ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ-ಬಿಲ್ಲವ ಸಂಚಲನ ಸಮಿತಿಯ ಸಂಚಾಲಕ ಸತೀಶ್.ಕೆ. ಮನವಿ

0

ಕಡಬ: ಪಶ್ಚಿಮ ಘಟ್ಟದ ತಪ್ಪಲಿನ ಅಂಚಿನಲ್ಲಿರುವ ಗ್ರಾಮಗಳಿಗೆ ಹಾಗೂ ರೈತರ ಕೃಷಿ ಜಾಗಗಳಿಗೆ ಕಸ್ತೂರಿ ರಂಗನ್ ವರದಿಯಿಂದ ಆಗುವ ತೊಂದರೆಗಳ ವಿರುದ್ಧ ಮಲೆನಾಡು ಜನ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನವೆಂಬರ್ 15 ರಂದು ಗುಂಡ್ಯದಲ್ಲಿ ನಡೆಯಲಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಕಡಬ ತಾಲೂಕು ಬಿಲ್ಲವ ಸಂಚಾಲನ ಸಮಿತಿಯ ಪ್ರಧಾನ ಸಂಚಾಲಕರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕೆ ಐತ್ತೂರು ತಿಳಿಸಿದರು.


ಹತ್ತು ಹಲವರು ಸಮಸ್ಯೆಗಳಿಂದ ನಮ್ಮ ರೈತರು ಮಾನಸಿಕ ಹಿಂಸೆಗೆ ಒಳಗಾಗುತ್ತಿದ್ದಾರೆ ಅದರಲ್ಲಿ ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ,ಪಶ್ಚಿಮ ಘಟ್ಟ ಮತ್ತು ಜನವಸತಿ ಕೇಂದ್ರಗಳ ಗಡಿ ಗುರುತು ಆಗದೇ ಇರುವುದು, ಪ್ಲಾಟಿಂಗ್ ಸಮಸ್ಯೆ ಹಾಗೂ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ಆಗದೇ ಇರುವುದು, ಈ ಎಲ್ಲಾ ಸಮಸ್ಯೆಗಳಿಂದ ರೈತರ ಬದುಕು ತ್ರಿಶಂಕು ಲೋಕದಲ್ಲಿ ಇದೆ. ಆದುದ್ದರಿಂದ ಎಲ್ಲ ರೈತರು, ಭಾಧಿತ ಗ್ರಾಮಸ್ಥರು ಸಂಘ-ಸಂಸ್ಥೆಗಳು ಪಕ್ಷಾತೀತವಾಗಿ,ಧರ್ಮತೀತವಾಗಿ ಈ ಹೋರಾಟಕ್ಕೆ ಬೆಂಬಲ ಕೊಡಬೇಕಾಗಿ ಕೇಳಿಕೊಳ್ಳುತ್ತೇನೆ. ರೈತರಿಗೆ ಮಾನಸಿಕ ಒತ್ತಡ ಕೊಡುವಂತ ಈ ಸಮಸ್ಯೆಗಳಿಗೆ ತಾರ್ಕಿಕವಾದ ಅಂತ್ಯ ಕಾಣುವ ತನಕ ಹೋರಾಟ ಮುಂದುವರಿಸಬೇಕಾಗಿದೆ. ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಕೊಡಬೇಕಾಗಿ, ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here