ಪುತ್ತೂರಿಗೆ ರೂ. 15.77 ಕೋಟಿ ಬಿಡುಗಡೆಯಾಗಿದೆ-ಅಶೋಕ್ ಕುಮಾರ್ ರೈ
ಪುತ್ತೂರು:ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ, ಕಾಳುಮೆಣಸಿಗೆ ಬೆಳೆ ವಿಮೆ ಬರುವುದಿಲ್ಲ ಎಂಬ ಗೊಂದಲ ಸೃಷ್ಟಿಯಾಗಿತ್ತು.ಆದರೆ ಇವತ್ತು ಸರಕಾರದಿಂದ ಅತ್ಯಂತ ಹೆಚ್ಚಿನ ಬೆಳೆ ವಿಮೆ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದೆ.ಅದರಲ್ಲೂ ಪುತ್ತೂರಿಗೆ ರೂ.15,77,18,339 ಹಣ ಬಿಡುಗಡೆಯಾಗಿ ಹಣ ರೈತರ ಖಾತೆಗೆ ಜಮೆ ಆಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಹೇಳಿದ್ದಾರೆ.
ಅಡಿಕೆ ಮತ್ತು ಕಾಳುಮೆಣಸಿಗೂ ಬೆಳೆ ವಿಮೆ ನೀಡಬೇಕೆಂದು ಮುಖ್ಯಮಂತ್ರಿ, ತೋಟಗಾರಿಕೆ ಮಂತ್ರಿಯವರಲ್ಲಿ ಮಾತನಾಡಿದ ಬಳಿಕ ಬೆಳೆ ವಿಮೆಯನ್ನು ಸರಕಾರ ಕೊಡುವಂತಹ ಕೆಲಸ ಮಾಡಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೂ.157,00,36,316 ಕ್ಲೈಮ್ ಆಗಿದೆ.ಅದರಲ್ಲಿ ರೂ. 69,44,10,846 ವಿಮೆ ಬಂದಿದೆ.ಅತ್ಯಂತ ಹೆಚ್ಚಿನ ವಿಮೆ ಬಂದಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಎಂದ ಶಾಸಕರು, ಬೆಳೆ ವಿಮೆಗೆ ಸುಮಾರು ಶೇ.70 ರಾಜ್ಯ ಸರಕಾರ, ಶೇ.30 ಕೇಂದ್ರ ಸರಕಾರ ನೀಡುತ್ತದೆ.ಆದರೆ ಎಲ್ಲೋ ಒಂದು ಕಡೆ ಬೆಳೆ ವಿಮೆಗೆ ರಾಜ್ಯ ಸರಕಾರದ ದೊಡ್ಡ ಪಾಲು ಇದೆ ಎಂಬುದು ಜನರಿಗೆ ತಲುಪಿಲ್ಲ.ಇವತ್ತು ಬೆಳೆ ವಿಮೆಯಿಂದ ಭವಿಷ್ಯದಲ್ಲಿ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಾರರು ಸಮಾಧಾನಕರ ರೀತಿಯಲ್ಲಿ ನಿಟ್ಟುಸಿರು ಬಿಡುವಲ್ಲಿ ರಾಜ್ಯ ಸರಕಾರ ಮಹತ್ವದ ಕೆಲಸ ಮಾಡಿದೆ.ಕೆಲವು ರೈತರು ಈ ಬಾರಿ ಬೆಳೆವಿಮೆಯಿಂದ ಸುಮಾರು ರೂ.19ರಿಂದ 20 ಲಕ್ಷದಷ್ಟು ಪ್ರಯೋಜನ ಪಡೆದಿದ್ದಾರೆ.ಪುತ್ತೂರು ತಾಲೂಕಿಗೆ ರೂ.28,85,77,806 ಕ್ಲೈಮ್ ಆಗಿದೆ.ಅದರಲ್ಲಿ ರೂ.15,77,18,339 ಬಿಡುಗಡೆಯಾಗಿದೆ.ಕಡಬಕ್ಕೆ ರೂ.19,89,48,130 ಕ್ಲೈಮ್ ಆಗಿದೆ.ಅದರಲ್ಲಿ ರೂ.16,75,55,150 ಬಿಡುಗಡೆಯಾಗಿದೆ.ಸುಳ್ಯದಲ್ಲಿ ರೂ. 30, 70,81,228 ಕ್ಲೈಮ್ ಆಗಿದೆ.ಅದರಲ್ಲಿ ರೂ.18,54,73,871 ಬಿಡುಗಡೆಯಾಗಿದೆ.ಬೆಳ್ತಂಗಡಿಯಲ್ಲಿ ರೂ.46,00,17,747 ಕೋಟಿ ಕ್ಲೈಮ್ ಆಗಿದೆ.ಅದರಲ್ಲಿ ರೂ.12,68,30,370 ಬಿಡುಗಡೆಯಾಗಿದೆ.ಉಳ್ಳಾಲದಲ್ಲಿ ರೂ.28,00,6,708 ಕ್ಲೈಮ್ ಹಣ ಪೂರ್ಣ ಬಿಡುಗಡೆಯಾಗಿದೆ.ಮೂಲ್ಕಿಯಲ್ಲೂ ರೂ.15,003,654 ಹಣ ಪೂರ್ಣ ಬಿಡುಗಡೆಯಾಗಿದೆ.ಹೀಗೆ ಅತ್ಯಂತ ಹೆಚ್ಚಿನ ವಿಮೆ ದಕ್ಷಿಣ ಕನ್ನಡ ಜಿಲ್ಲೆಗೆ ಬಿಡುಗಡೆಯಾಗಿದೆ.ಕಳೆದ ವರ್ಷ ಶೇ.60 ಮಾತ್ರ ಬಿಡುಗಡೆಯಾಗಿತ್ತು.ಮುಂದಿನ ದಿನ ರೇಶಿಯೋ ಇನ್ನಷ್ಟು ಕಡಿಮೆ ಆಗುವ ಸಾಧ್ಯತೆ ಇದೆ.ಕಳೆದ ಬಾರಿಯೇ ಅಡಿಕೆಯನ್ನು ಬೆಳೆ ವಿಮೆಯಿಂದ ಕೈ ಬಿಡುವ ವಿಚಾರ ಇತ್ತು.ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಸಕರು ಒಟ್ಟಾಗಿ ಹೋಗಿ ಮನವಿ ಮಾಡಿದ ಬಳಿಕ ಅಡಿಕೆಗೂ ಬೆಳೆ ವಿಮೆಗೆ ಅವಕಾಶ ನೀಡಿತ್ತು.ಮುಂದಿನ ವರ್ಷಕ್ಕೂ ಈ ಬಜೆಟನ್ನೇ ಮುಂದುವರಿಸುವಂತೆ ಮನವಿ ಮಾಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.
ಬೆಳೆ ವಿಮೆಗೆ ಸುಮಾರು ಶೇ.70 ರಾಜ್ಯ ಸರಕಾರ, ಶೇ.30 ಕೇಂದ್ರ ಸರಕಾರ ನೀಡುತ್ತದೆ.ಆದರೆ ಎಲ್ಲೋ ಒಂದು ಕಡೆ ಬೆಳೆ ವಿಮೆಗೆ ರಾಜ್ಯ ಸರಕಾರದ ದೊಡ್ಡ ಪಾಲು ಇದೆ ಎಂಬುದು ಜನರಿಗೆ ತಲುಪಿಲ್ಲ.