗಿ ಸುರೇಶ್ ಬೈಲು ಅವರು ಹೇಳಿದ್ದಾರೆ.